See also 2rock  3rock  4rock
1rock ರಾಕ್‍
ನಾಮವಾಚಕ
  1. ಬಂಡೆ; ಶಿಲೆ; ಅರೆ:
    1. ಭೂಮಿಯ ಮೇಲೆ ಕಾಣಿಸಿಕೊಳ್ಳುವ ಯಾ ಮಣ್ಣಿನ ಕೆಳಗೆ ಇರುವ, ಭೂಮಿಯ ಮೇಲ್ಪದರದ ಗಟ್ಟಿ ಪದಾರ್ಥ: they dug down to the living rock ತಳಬಂಡೆಯವರೆಗೂ ಅಗೆದರು; ಕೆಳಗೆ ಬಂಡೆ ಸಿಗುವವರೆಗೂ ಅಗೆದರು.
    2. ಇತರ ಗ್ರಹಗಳ ಮೇಲಿರುವ ಅಂಥದೇ ಪದಾರ್ಥ.
  2. (ಬೆಟ್ಟದಂತೆ ನೆಲದಿಂದ ಯಾ ಸಮುದ್ರದಿಂದ ಎದ್ದಿರುವ) ಕಡಿದು ಬಂಡೆ; ಕಲ್ಲು ಬೆಟ್ಟ.
  3. ಕಲ್ಲು ಪದಾರ್ಥ: a mass of rock ಕಲ್ಲು ಮುದ್ದೆ.
  4. ಗುಂಡುಕಲ್ಲು; ದುಂಡಿ; ಕಲ್ಲು ಗುಂಡು; ಬಂಡೆ.
  5. (ಭೂವಿಜ್ಞಾನ) ಖನಿಜ ಶಿಲೆ; ಖನಿಜಗಳನ್ನೊಳಗೊಂಡಿರುವ, (ಗಟ್ಟಿಯಾಗಿರುವ ಯಾ ಮೆತ್ತಗಿರುವ) ಯಾವುದೇ ನೈಸರ್ಗಿಕ ಘನ ಪದಾರ್ಥ, ಉದಾಹರಣೆಗೆ ಜೇಡಿ.
  6. (ಅಮೆರಿಕನ್‍ ಪ್ರಯೋಗ) ಯಾವುದೇ ಗಾತ್ರದ ಕಲ್ಲು.
  7. ಬಂಡೆ; ಕಲ್ಲುಬಂಡೆ; ಸ್ಥಿರವಾದ, ನಂಬಬಹುದಾದ ಆಸರೆ ಯಾ ರಕ್ಷಣೆ.
  8. ಅಪಾಯದ ಯಾ ವಿನಾಷದ–ಮೂಲ, ಆಕರ, ಕಾರಣ.
  9. (ಬ್ರಿಟಿಷ್‍ ಪ್ರಯೋಗ) ಕಲ್ಲು ಮಿಠಾಯಿ; ಗಟ್ಟಿಯಾದ, ಉರುಳೆಯಾಕಾರದ ಮಿಠಾಯಿ, ಪೆಪ್ಪರ್‍ಮೆಂಟು.
  10. (ಬಹುವಚನದಲ್ಲಿ) (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಹಣ.
  11. (ಅಶಿಷ್ಟ) ಪ್ರಶಸ್ತ ಶಿಲೆ; ಮಣಿ; ರತ್ನ, ಮುಖ್ಯವಾಗಿ ವಜ್ರ
  12. (ಅಶಿಷ್ಟ) ಕೊಕೇನಿನ ಗಟ್ಟಿ ತುಂಡು.
  13. (ಬಹುವಚನದಲ್ಲಿ) (ಅಶಿಷ್ಟ) ವೃಷಣಗಳು; ತರಡು ಬೀಜಗಳು.
ಪದಗುಚ್ಛ
  1. bed-rock ಹುಸಿಮಣ್ಣಿನ ತಳದಲ್ಲಿರುವ ತಳಬಂಡೆ; ಆಧಾರಶಿಲೆ.
  2. blue rock = rock-pigeon.
  3. built(or founded) on the rock ಗಟ್ಟಿ ತಳಹದಿಯ ಮೇಲೆ ಕಟ್ಟಿದ; ಬುಡ ಭದ್ರವಾಗಿ ಸ್ಥಾಪಿಸಿದ; ದೃಢವಾಗಿ ಕಟ್ಟಿದ (ರೂಪಕವಾಗಿ ಸಹ).
  4. get one’s rocks off (ಅಶಿಷ್ಟ)
    1. ಲೈಂಗಿಕ ತೃಪ್ತಿ ಪಡೆ , ಹೊಂದು.
    2. ಸುಖ ಪಡೆ, ಆನಂದ ಹೊಂದು.
  5. on the rocks (ಆಡುಮಾತು)
    1. ಹಣಕಾಸಿನ ತೊಂದರೆಯಿರುವ; ಕಷ್ಟದಲ್ಲಿರುವ.
    2. ಮುರಿದು ಹೋದ; ಒಡೆದು ಹೋದ; ಭಗ್ನ(ವಾದ).
    3. (ಮದ್ಯದ ವಿಷಯದಲ್ಲಿ) ನೀರು ಮೊದಲಾದವನ್ನು ಸೇರಿಸಿ ತೆಳುವಾಗಿಸದೆ, ಐಸ್‍ ಗಡ್ಡೆಗಳನ್ನು ಸೇರಿಸಿ – ಒದಗಿಸಿದ, ಕೊಟ್ಟ.
  6. Rock of ages ಯೇಸುಕ್ರಿಸ್ತ.
  7. run upon the rocks (ಹಡಗು) ಬಂಡೆಗೆ ಹೊಡೆದು ಒಡೆದುಹೋಗು. (ರೂಪಕವಾಗಿ ಸಹ)
  8. see rocks ahead (ಹಡಗು) ಬಂಡೆಗೆ ಹೊಡೆದು ಒಡೆದುಹೋಗುವ ಅಪಾಯದ ಸಂಭವವಿರು (ರೂಪಕವಾಗಿ ಸಹ).
  9. the Rock (1400 ಅಡಿಗಳ ಎತ್ತರದ ಒಂದೇ ಬಂಡೆಯಾಗಿ ಎದ್ದಿರುವ) ಜಿಬ್ರಾಲ್‍ಟರ್‍ (ಬೆಟ್ಟ, ಬಂಡೆ).