See also 1return  3return
2return ರಿಟರ್ನ್‍
ನಾಮವಾಚಕ
  1. ಹಿಂದಿರುಗುವುದು; ಮರಳುವುದು; ವಾಪಸಾಗುವುದು; ಹಿಂದಕ್ಕೆ–ಹೋಗುವುದು, ಬರುವುದು; ಪುನರಾಗಮನ; ಪ್ರತ್ಯಾಗಮನ: his return was the signal for the riots ಅವನ ಪುನರಾಗಮನ ದೊಂಬಿಗಳಿಗೆ ಸೂಚನೆಯಾಯಿತು. a return of the symptoms ಚಿಹ್ನೆಗಳು ಮರಳಿ ಕಾಣಿಸಿಕೊಳ್ಳುವಿಕೆ. died on the return journey ವಾಪಸು ಪ್ರಯಾಣದಲ್ಲಿ ಸತ್ತ.
  2. (ಬ್ರಿಟಿಷ್‍ ಪ್ರಯೋಗ) (ಒಂದು ಸ್ಥಳಕ್ಕೆ ಹೋಗಿ ವಾಪಸು ಬರಲು ಕೊಳ್ಳುವ) ವಾಪಸು ಟಿಕೆಟ್ಟು.
  3. (ವಾಸ್ತುಶಿಲ್ಪ) (ಕಟ್ಟಡದ) ಹಿಂತಿರುವು; ವಾಪಸು ಭಾಗ; ಕಟ್ಟಡದ ಮುಮ್ಮುಖದಿಂದ ಮನೆಯ ಪಕ್ಕದಲ್ಲಿ ಯಾ ಕಿಟಕಿಗೂಡಿನಲ್ಲಿ ಆಗುವಂತೆ, ಹಿಂದಕ್ಕೆ ಸಮಕೋನದಲ್ಲಿ ಸರಿದಿರುವ ಭಾಗ: return angle ವಾಪಸು ಕೋನ.
  4. (ವಾಸ್ತುಶಿಲ್ಪ) ಕಪೋತದ ಯಾ ಲೋವೆಕಲ್ಲಿನ ಯಾ ಚಜ್ಜದ–ಏಣು, ತುದಿ; ಮಳೆನೀರು ಗೋಡೆ ಮೊದಲಾದವುಗಳಿಗೆ ಬೀಳದಂತೆ ತಡೆಯುವ ಚಾಚಿನ ಅಂಚು, ತುದಿ.
  5. (ಏಕವಚನ ಯಾ ಬಹುವಚನದಲ್ಲಿ, ಒಂದು ಉದ್ಯಮದ) ಹುಟ್ಟುವಳಿ; ಆದಾಯ; ಲಾಭ; ನಫೆ: the returns were large ಹುಟ್ಟುವಳಿ ಅಧಿಕವಾಗಿತ್ತು. brings an adequate return ತಕ್ಕ ಲಾಭವನ್ನು ತರುತ್ತದೆ.
  6. ಹಿಂದಿರುಗಿಸುವುದು; ವಾಪಸು ಮಾಡುವುದು; ವಾಪಸಾತಿ; ಹಿಂದಕ್ಕೆ, ಪ್ರತಿಯಾಗಿ–ಕೊಡುವುದು, ಕಳುಹಿಸುವುದು, ಇಡುವುದು, ಸಲ್ಲಿಸುವುದು: must ask for the return of the loan ಸಾಲದ ಪಾವತಿಯನ್ನು ಕೇಳಬೇಕು.
  7. ಹಿಂದಿರುಗಿಸಿದ್ದು; ವಾಪಸು ಮಾಡಿದ್ದು.
  8. (ಕ್ರಿಕೆಟ್‍ ಮೊದಲಾದವುಗಳಲ್ಲಿ ಚೆಂಡನ್ನು) ಹಿಂದಕ್ಕೆ–ಕಳುಹಿಸುವುದು, ಹೊಡೆಯುವುದು, ಎಸೆಯುವುದು: fielder has a good return (ಕ್ರಿಕೆಟ್‍ ಆಟಗಾರನ) ಹಿಂದೆಸೆತ ಚೆನ್ನಾಗಿದೆ.
    1. (ಇಸ್ಪೀಟಾಟದಲ್ಲಿ ಜೊತೆ ಆಟಗಾರನು ಹಾಕಿದ) ಅದೇ ರಂಗನ್ನು ಹಾಕುವುದು; ಅದೇ ಬಣ್ಣದ ಎಲೆಯ ಇಳಿತ.
