See also 2officer
1officer ಆಹಿಸರ್‍
ನಾಮವಾಚಕ
  1. ಅಧಿಕಾರಿ; ಹುದ್ದೇದಾರ; ಮುಖ್ಯವಾಗಿ ನೌಕಾಸೈನ್ಯ, ಭೂಸೈನ್ಯ, ವಾಯುಪಡೆ ಯಾ ವ್ಯಾಪಾರನೌಕೆ ಯಾ ಪ್ರಯಾಣಿಕರ ಹಡಗು, ಮೊದಲಾದವುಗಳಲ್ಲಿನ ಅಧಿಕಾರಿ (ಮುಖ್ಯವಾಗಿ ಸನ್ನದು ಪಡೆದಿರುವ ನೌಕಾಸೈನ್ಯಾಧಿಕಾರಿ, ಭೂಸೈನ್ಯಾಧಿಕಾರಿ).
  2. ಪೊಲೀಸ್‍ ಪೇದೆ; ಕಾನ್‍ಸ್ಟೇಬಲ್‍ ಯಾ ಮಹಿಳಾ ಕಾನ್‍ಸ್ಟೇಬಲ್‍.
  3. (ಒಂದು ಸಂಘದ) ಅಧಿಕಾರಿ; ಮುಖ್ಯವಾಗಿ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ, ಮೊದಲಾದವರು.
  4. (ಸಾಮಾನ್ಯವಾಗಿ ವಿಶೇಷಣಗಳೊಡನೆ ಪ್ರಯೋಗ)
    1. (ಸಾರ್ವಜನಿಕ ಸಿವಿಲ್‍, ಯಾ ಧಾರ್ಮಿಕ ಸಂಸ್ಥೆಯ) ಅಧಿಕಾರಿ; ಹುದ್ದೇದಾರ: medical officer ವೈದ್ಯಾಧಿಕಾರಿ.
    2. ದೊರೆಯ ಸೇವಕ ಯಾ ಸಚಿವ: officer of the Household (ಇಂಗ್ಲೆಂಡಿನಲ್ಲಿ) ಅರಮನೆಯ ಅಧಿಕಾರಿ, ಬಕ್ಷಿ.
    3. ನಿಯಮಿತ ಯಾ ಚುನಾಯಿತ ಅಧಿಕಾರಿ: returning officer ಚುನಾವಣಾಧಿಕಾರಿ.
  5. ಬೇಲಿಹ್‍; ಅಮೀನ; ದಂಡಾಧಿಕಾರಿ.
  6. ಆಹಿಸರ್‍; ಆರ್ಡರ್‍ ಆಹ್‍ ದಿ ಬ್ರಿಟಿಷ್‍ ಎಂಪೈರ್‍ ಪ್ರಶಸ್ತಿಯ ನಾಲ್ಕನೆಯ ವರ್ಗಕ್ಕೆ ಸೇರಿದ ಸದಸ್ಯ.
ಪದಗುಚ್ಛ
  1. Army officers (ಹೀಲ್ಡ್‍ ಮಾರ್ಷಲ್‍, ಜನರಲ್‍, ಮೊದಲಾದ) ಸೈನ್ಯಾಧಿಕಾರಿಗಳು.
  2. Naval officers (ಆಡ್ಮರಲ್‍, ವೈಸ್‍ ಆಡ್ಮರಲ್‍, ಮೊದಲಾದ) ನೌಕಾಧಿಕಾರಿಗಳು.
  3. officer of arms
    1. = $^1$herald\((4)\).
    2. ಹೆರಲ್ಡ್‍ಗಿಂತ ಕಡಮೆ ದರ್ಜೆಯ ‘ಕಾಲೇಜ್‍ ಆಹ್‍ ಆರ್ಮ್ಸ್‍’ನ ಅಧಿಕಾರಿ.
  4. Officers’ Training Corps (ಸಂಕ್ಷಿಪ್ತ OTC) ಸೈನ್ಯಾಧಿಕಾರಿಗಳ ಶಿಕ್ಷಣ ದಳ.
  5. relieving officer (ಬ್ರಿಟಿಷ್‍ ಪ್ರಯೋಗ) ಪರಿಹಾರಾಧಿಕಾರಿ; ಬಡಬಗ್ಗರಿಗೆ ಸಹಾಯ ವಿನಿಯೋಗ ಮಾಡುವ ಜವಾಬ್ದಾರಿಯುಳ್ಳ ಒಬ್ಬ ಗ್ರಾಮಾಧಿಕಾರಿ.