See also 2over  3over  4over
1over ಓವರ್‍
ಕ್ರಿಯಾವಿಶೇಷಣ
  1. (ಒಂದರ) ಮೇಲಿಂದ; ಆಚೆಗೆ; ಕೆಳಕ್ಕೆ: lean over (ದೊಣ್ಣೆ, ಮೇಜು, ಮೊದಲಾದವುಗಳ) ಮೇಲೆ–ಒರಗು, ಆನು ಯಾ ಬಾಗಿಕೊ. fall over (ಒಂದರ) ಮೇಲೆ ಬೀಳು. knock over (ಒಂದರ) ಮೇಲೆ ಹೊಡೆದು, ಬಡಿದು–ಕೆಡವು, ಉರುಳಿಸು. jump over (ಗೋಡೆ ಮೊದಲಾದವುಗಳ) ಮೇಲಿಂದ (ಆಚೆಗೆ) ನೆಗೆ, ಹಾರು, ಲಂಘಿಸು.
  2. ಮೇಲ್ಮೈ ಮೇಲೆ; ಮೈಮೇಲೆಲ್ಲ; ಇಡೀ ಮೈಮೇಲೆ; ಇಡೀ ಮೇಲ್ಮೈಯನ್ನು ಮುಚ್ಚುವಂತೆ: brush it over (ಮೈ, ಅಂಗಿ, ಮೊದಲಾದವನ್ನು) ಪೂರ್ತಿಯಾಗಿ ಒರೆಸು, ಬ್ರಷ್‍ ಮಾಡು. paint it over ಒಂದರ ಮೈಮೇಲೆ ಬಳಿ, ಸವರು, ಲೇಪಿಸು.
  3. (ಒಂದನ್ನು ದಾಟಿಕೊಂಡು) ಮೇಲೆ; ಮೇಲಕ್ಕೆ; ಮೇಲೆಡೆಗೆ: climb over (ಒಂದರ) ಮೇಲೆ–ಏರು, ಹತ್ತು, ಅಡರು. look over (ಹೆಗಲು ಮೊದಲಾದವುಗಳ) ಮೇಲಿಂದ ಬಾಗಿ, ಇಣುಕಿ–ನೋಡು.
  4. (ಮಡಿಚಲು, ಹಿಂದಿರುಗಿಸಲು ಯಾ ತಲೆಕೆಳಗು ಮಾಡಲು) ಮೇಲೆ ಯಾ ಹಿಂದಕ್ಕೆ ಯಾ ತಲೆಕೆಳಗಾಗಿ: bend it over (ಅದನ್ನು ಒಂದರ) ಮೇಲೆ ಬಗ್ಗಿಸು, ಬಾಗಿಸು. fold it over ಹಿಂದಕ್ಕೆ ಮಡಿಚು. turn over (ಹಾಳೆಯನ್ನು) ಹಿಂದಕ್ಕೆ ತಿರುಗಿಸು, ಮಗುಚು, ತಿರುವಿಹಾಕು.
  5. (ಪಕ್ಕಗಳನ್ನು, ತುದಿಗಳನ್ನು ಬದಲಾಯಿಸಲು ಕ್ರಿಕೆಟ್‍ ಅಂಪೈರ್‍ ಕೊಡುವ ಸೂಚನೆ) ಓವರ್‍! ಆಯಿತು! ಮುಗಿಯಿತು! (ಈ ಕಡೆಯದು ಮುಗಿಯಿತು, ಆ ಕಡೆಯದನ್ನು ಆರಂಭಿಸಬೇಕು ಎಂಬ ಸೂಚನೆ).
  6. (ಬೀದಿ, ನಡುವಣ ದೂರ, ಮೊದಲಾದವುಗಳ) ಆಚೆ; ಆ ಬದಿ: take this over to the post-office ಇದನ್ನು ಆ ಬದಿಯ ಅಂಚೆ ಕಚೇರಿಗೆ ತೆಗೆದುಕೊಂಡು ಹೋಗು. asked him over (ದೂರವಲ್ಲದ ಊರಿನಿಂದ ಯಾ ಸ್ಥಳದಿಂದ ಭೇಟಿ ಮೊದಲಾದವುಗಳಿಗಾಗಿ) ಬಾ ಎಂದು ಅವನನ್ನು ಕರೆದೆ, ಬರಹೇಳಿದೆ. he is over in America ಅವನು ದೇಶದಿಂದಾಚೆ ಯಾ ದೂರದ ಅಮೆರಿಕದಲ್ಲಿದ್ದಾನೆ. I am going over to America ನಾನು ನಮ್ಮ ದೇಶದಿಂದಾಚೆ, ಅಮೆರಿಕಕ್ಕೆ ಹೋಗುತ್ತಿದ್ದೇನೆ.
