See also 2herald
1herald ಹೆರ್‍(ರ)ಲ್ಡ್‍
ನಾಮವಾಚಕ
  1. (ಅಧಿತ) ಹರಿಕಾರ; ದೂತ; ರಾಯಭಾರಿ.
  2. ಅನೇಕ ವೇಳೆ ವರ್ತಮಾನ ಪತ್ರಿಕೆಯ ಹೆಸರಾಗಿ: The Morning Herald, Deccan Herald, National Herald, ಮೊದಲಾದವು.
  3. ಮುಂಗಾಮಿ; ಪೂರ್ವಗಾಮಿ; ಪೂರ್ವಸೂಚಕ; ಮುನ್‍ಸೂಚಕ: revolutions were the heralds of social change ಕ್ರಾಂತಿಗಳು ಸಾಮಾಜಿಕ ಬದಲಾವಣೆಗಳ ಮುನ್‍ಸೂಚಕವಾಗಿದ್ದುವುspring is the herald of summer ವಸಂತವು ಬೇಸಗೆಯ ಮುನ್ಸೂಚಕ.
  4. (ಚರಿತ್ರೆ) ಹೆರಲ್ಡ್‍; ರಾಜಘೋಷಕ; ಪ್ರಭುತ್ವದ ಘೋಷಣೆಗಳನ್ನು ಸಾರುತ್ತಿದ್ದ, ರಾಜರಿಂದ ರಾಜರುಗಳಿಗೆ ಸಂದೇಶಗಳನ್ನು ಒಯ್ಯುತ್ತಿದ್ದ, ಕ್ರೀಡಾಪಂದ್ಯಗಳ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ, ವಿವಿಧ ರಾಜ್ಯಸಮಾರಂಭಗಳನ್ನು ಏರ್ಪಡಿಸುತ್ತಿದ್ದ, ವಂಶಲಾಂಛನಗಳ ಬಳಕೆಯನ್ನು ಕ್ರಮಪಡಿಸುತ್ತಿದ್ದ, ಸ್ಥಾನತಾರತಮ್ಯದ ಪ್ರಶ್ನೆಗಳನ್ನು ನಿರ್ಣಯಿಸುತ್ತಿದ್ದ, ವಂಶಲಾಂಛನಗಳ ಹಕ್ಕುಳ್ಳವರ ವಂಶಾವಳಿಯನ್ನು, ಹೆಸರುಗಳನ್ನು ದಾಖಲೆಯಿಡುತ್ತಿದ್ದ ಅಧಿಕಾರಿ.
  5. ಹೆರಲ್ಡ್ಸ್‍ ಕಾಲೇಜು ಯಾ ವಂಶಾವಳಿ ಕಚೇರಿಯ ಒಬ್ಬ ಅಧಿಕಾರಿ.