See also 1over  2over  3over
4over ಓವರ್‍
ಉಪಸರ್ಗ
  1. (ತಲೆಯ) ಮೇಲೆ; ಮೇಲ್ಗಡೆ; ಎತ್ತರದಲ್ಲಿ: with an umbrella over his head ತಲೆಯ ಮೇಲೆ ಕೊಡೆ ಹಿಡಿದುಕೊಂಡು.
  2. ಮೇಲೆ; ಮುಚ್ಚುವಂತೆ: with his hat pulled over his eyes ಹ್ಯಾಟನ್ನು ಕಣ್ಣುಗಳ ಮೇಲೆಳೆದುಕೊಂಡು.
  3. ಮೇಲೆ; ಉದ್ದಕ್ಕೂ: projects over the street ಬೀದಿಯ ಮೇಲೆ ಉದ್ದಕ್ಕೂ ಚಾಚಿದೆ, ಕವಿದಿದೆ.
  4. ಮೇಲೆ; ಎಲ್ಲೆಡೆ; ಎಲ್ಲೆಲ್ಲೂ: rice is grown all over India ಭಾರತದ ಎಲ್ಲಡೆ ಬತ್ತವನ್ನು ಬೆಳೆಯುತ್ತಾರೆ. you may travel over Europe ಯೂರೋಪಿನಲ್ಲಿ ನೀವು ಎಲ್ಲೆಲ್ಲೂ ಸಂಚರಿಸಬಹುದು. the world over ಇಡೀ ಪ್ರಪಂಚದಲ್ಲಿ; ಪ್ರಪಂಚದಲ್ಲೆಲ್ಲ; ಪ್ರಪಂಚದಲ್ಲಿ ಎಲ್ಲೆಲ್ಲೂ.
  5. ಸುತ್ತಲೂ: sitting over the fire ಬೆಂಕಿಗೂಡಿನ ಸುತ್ತಲೂ ಕುಳಿತು.
  6. (ವಿಷಯವನ್ನು) ಕುರಿತು; ವಿಷಯದ ಬಗೆಗೆ: pause over the details ವಿವರಗಳನ್ನು ಕುರಿತು (ತಡೆದು ನಿಧಾನವಾಗಿ) ಪರ್ಯಾಲೋಚಿಸು.
  7. ಕೆಲಸ ಇಟ್ಟುಕೊಂಡು; ಕೆಲಸದ ಮೇಲೆ; ಕೆಲಸದಲ್ಲಿ ತೊಡಗಿ: go to sleep over one’s work ಕೆಲಸವನ್ನು ಮಾಡುತ್ತಾ (ಮುಗಿಸದೆ) ನಿದ್ದೆಹೋಗು.
  8. (ಒಬ್ಬನಿಗಿಂತ ಯಾ ಒಂದಕ್ಕಿಂತ) ಮೇಲ್ಮೆ ಯಾ ಪ್ರಾಶಸ್ತ್ಯ, ಆದ್ಯತೆ–ಹೊಂದಿ ಯಾ ಕೊಟ್ಟು: give me the preference over him ಅವನಿಗಿಂತ ಮೊದಲು ನನಗೆ ಆದ್ಯತೆ ಕೊಡು. set him over the rest ಉಳಿದೆಲ್ಲರಿಗಿಂತ ಅವನನ್ನು ಮೇಲಿಡು, ಅವನಿಗೆ ಮೇಲಿನ ಸ್ಥಾನ ಯಾ ಅಧಿಕಾರ ಕೊಡು.
  9. ಮೀರಿ; ಹೆಚ್ಚಾಗಿ; ಮೇಲ್ಪಟ್ಟು: it cost over Rs. 1000 ಅದಕ್ಕೆ 1000 ರೂಪಾಯಿಗಳಿಗೂ ಮೀರಿ ಬೆಲೆಯಾಯಿತು. over twenty million ಇಪ್ಪತ್ತು ಮಿಲಿಯಕ್ಕಿಂತಲೂ ಹೆಚ್ಚಾಗಿ.
  10. ಮೇಲೆ; ಮೇಲಧಿಕಾರ ಹೊಂದಿ: jurisdiction over the whole area ಆ ಇಡೀ ಪ್ರದೇಶದ ಮೇಲೆ ಅಧಿಕಾರವ್ಯಾಪ್ತಿ. he won a victory over his rivals ಅವನು ತನ್ನ ಪ್ರತಿಸ್ಪರ್ಧಿಗಳ ಮೇಲೆ ಜಯಗಳಿಸಿದ. command over oneself ತನ್ನ ಮೇಲೆ ಹತೋಟಿ; ಆತ್ಮಸಂಯಮ.