  7. (ಒಂದು ಕೈ, ಕಡೆ, ಪಕ್ಕ, ಪಕ್ಷ, ಮೊದಲಾದವುಗಳಿಂದ) ಮತ್ತೊಂದು–ಕೈಗೆ, ಕಡೆಗೆ, ಪಕ್ಕಕ್ಕೆ, ಪಕ್ಷಕ್ಕೆ: malcontents went over to the enemy ಅತೃಪ್ತರು ಶತ್ರುವಿನ ಕಡೆಗೆ ಹೋಗಿ ಸೇರಿಕೊಂಡರು, ಶತ್ರುಪಕ್ಷ ಸೇರಿದರು. handed over the seals ಮೊಹರುಗಳನ್ನು (ಅವರ) ಕೈಗೆ ಒಪ್ಪಿಸಿದೆ, ವರ್ಗಾಯಿಸಿದೆ. made over the balance to a charity ಉಳಿದ ಹಣವನ್ನು ಒಂದು ಧರ್ಮಸಂಸ್ಥೆಗೆ ಕೊಟ್ಟುಬಿಟ್ಟೆ.
  8. ಅತಿ; ಅಧಿಕವಾಗಿ; ಮಿತಿಮೀರಿ; ಉಚಿತವಾದುದಕ್ಕಿಂತ ಯಾ ಅಪೇಕ್ಷಿತವಾಗಿರುವುದಕ್ಕಿಂತ ಹೆಚ್ಚಾಗಿ. over-anxious ಅತಿ ಕಳವಳದಿಂದ ಕೂಡಿದ. not over well ಅಷ್ಟೇನೂ ಆರೋಗ್ಯವಿಲ್ಲ; ಅಂಥ ಆರೋಗ್ಯವೇನೂ ಇಲ್ಲ.
  9. -ಕ್ಕೆ ಸ್ವಲ್ಪ ಮೀರಿ, ತುಸು ಹೆಚ್ಚಾಗಿ: I shall have something over (ನನ್ನ ಅಗತ್ಯ ಕಳೆದು) ಸ್ವಲ್ಪ ಉಳಿಯುತ್ತದೆ. 20 kgs and over ಇಪ್ಪತ್ತು ಕಿಲೋಗ್ರಾಮ್‍ ಮೀರಿ; ಇಪ್ಪತ್ತು ಕಿಲೋಗ್ರಾಮ್‍ಗಿಂತ ಸ್ವಲ್ಪ ಹೆಚ್ಚಾಗಿ.
  10. ಮೊದಲಿನಿಂದ ಕೊನೆಯವರೆಗೂ; ಆದ್ಯಂತ(ವಾಗಿ); ಆಮೂಲಾಗ್ರವಾಗಿ: read over ಆಮೂಲಾಗ್ರವಾಗಿ ಓದು. count over ಆದ್ಯಂತವಾಗಿ ಎಣಿಸು. I did it six times over ನಾನು ಅದನ್ನು ಮೊದಲಿನಿಂದ ಕೊನೆಯವರೆಗೂ ಆರು ಸಲ ಮಾಡಿದೆ.
  11. ತಿರುಗಿ ತಿರುಗಿ; ಮತ್ತೆಮತ್ತೆ; ಪುನಃ ಪುನಃ; ಪದೇಪದೇ; ಮೇಲಿಂದ ಮೇಲೆ.
  12. ಕೊನೆಗೊಂಡು; ಮುಕ್ತಾಯಗೊಂಡು; ಮುಗಿದು; ತೀರಿ; ಪೂರೈಸಿ: the struggle is over ಹೋರಾಟವು ಕೊನೆಗೊಂಡಿದೆ.
  13. ಮುಂದಿನ ಕಾಲಕ್ಕೆ ಯಾ ಕಾಲದವರೆಗೆ: hold it over ಅದನ್ನು ಮುಂದಿನವರೆಗೆ ತಡೆದಿಡು, ಮಾಡದಿರು.
ಪದಗುಚ್ಛ
  1. all over
    1. ಪೂರ್ತಿ ಮುಗಿದಿದೆ; ಸಂಪೂರ್ಣವಾಗಿ ಕೊನೆಗೊಂಡಿದೆ.
    2. (ದೇಹ ಮೊದಲಾದವುಗಳ ವಿಷಯದಲ್ಲಿ) ಇಡೀ; ಪೂರ್ತಿಯಾಗಿ; ಸಂಪೂರ್ಣವಾಗಿ: went hot all over ಮೈಯೆಲ್ಲಾ ಬಿಸಿಯಾಯಿತು; ಇಡೀ ಮೈ ಬಿಸಿಯಾಯಿತು. is all over mud ಕೆಸರು ಮೈಗೆಲ್ಲಾ ಮೆತ್ತಿಕೊಂಡಿತು.
