(ಬಹುವಚನದಲ್ಲಿ) (ಸಭೆ, ಸಮಿತಿ, ಮೊದಲಾದವುಗಳ ಕಾರ್ಯಕಲಾಪಗಳ) ಸಂಕ್ಷಿಪ್ತ ವರದಿ; ಸಾರಾಂಶ; ಗೋಷ್ವಾರೆ.
ಜ್ಞಾಪಕ ಪತ್ರ; ಸೂಚನೆ ಪತ್ರ; (ಒಂದು ಮಾರ್ಗ, ರೀತಿ ಅನುಸರಿಸಬೇಕೆಂದು ಅಧಿಕಾರಿ ಕೊಡುವ ಯಾ ಶಿಫಾರಸು ಮಾಡುವ) ಕಚೇರಿಯ ಸೂಚನೆ ಪತ್ರ: treasury minute ಖಜಾನೆಯ – ಸೂಚನೆಯ ಪತ್ರ, ಜ್ಞಾಪಕ ಪತ್ರ, ಜ್ಞಾಪನ ಪತ್ರ.
ಪದಗುಚ್ಛ
just (orwait) a minute
(ಸ್ವಲ್ಪ ಕಾಲ, ತುಸು ಕಾಲ ಕಾಯಬೇಕೆಂದು ಕೋರುವಾಗ ಹೇಳುವ ಮಾತು) ಒಂದು ನಿಮಿಷ (ತಡೆಯಿರಿ, ತಾಳಿ).
ಪ್ರಶ್ನೆ ಯಾ ಆಕ್ಷೇಪ ಎತ್ತುವುದಕ್ಕೆ ಮುಂಚೆ ಹೇಳುವ ಮಾತು.
the minute (that) ತತ್ಕ್ಷಣವೇ; ಒಡನೆಯೇ; ಕೂಡಲೇ; ಆ ಗಳಿಗೆಯೇ; ಆ ಕ್ಷಣದಲ್ಲೇ: wash them the minute you are through using them ನೀನು ಅವುಗಳನ್ನು ಉಪಯೋಗಿಸಿದ ಕೂಡಲೇ ತೊಳೆದುಬಿಡು.
upto the minute ಇದುವರೆಗೆ; ಇಂದಿನವರೆಗೆ; ಈ ದಿನದವರೆಗೆ ಪೂರ್ತಿಯಾಗಿ; ಈ ಗಳಿಗೆಯವರೆಗೆ; ಈ ನಿಮಿಷದವರೆಗೆ.