See also 2return  3return
1return ರಿಟರ್ನ್‍
ಅಕರ್ಮಕ ಕ್ರಿಯಾಪದ
  1. (ಹಿಂದಿನ ಸ್ಥಳಕ್ಕೆ) ಮರಳು; ಹಿಂದಿರುಗು; ವಾಪಸಾಗು; ವಾಪಾಸು ಬರು ಯಾ ಹೋಗು: gone never to return ವಾಪಾಸಾಗದಂತೆ ಹೊರಟುಹೋದ. return home, by the way one comes ಬಂದ ದಾರಿಯಲ್ಲೇ ಹಿಂದಕ್ಕೆ ಹೋಗು. they have returned ಅವರು ಹಿಂದಿರುಗಿದರು. (ಪ್ರಾಚೀನ ಪ್ರಯೋಗ) they are returned ಅವರು ಮರಳಿದರು.
  2. ಹಿಂದಿನ ಸ್ಥಿತಿಗೆ–ಮರಳು, ವಾಪಸಾಗು; ಮತ್ತೆ ಬರು ಯಾ ಹೋಗು: I shall return to the subject ಈ ವಿಷಯಕ್ಕೆ ಮತ್ತೆ ಬರುತ್ತೇನೆ. unto dust shalt thou return ನೀನು ಮಣ್ಣಿಗೆ ಮರುಳುತ್ತೀಯೆ. return to one’s old habits (ಒಬ್ಬನ) ಹಳೆಯ ಅಭ್ಯಾಸಗಳಿಗೆ ವಾಪಸಾಗು; ಹಳೆಯ ಚಾಳಿಗಳನ್ನು ಮತ್ತೆ ಪ್ರಾರಂಭಿಸು.
ಸಕರ್ಮಕ ಕ್ರಿಯಾಪದ
  1. ಹಿಂದಿರುಗಿಸು; ವಾಪಸುಮಾಡು; ಹಿಂದಕ್ಕೆ, ಪ್ರತಿಫಲವಾಗಿ, ಪ್ರತಿಯಾಗಿ–ತರು, ಒಯ್ಯಿ, ಕೊಡು, ನೀಡು, ಇಡು, ಕಳುಹಿಸು, ಸಲ್ಲಿಸು: fish must be returned to the water ಮೀನುಗಳನ್ನು ಮತ್ತೆ ನೀರಿಗೆ ಒಯ್ಯಬೇಕು. return borrowed book (or money) ಎರವಲು ತಂದ ಪುಸ್ತಕವನ್ನು (ಯಾ ಹಣವನ್ನು) ಹಿಂದಿರುಗಿಸು. return undelivered letter to sender ಬಟವಾಡೆಯಾಗದ ಪತ್ರವನ್ನು ಕಳುಹಿಸಿದವನಿಗೇ ವಾಪಸು ಮಾಡು. return sword to the scabbard ಕತ್ತಿಯನ್ನು ಮತ್ತೆ ಒರೆಗೆ ಸೇರಿಸು. return swords (ಸೈನ್ಯ) ಕತ್ತಿಗಳನ್ನು ಒರೆಗೆ ಸೇರಿಸು. return the compliment, a blow, a visit, an answer ಅಭಿನಂದನೆ, ಹೊಡೆತ, ಭೇಟಿ, ಉತ್ತರ ಇವುಗಳಿಗೆ ಪ್ರತಿಯಾಗಿ ಅಭಿನಂದನೆ ಸಲ್ಲಿಸು, ಹೊಡೆತ ಕೊಡು, ಭೇಟಿ ನೀಡು, ಉತ್ತರಕೊಡು.
  2. (ಕ್ರಿಕೆಟ್‍, ಟೆನಿಸ್‍, ಮೊದಲಾದ ಆಟಗಳಲ್ಲಿ ಚೆಂಡನ್ನು) ಹಿಂದಕ್ಕೆ–ಹೊಡೆ, ಬಾರಿಸು, ಎಸೆ, ಮೊದಲಾದ
  3. (ಇಸ್ಪೀಟಾಟದಲ್ಲಿ)
    1. (ಹಿಂದಿನ ಆಟಗಾರ ಹಾಕಿದ) ಅದೇ ರಂಗನ್ನು ಹಾಕು; ಅದೇ ಬಣ್ಣದ ಎಲೆಯನ್ನು ಇಳಿ.
