See also 1return  2return
3return ರಿಟರ್ನ್‍
ಗುಣವಾಚಕ
  1. ಹಿಂದಿರುಗುವ; ವಾಪಸ್ಸಾಗುವ; ಮರಳುವ: the return trip ವಾಪಸು ಪ್ರಯಾಣ.
  2. ಹಿಂದಕ್ಕೆ–ಕಳುಹಿಸಿದ, ಕೊಟ್ಟ; ವಾಪಸ್ಸು ಮಾಡಿದ: a return shot ವಾಪಸು ಹೊಡೆತ.
  3. ಪ್ರತಿಯಾಗಿ ಮಾಡಿದ: return match (ಹಿಂದೆ ಆಡಿದ ಆಟಗಾರರೇ ಮತ್ತೆ ಆಡುವ) ಮರು ಪಂದ್ಯ; ಎದುರು ಮ್ಯಾಚು; ರಿಟರ್ನ್‍ ಮ್ಯಾಚು.
  4. ವಾಪಸು ಮಾಡುವ; ವಾಪಸಾಗುವ: return cargo ವಾಪಸು ಮಾಡುವ ಯಾ ಆಗುವ ಸರಕು.
  5. ಹಿಂಬಾಗಿನ; ಹಿಂದಕ್ಕೆ ತಿರುಗುವ: a return pipe ಹಿಂಬಾಗಿನ ನಳಿಕೆ: a return bend in the road ರಸ್ತೆಯಲ್ಲಿ ಹಿಂದಕ್ಕೆ ತಿರುಗಿದ ತಿರುವು.
  6. ಹಿಂದಿರುಗಲು ಬಳಸುವ: the return road ಹಿಂದಿರುಗುವ ರಸ್ತೆ.
  7. ವಾಪಸುಮಾಡಲು–ಬೇಕಾದ, ಸಾಕಷ್ಟಿರುವ, ಒದಗಿಸಿರುವ: return postage ವಾಪಸು ಅಂಚೆವೆಚ್ಚ; ಕಾಗದ ಮೊದಲಾದವುಗಳನ್ನು ವಾಪಸುಮಾಡಲು ತಗಲುವ ಅಂಚೆ ಹಣ, ಸ್ಟಾಂಪು. my return fare ವಾಪಸು ಹಣ; ವಾಪಸಾಗಲು ಬೇಕಾದ ಪ್ರಯಾಣಧನ.