(ಘಟನೆ ಯಾ ಸಂಗತಿಯನ್ನು) ನೋಡದಿರು; ಗಮನಿಸದಿರು; ನೋಡದೆ ಯಾ ಅದಕ್ಕೆ ಹಾಜರಾಗದೆ, ಅದರಲ್ಲಿ ಪಾಲುಗೊಳ್ಳದೆ – ಹೋಗು; ಅದನ್ನು ತಪ್ಪಿಸಿಕೊ.
(ಸಾಮಾನ್ಯವಾಗಿ ವಿಷಾದದಿಂದ, ಯಾವುದೇ ವಸ್ತು, ವ್ಯಕ್ತಿ, ಮೊದಲಾದವುಗಳ) ಅಭಾವವನ್ನು – ಗುರುತಿಸು, ಗಮನಿಸು: he missed his wife terribly ತನ್ನ ಹೆಂಡತಿ ಇಲ್ಲವಲ್ಲ ಎಂದು ಬಹಳ ಪರಿತಪಿಸಿದ, ಬಲು ನೊಂದುಕೊಂಡ. he missed the watch as soon as the stranger had left ಆಗಂತುಕನು ಹೊರಟುಹೋದ ಕೂಡಲೇ ತನ್ನ ಗಡಿಯಾರ ನಾಪತ್ತೆಯಾದುದನ್ನು ಗಮನಿಸಿದ.
ತಪ್ಪಿಸು: go early to miss the traffic ವಾಹನಗಳ ಒತ್ತಡವನ್ನು ತಪ್ಪಿಸಿಕೊಳ್ಳಲು ಬೇಗ ಹೊರಡು.
ಪದಗುಚ್ಛ
be missing ಇಲ್ಲದಿರು; ಹೊಂದಿಲ್ಲದಿರು; ಅಭಾವವಾಗಿರು.
miss fire
(ಬಂದೂಕು) ಹೊಡೆಯದೆ, ಹಾರದೆ – ಹೋಗು ಯಾ ಗುರಿ ತಾಕದಿರು.
(ರೂಪಕವಾಗಿ) ಉದ್ದೇಶ – ಭಂಗವಾಗು, ಸಾಧಿಸದಿರು, ನಿಷ್ಫಲವಾಗು.
miss on ನಿಷ್ಫಲವಾಗು; ವಿಫಲವಾಗು; ಅಯಶಸ್ವಿಯಾಗು; ಗುರಿ ಮುಟ್ಟದೆ ಹೋಗು: a play which missed on Broadway ಬ್ರಾಡ್ವೇ ರಂಗಭೂಮಿಯ ಮೇಲೆ ಅಯಶಸ್ವಿಯಾದ ನಾಟಕ.
miss out
(ಓದುವಾಗ, ಬರೆಯುವಾಗ, ಪದ ಮೊದಲಾದವನ್ನು) ಬಿಟ್ಟುಬಿಡು.
ಗೆಲ್ಲದಿರು; ಗುರಿ ಮುಟ್ಟದಿರು: he cannot offer to miss out as this is his big chance ಇದು ಅವನಿಗೆ ಪ್ರಮುಖ ಅವಕಾಶವಾಗಿರುವುದರಿಂದ, ಅವನು ಗೆಲ್ಲದೆ ಇರುವಂತಿಲ್ಲ.