  2. all over again (ಮೊದಲಿನಿಂದ) ಮತ್ತೊಮ್ಮೆ; ಇನ್ನೊಮ್ಮೆ; ಎರಡನೆಯ ಬಾರಿ.
  3. get it over with ಕಳೆದುಕೊಳ್ಳಲು ಯಾ ನಿವಾರಿಸಿಕೊಳ್ಳಲು (ಅಪ್ರಿಯವಾದುದು ಮೊದಲಾದವನ್ನು) ಮಾಡಿ ಯಾ ಅನುಭವಿಸಿ ಮುಗಿಸಿ ಬಿಡು.
  4. not over
    1. ಹೆಚ್ಚೇನೂ ಇಲ್ಲ; ಬಹಳವೇನೂ ಇಲ್ಲ; ಅಷ್ಟಕ್ಕಷ್ಟೇ: not over friendly ಅಷ್ಟಕ್ಕಷ್ಟೇ ಸ್ನೇಹ.
    2. ಸ್ವಲ್ಪವೂ ಇಲ್ಲ; ಸುತರಾಂ ಇಲ್ಲ.
  5. over and above
    1. ಅದಕ್ಕೂ ಮೀರಿ; ಅದಕ್ಕಿಂತಲೂ ಹೆಚ್ಚಾಗಿ.
    2. ಅದು ಅಲ್ಲದೆ; ಜೊತೆಗೆ; ಮೇಲಾಗಿ: over and above these facts ಈ ಸಂಗತಿಗಳಲ್ಲದೆ.
  6. over and over ಮತ್ತೆ ಮತ್ತೆ; ಪುನಃ ಪುನಃ ಅನೇಕಬಾರಿ; ಹಲವಾರು ಸಲ.
  7. over and over again ಪುನಃ ಪುನಃ; ಪದೇ ಪದೇ; ಮತ್ತೆ ಮತ್ತೆ; ಮೇಲಿಂದ ಮೇಲೆ.
  8. over against
    1. ವಿರುದ್ಧ ಪರಿಸ್ಥಿತಿಯಲ್ಲಿ.
    2. ಪಕ್ಕದಲ್ಲಿ.
    3. ವ್ಯತಿರಿಕ್ತವಾಗಿ; ವಿಭಿನ್ನವಾಗಿ; ವಿರುದ್ಧವಾಗಿ.
  9. over to you(ರೇಡಿಯೋ ಸಂಭಾಷಣೆ ಮೊದಲಾದವುಗಳಲ್ಲಿ) ಈಗ ನೀನು; (ಹೇಳಲು) ಇನ್ನು ನಿನ್ನ ಸರದಿ; ನಿನ್ನ ಉತ್ತರ, ಪ್ರತಿಕ್ರಿಯೆ, ಮೊದಲಾದವನ್ನು ಎದುರು ನೋಡುತ್ತೇನೆ.
  10. roll over and over
    1. ಮತ್ತೆಮತ್ತೆ ಉರುಳುತ್ತಾ ಹೋಗು, ಸಾಗು.
    2. ಮತ್ತೆ ಮತ್ತೆ ಉರುಳಿಸುತ್ತಾ ಹೋಗು.
    3. (ದಾರ ಮೊದಲಾದವನ್ನು) ಸುತ್ತುತ್ತಾ ಹೋಗು.
  11. stand over (ಸ್ವಲ್ಪ ಕಾಲ) ಉಳಿದಿರು; (ಈಗಾಗಲೇ ಮಾಡದೆ, ಮುಂದೆ ಮಾಡಲಿಕ್ಕಾಗಿ) ನಿಲ್ಲಿಸಿರು; that work can stand over ಆ ಕೆಲಸ ಸ್ವಲ್ಪ ಕಾಲ ತಡೆಯಬಹುದು; ಆ ಕೆಲಸವನ್ನು (ಈಗಲೇ ಮಾಡದೆ) ಸ್ವಲ್ಪ ಕಾಲ ಉಳಿಸಿಟ್ಟಿರಬಹುದು.
  12. talk (the matter) over (ಆ ವಿಷಯವನ್ನು) ಪುನಃ ಚರ್ಚಿಸು.
  13. think (the matter) over (ಆ ವಿಷಯವನ್ನು) ತಿರುಗಿ ಪರ್ಯಾಲೋಚಿಸು.
  14. turn over on one’s face ಮುಖವಡಿಯಾಗಿ ತಿರುಗು; ಮುಖ ಕೆಳಗಾಗುವಂತೆ ತಿರುಗು; ಬೋರಲಾಗು; ಬೋರಲುಬೀಳು.