  11. ಮೇಲಿಂದ ಆಚೆಗೆ, ಕೆಳಕ್ಕೆ: fell over the edge ತುದಿಯ ಮೇಲಿಂದ ಕೆಳಕ್ಕೆ ಬಿದ್ದ; ಅಂಚಿನಿಂದ ಆಚೆಗೆ ಬಿದ್ದ.
  12. ದಾಟಿ; ಹಾದು: a bridge over the Cauvery ಕಾವೇರಿಯನ್ನು ಹಾಯುವ ಸೇತುವೆ. coursing over the plain ಮೈದಾನ ದಾಟಿ ಓಡುತ್ತಾ; ಮೈದಾನವನ್ನು ಹಾದು ಓಡುತ್ತಾ.
  13. ಆಚೆ; ಎದುರು ಬದಿ; ಆ ಕಡೆ; ಅತ್ತ: the house over the way ದಾರಿಯ ಆಚೆ ಇರುವ ಮನೆ; ದಾರಿಯಿಂದತ್ತಣ ಮನೆ.
    1. (ಅವಧಿ) ದಾಟುವವರೆಗೂ; ಅವಧಿ ಪೂರ್ತಿ: if I can tide over the next month ಮುಂದಿನ ತಿಂಗಳು ದಾಟಿದೆನೆಂದರೆ; ಮುಂದಿನ ಒಂದು ತಿಂಗಳು ನಿಭಾಯಿಸಿದರೆ: can you stay over Wednesday? ಬುಧವಾರದವರೆಗೂ ಇರಬಲ್ಲೆಯಾ?
    2. ಅವಧಿಯ ಯಾವುದೇ ಕ್ಷಣದಲ್ಲಿ, ಭಾಗದಲ್ಲಿ: do it over the weekend ವಾರಾಂತ್ಯದೊಳಗೆ ಅದನ್ನು ಮಾಡು.
  14. ಮೇಲಿಂದ ಮುಂದೆ, ದೂರಕ್ಕೆ: looking over the hedge ಬೇಲಿಯ ಮೇಲಿಂದ ಇಣುಕಿ ನೋಡುತ್ತ.
  15. ಭಾಗಿಸಲ್ಪಟ್ಟು; ಭಾಗಾಹಾರವಾಗಿ.
  16. ಪ್ರಸಾರವಾದ; ಬಿತ್ತರಿಸಿದ: heard it over the radio ರೇಡಿಯೋದಲ್ಲಿ ಕೇಳಿದೆ.
  17. ಹೋಲಿಸಿದರೆ: gained 20% over last year ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 20 ಲಾಭವಾಯಿತು.
  18. -ರಿಂದ ಚೇತರಿಸಿಕೊಂಡು, ಸುಧಾರಿಸಿಕೊಂಡು: am now over my cold ಶೀತದಿಂದ ಈಗ ಚೇತರಿಸಿಕೊಂಡಿದ್ದೇನೆ.
  19. (ಯಾವುದರಲ್ಲೇ) ತೊಡಗಿರುವಾಗ: sitting over lunch ಊಟ ಮಾಡುತ್ತಿರುವಾಗ.
  20. ಫಲವಾಗಿ; ಪರಿಣಾಮವಾಗಿ: laughed over a good joke ಒಳ್ಳೆ ಜೋಕಿನ ಪರಿಣಾಮವಾಗಿ ನಕ್ಕ.
ಪದಗುಚ್ಛ
  1. all over
    1. ಎಲ್ಲೆಡೆ; ಎಲ್ಲ ಭಾಗಗಳಲ್ಲೂ; ಎಲ್ಲದರ ಮೇಲೆಯೂ.
    2. (ಅಶಿಷ್ಟ) (ವ್ಯಕ್ತಿಯ ಬಗ್ಗೆ) ವಿಪರೀತ ಗಮನ ನೀಡಿ ಯಾ ಆಸಕ್ತಿ ತೋರಿ; ಅತಿವ್ಯಾಮೋಹದಿಂದ; ವಿಪರೀತ ಉತ್ಸಾಹದಿಂದ ಯಾ ಭಾವಾವೇಶದಿಂದ: is all over her ಅವಳ ಮೇಲೆ ಅವನಿಗೆ ಅತಿ ವ್ಯಾಮೋಹ.
  2. $^1$come over.
  3. draw a veil over something
    1. (ಒಂದರ) ಮೇಲೆ ತೆರೆ ಎಳೆ; (ಒಂದನ್ನು) ಮರೆಮಾಡು; ಮುಚ್ಚು.
    2. (ಲಜ್ಜಾಸ್ಪದವಾದ ಯಾ ಅಪ್ರಿಯವಾದ) ವಿಷಯದ ಮೇಲೆ ತೆರೆ ಎಳೆ; ವಿಷಯವನ್ನು ಮುಚ್ಚಿಕೊ.
