See also 2perfect  3perfect
1perfect ಪರ್ಹಿಕ್ಟ್‍
ಗುಣವಾಚಕ
  1. ಪರಿಪೂರ್ಣ; ಸಂಪೂರ್ಣ; ಅರೆಕೊರೆಗಳಿಲ್ಲದ; ಕುಂದು ಕೊರತೆಗಳಿಲ್ಲದ: there is no perfect legal code ಪರಿಪೂರ್ಣವಾದ ನ್ಯಾಯಸಂಹಿತೆ ಎಂಬುದು ಇಲ್ಲವೇ ಇಲ್ಲ.
  2. ಶುದ್ಧ; ನಿರ್ದುಷ್ಟ; ನಿಷ್ಕಳಂಕ; ದೋಷರಹಿತ; ಕುಂದಿಲ್ಲದ: a perfect technique ನಿರ್ದುಷ್ಟವಾದ ತಂತ್ರ, ವಿಧಾನ.
  3. ಬಹಳ ತೃಪ್ತಿಕರವಾದ; ತುಂಬ ತೃಪ್ತಿದಾಯಕ: a perfect evening ಬಹಳ ತೃಪ್ತಿಕರವಾದ ಸಂಜೆ (ಕೂಟ, ಸಮಾರಂಭ, ಕಾರ್ಯಕ್ರಮ, ಚಟುವಟಿಕೆ, ಮೊದಲಾದವು).
  4. (ಕೆಲಸಕಾರ್ಯ ಮೊದಲಾದವುಗಳಲ್ಲಿ) ಚೆನ್ನಾಗಿ ನುರಿತ; ನಿಪುಣ; ಪಾರಂಗತ; ಪ್ರವೀಣ: men more perfect in the use of arms ಶಸ್ತ್ರಾಸ್ತ್ರ ನಿಪುಣರಾದ, ಶಸ್ತ್ರಗಳನ್ನು ಬಳಸುವುದರಲ್ಲೇ ಹೆಚ್ಚು ನುರಿತ – ಜನ.
  5. ನಿಖರವಾದ; ಕರಾರುವಾಕ್ಕಾದ; ನಿಷ್ಕೃಷ್ಟ(ವಾದ); ಯಥೋಚಿತ(ವಾದ); ಹೆಚ್ಚುಕಡಿಮೆಯಾಗಿರದ; ನ್ಯೂನಾತಿರೇಕವಿಲ್ಲದ: a perfect circle ಶುದ್ಧವೃತ್ತ; ಕರಾರುವಾಕ್ಕಾದ ವೃತ್ತ.
  6. ಶುದ್ಧ; ಶುದ್ಧಾಂಗ; ಪೂರ್ತ; ಪಕ್ಕಾ: perfect nonsense ಶುದ್ಧಅವಿವೇಕ. a perfect stranger ಶುದ್ಧಾಂಗವಾಗಿ ಅಪರಿಚಿತ.
  7. (ವ್ಯಾಕರಣ) (ಕಾಲವಾಚಕದ ವಿಷಯದಲ್ಲಿ) ಪೂರ್ಣವಾಚಕ; ಸಮಾಪ್ತವಾಚಕ; ವರ್ತಮಾನ ಕಾಲದ ದೃಷ್ಟಿಯಿಂದ ಪೂರ್ತಿಗೊಂಡ ಘಟನೆಯನ್ನು ಯಾ ಕಾರ್ಯವನ್ನು ಸೂಚಿಸುವ, ಉದಾಹರಣೆಗೆ have eaten.
  8. (ಸಸ್ಯವಿಜ್ಞಾನ) ಪರಿಪೂರ್ಣ:
    1. (ಹೂಗಳ ವಿಷಯದಲ್ಲಿ) ನಾಲ್ಕೂ ಬಗೆಯ ಸುತ್ತುಗಳಿರುವ.
    2. (ಶಿಲೀಂಧ್ರದ ವಿಷಯದಲ್ಲಿ) ಲೈಂಗಿಕ ಬೀಜಾಣುಗಳು ಉತ್ಪತ್ತಿಯಾಗುವ ಹಂತದಲ್ಲಿರುವ.
  9. ಪೂರ್ಣ; ಗುಣಲಕ್ಷಣಗಳು ಸಂಪೂರ್ಣವಾಗಿ ವಿಕಾಸಗೊಂಡ, ಬಲಿತ, ಅರಳಿದ: a perfect fruit ಪೂರ್ಣಫಲ.
  10. (ಸಂಗೀತ) (ಸ್ಥಾಯಿಯ ವಿಷಯದಲ್ಲಿ) ಶುದ್ಧ; ನಿಶ್ಚಿತ; ಸ್ಪಂದನದ ವೇಗದ ಆಧಾರದ ಮೇಲೆ ನಿರ್ಧರಿಸಿದ.
  11. (ಗಣಿತ) (ಸಂಖ್ಯೆಯ ವಿಷಯದಲ್ಲಿ) ಪರಿಪೂರ್ಣ; ತನ್ನ ಎಲ್ಲ ಅಪವರ್ತನಗಳ ಮೊತ್ತಕ್ಕೆ ಸಮವಾಗಿರುವ.
ಪದಗುಚ್ಛ
  1. perfect binding ಪೂರ್ಣ – ಬೈಂಡಿಂಗ್‍, ರಟ್ಟು ಕಟ್ಟುವಿಕೆ; ಪುಸ್ತಕದ ಹಾಳೆಗಳನ್ನು ಹೊಲಿಯದೆ ಬೆನ್ನಿಗೆ ಅಂಟಿಸಿ ಮಾಡುವ ಬೈಂಡಿಂಗು, ರಟ್ಟು ಕಟ್ಟುವಿಕೆ.
  2. perfect pitch = absolute pitch (1).