    2. (ಪಟ್ಟು ತೆಗೆದುಕೊಂಡ ತರುವಾಯ) ಪುನರಿಳಿತ; ಪುನಃ ಎಲೆಹಾಕುವುದು.
  9. (ವಿದ್ಯುದ್ವಿಜ್ಞಾನ) ಪ್ರತ್ಯಾವಾಹಕ; ವಿದ್ಯುತ್‍ ಪ್ರವಾಹವನ್ನು ತಿರುಗಿ ಅದರ ಮೂಲಸ್ಥಾನಕ್ಕೆ ಕೊಂಡೊಯ್ಯುವ ಸಾಧನ.
  10. (ಆಜ್ಞೆಗೆ ಅನುಸಾರವಾಗಿ ಸಲ್ಲಿಸಿದ) ವಿಧ್ಯುಕ್ತ ವರದಿ; ಅಧಿಕೃತ ಹೇಳಿಕೆ: income tax return ವರಮಾನ ತೆರಿಗೆ ವರದಿ; ಅಧಿಕೃತವಾಗಿ ವಿಹಿತವಾದ ಪತ್ರದ ಮೂಲಕ ವರಮಾನ, ವಿನಾಯಿತಿ, ತೆರಬೇಕಾದ ಕರ ಮೊದಲಾದವುಗಳ ವರದಿ, ಹೇಳಿಕೆ.
  11. (ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ)
    1. ಒಬ್ಬ ವ್ಯಕ್ತಿಯು ಶಾಸನಸದಸ್ಯನಾಗಿ ಆಯ್ಕೆಯಾಗುವುದು.
    2. ಈ ಆಯ್ಕೆಯನ್ನು ಚುನಾವಣಾಧಿಕಾರಿಯು ಘೋಷಿಸುವುದು.
  12. (ಅದೇ ಪ್ರತಿಸ್ಪರ್ಧಿಗಳ ನಡುವೆ ನಡೆಯುವ, ಮೊದಲ ಆಟಕ್ಕೆ ಉತ್ತರವಾಗಿ ಆಡುವ) ಎರಡನೆ ಆಟ, ಮ್ಯಾಚು; ಮರು ಪಂದ್ಯ.
ಪದಗುಚ್ಛ
  1. by return (of post) ಮರು ಟಪಾಲಿನ ಮೂಲಕ; ವಾಪಸಾಗುವ ಮೊದಲನೆ ಅಂಚೆಯ ಮೂಲಕ.
  2. in return (for) ಪ್ರತಿಯಾಗಿ; ಪ್ರತಿಫಲವಾಗಿ: neglect in return for attention ನೋಡಿಕೊಂಡದ್ದಕ್ಕೆ ಪ್ರತಿಯಾಗಿ ಉಪೇಕ್ಷೆ.
  3. many happy returns (of the day) (ಹುಟ್ಟಿದ ಹಬ್ಬದ ದಿನಗಳಲ್ಲಿ ಹರಕೆಯಾಗಿ ಹೇಳುವ) ಇಂತಹ ಹಲವು ಸಂತೋಷದ ದಿನಗಳು ಮರಳಲಿ; ಇಂಥ ಹಲವು ಹಬ್ಬಗಳು ಮರಳಿ ಬರಲಿ.
  4. return crease (ಕ್ರಿಕೆಟ್‍) ವಾಪಸುಗೆರೆ; ಬೌಲು ಮಾಡುವ ಮತ್ತು ಬ್ಯಾಟು ಮಾಡುವ ಕಡೆಗಳಲ್ಲಿರುವ ಅಡ್ಡಗೆರೆ, ಅಡ್ಡಪಟ್ಟೆ.
  5. profits and quick returns (ಭಾರಿ ಮೊತ್ತದ ವ್ಯಾಪಾರವನ್ನು ಅವಲಂಬಿಸಿರುವ ಅಗ್ಗದ ಅಂಗಡಿ ಮೊದಲಾದವುಗಳ ಸೂತ್ರ) ಅಲ್ಪ ಲಾಭ, ಶೀಘ್ರ ವ್ಯಾಪಾರ; ಕಡಮೆ ಲಾಭ, ಬೇಗ ಬಿಕರಿ.