  4. go over ಆಮೂಲಾಗ್ರವಾಗಿ ಅವಲೋಕಿಸು, ಪರಿಶೀಲಿಸು: he went over his notes ಅವನು ತನ್ನ ಟಿಪ್ಪಣಿಗಳನ್ನು ಆಮೂಲಾಗ್ರವಾಗಿ ಅವಲೋಕಿಸಿದ.
  5. over a cheerfull glass ಉತ್ಸಾಹಜನಕ, ಗೆಲವುಂಟುಮಾಡುವ ಒಂದು ಲೋಟ ಮದ್ಯ ಕುಡಿಯುತ್ತ.
  6. over all ತುದಿಯಿಂದ ತುದಿಗೆ; ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ.
  7. over and above ಅದಕ್ಕೂ ಮೀರಿ; ಅದಕ್ಕಿಂತ ಹೆಚ್ಚಾಗಿ; ಅದೂ ಅಲ್ಲದೆ; ಅದರ ಜೊತೆಗೆ; ಮೇಲಾಗಿ: a lot of work over and above the daily maximum ಪ್ರತಿದಿನದ ಪರಮಾವಧಿಗಿಂತ ಮೀರಿ ತುಂಬ ಕೆಲಸ.
  8. over head and ears
    1. ಪೂರ್ತಿ ಮುಳುಗಿ; ತಲೆ ಮುಳುಗಿ: he found himself over head and ears in water ಆತ ನೀರಿನಲ್ಲಿ ಪೂರ್ತಿ ಮುಳುಗಿಬಿಟ್ಟ.
    2. (ರೂಪಕವಾಗಿ) ಪೂರ್ತಿಯಾಗಿ, ಸಂಪೂರ್ಣವಾಗಿ–ಮುಳುಗಿ: he was over head and ears in love ಅವನು ಪ್ರೇಮದಲ್ಲಿ ಪೂರ್ತಿಯಾಗಿ ಮುಳುಗಿಬಿಟ್ಟಿದ್ದ.
  9. over the fence (ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍)
    1. ಅನ್ಯಾಯದ; ನ್ಯಾಯಸಮ್ಮತವಲ್ಲದ; ನ್ಯಾಯವಲ್ಲದ.
    2. ಅಸಭ್ಯ; ಅಶ್ಲೀಲ.
  10. over the way (ರಸ್ತೆ ಮೊದಲಾದವುಗಳಲ್ಲಿ) ಎದುರಿನ; ಎದುರಾಗಿರುವ; ಎದುರು–ಭಾಗದ, ಸಾಲಿನ.
  11. over our heads ನಮ್ಮ ಬುದ್ಧಿಗೆ, ಅರಿವಿಗೆ, ತಿಳಿವಳಿಕೆಗೆ–ಮೀರಿ: the lecturer spoke over our heads ಭಾಷಣಕಾರ ನಮ್ಮ ತಿಳಿವಳಿಕೆಯ ಸಾಮರ್ಥ್ಯಕ್ಕೆ ಮೀರಿದ ಶೈಲಿಯಲ್ಲಿ ಮಾತನಾಡಿದ.
  12. over shoes over boots ಅರೆಬರೆ ಕೆಲಸಕೂಡದು; ಅಪೂರ್ಣವಾಗಿ ಮತ್ತು ಅಸಮರ್ಪಕವಾಗಿ ಮಾಡಬಾರದು.
  13. stumble over (ಒಂದರ) ಮೇಲೆ ಎಡವು, ಮುಗ್ಗರಿಸಿಬೀಳು, ಎಡವಿ ಬೀಳು: he stumbled over the step ಅವನು ಮೆಟ್ಟಲನ್ನೆಡವಿದ.
  14. the king over the water (ಇಂಗ್ಲೆಂಡಿನ ಜಾಕೊಬೈಟ್‍ ಪಂಥದವರು ಬಳಸುತ್ತಿದ್ದ ನುಡಿಗಟ್ಟು) ಗಡೀಪಾರಾದ ದೊರೆ; ಕಡಲಾಚೆಯ ದೊರೆ.
  15. to write over a signature (ಯಾವುದೋ ಒಂದು) ಹೆಸರಿನಲ್ಲಿ; ಹೆಸರನ್ನಿಟ್ಟುಕೊಂಡು; ಅಂಕಿತದಲ್ಲಿ: Gardiner wrote over the signature ‘Alpha of the Plough’ ಗಾರ್ಡನರ್‍ ಆಲ ‘ಆಹ್‍ ದಿ ಪ್ಲೌ’ ಎಂಬ ಹೆಸರಿನಲ್ಲಿ (ತನ್ನ ಕೃತಿಗಳನ್ನು) ಬರೆದ.