See also 2passage
1passage ಪ್ಯಾಸಿಜ್‍
ನಾಮವಾಚಕ
  1. (ಎಡೆಯಿಂದೆಡೆಗೆ) ಹೋಗುವುದು; ಸಾಗುವುದು; ಸಾಗಣೆ.
  2. ಸ್ಥಿತ್ಯಂತರ; ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ದಾಟುವುದು.
  3. ಹಾದುಹೋಗುವ ಸ್ವಾತಂತ್ರ್ಯ, ಹಕ್ಕು; ಮಾರ್ಗಾಧಿಕಾರ.
  4. ಸಮುದ್ರಯಾನ ಯಾ ವಾಯುಯಾನ; ಸಮುದ್ರದ ಯಾ ಆಕಾಶದ ಮೂಲಕ ಹಾದುಹೋಗುವುದು.
  5. ಹಡಗು ಯಾ ವಿಮಾನ ಪ್ರಯಾಣದ ಹಕ್ಕು; ಹಡಗು ಪ್ರಯಾಣಿಕನಾಗಿ, ಸಮುದ್ರ ಪ್ರಯಾಣಿಕನಾಗಿ, ಒಯ್ಯಲ್ಪಡುವ ಹಕ್ಕು.
  6. ಮಸೂದೆಯನ್ನು ಕಾನೂನು ಆಗಿಸುವುದು; ಮಸೂದೆಯ ಅಂಗೀಕಾರ.
  7. (ವ್ಯಕ್ತಿ) ಹಾದುಹೋಗುವ ಮಾರ್ಗ, ದಾರಿ.
  8. = passageway.
  9. (ಬಹುವಚನದಲ್ಲಿ) (ಇಬ್ಬರ ನಡುವಣ) ಪರಸ್ಪರ ನಡವಳಿಕೆ.
  10. ಪರಸ್ಪರವಾಗಿ ಗುಟ್ಟು ಹೇಳಿಕೊಳ್ಳುವುದು; ಆಂತರ್ಯ ವಿನಿಮಯ ಮೊದಲಾದವು.
  11. (ಅನೇಕ ವೇಳೆ ರೂಪಕವಾಗಿ) ಹೋರಾಟ; ಬಡಿದಾಟ; ಕದನ; ಕಾಳಗ.
  12. (ಪುಸ್ತಕ ಮೊದಲಾದವುಗಳ) ಚಿಕ್ಕಭಾಗ: famous passage ಪ್ರಸಿದ್ಧ (ಉದ್ಧೃತ) ಭಾಗ.
  13. (ಸಂಗೀತ ಕೃತಿಯ) ನಿರ್ದಿಷ್ಟ ಭಾಗ.
  14. (ಅಂಗರಚನಾಶಾಸ್ತ್ರ) ದೇಹದ ಸಾಗುನಾಳ.
ಪದಗುಚ್ಛ
  1. passage of (or at) arms = 1passage\((11)\).
  2. work one’s passage (ಒಂದಕ್ಕಾಗಿ) ದುಡಿದು ಹಕ್ಕನ್ನು ಸಂಪಾದಿಸು.