    2. (ಪಟ್ಟು ತೆಗೆದುಕೊಂಡ ಅನಂತರ) ಪುನಃ (ಎಲೆ) ಹಾಕು; ಮತ್ತೆ ಇಳಿ.
  4. (ಮುಖ್ಯವಾಗಿ ಆಜ್ಞೆಗೆ ಯಾ ವಿಧ್ಯುಕ್ತವಾದ ಕೋರಿಕೆಗೆ ಉತ್ತರವಾಗಿ) ಅಧಿಕಾರಯುತವಾಗಿ, ಅಧಿಕೃತವಾಗಿ–ತಿಳಿಸು, ಹೇಳು, ನಿರೂಪಿಸು, ನಮೂದಿಸು, ವರದಿಮಾಡು: return the details of one’s income (ತೆರಿಗೆಯ ಉದ್ದೇಶಕ್ಕಾಗಿ) ಒಬ್ಬನ ಆದಾಯದ ವಿವರಗಳನ್ನು ತಿಳಿಸು. liabilities were returned at Rs 50000 ಸಾಲಸೋಲಗಳು ರೂ 50000 ಇವೆ ಎಂದು ನಮೂದಿಸಲಾಯಿತು. were all returned unfit for work ಕೆಲಸಕ್ಕೆ ಎಲ್ಲರೂ ನಾಲಾಯಕ್ಕೆಂದು ವರದಿ ಮಾಡಲಾಯಿತು. the prisoner was returned guilty ಕೈದಿಯು ತಪ್ಪಿತಸ್ಥನೆಂದು ಹೇಳಲಾಯಿತು. the judge returned a verdict of guilty ತಪ್ಪಿತಸ್ಥ ಎಂಬ ತೀರ್ಪನ್ನು ನ್ಯಾಯಾಧೀಶನು ಘೋಷಿಸಿದನು.
  5. (ಚುನಾವಣೆಗಾರರ ವಿಷಯದಲ್ಲಿ, ಶಾಸನಸಭಾಸದಸ್ಯ ಮೊದಲಾದವರನ್ನಾಗಿ) ಚುನಾಯಿಸು; ಆರಿಸು; ಆಯ್ಕೆಮಾಡು.
  6. (ವಾಸ್ತುಶಿಲ್ಪ) (ಕಟ್ಟಡದ ಗೋಡೆ ಮೊದಲಾದವನ್ನು ಅವು ಸರಿಯುತ್ತಿದ್ದ ದಿಕ್ಕಿಗಿಂತ) ಬೇರೆ ದಿಕ್ಕಿನಲ್ಲಿ (ಮುಖ್ಯವಾಗಿ ಅದಕ್ಕೆ ಸಮಕೋನದಲ್ಲಿ) ಮುಂದುವರೆಸು; (ಮನೆಯ ಪಕ್ಕ ಭಾಗ ಯಾ ಕಿಟಕಿಯ ತೆರಪು ಇವುಗಳಂತೆ) ಕಟ್ಟಡದ ಮುಮ್ಮುಖದಿಂದ ಹಿಂದಕ್ಕೆ ಸಮಕೋನವಾಗಿ ಹೋಗುವಂತೆ ಮುಂದುವರೆಸು.
ಪದಗುಚ್ಛ
  1. return thanks (ಮುಖ್ಯವಾಗಿ ಭೋಜನ ಸಮಯದ ಪ್ರಾರ್ಥನೆ ಮಾಡುವಾಗ ಯಾ ಸ್ವಸ್ತಿಪಾನಕ್ಕೆ, ಸಂತಾಪಸೂಚನೆಗೆ ಪ್ರತ್ಯುತ್ತರ ನೀಡುವಾಗ) ಕೃತಜ್ಞತೆ–ಸಲ್ಲಿಸು, ವ್ಯಕ್ತಪಡಿಸು.
  2. return a profit (ಪ್ರತಿಫಲವಾಗಿ) ಲಾಭ ನೀಡು, ಕೊಡು: investments return a profit ಹೂಡಿದ ಬಂಡವಾಳಗಳು (ಪ್ರತಿಫಲವಾಗಿ) ಲಾಭ ನೀಡುತ್ತವೆ.