1meet
ಮೀಟ್
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ met ಉಚ್ಚಾರಣೆ ಮೆಟ್).
ಸಕರ್ಮಕ ಕ್ರಿಯಾಪದ
- (ಎದುರಿಗೆ ಬರುತ್ತಿರುವ ವ್ಯಕ್ತಿಯನ್ನು ಯಾ ವ್ಯಕ್ತಿಗಳನ್ನು ಆಕಸ್ಮಿಕವಾಗಿಯೋ, ಉದ್ದೇಶಪೂರ್ವಕವಾಗಿಯೋ) ಸಂಧಿಸು; ಭೇಟಿಯಾಗು.
- (ವ್ಯಕ್ತಿ, ರೈಲುಬಂಡಿ, ಮೊದಲಾದವುಗಳು ಬರುವ ಕಡೆ ಹೋಗಿ) ಎದುರುಗೊಳ್ಳು; ಬರಮಾಡಿಕೊ; ಸ್ವಾಗತಿಸು: meet the guests at the door ಬಾಗಿಲ ಬಳಿ ಅತಿಥಿಗಳನ್ನು ಎದುರುಗೊಳ್ಳು.
- (ಗೆರೆ, ರಸ್ತೆ, ಮೊದಲಾದವುಗಳು ಮತ್ತೊಂದು ಗೆರೆ ಮೊದಲಾದವನ್ನು) ಕೂಡು; ಸೇರು; ಸಂಧಿಸು: where the road meets the flyover ರಸ್ತೆಯು ಮೇಲುಸೇತುವೆಯನ್ನು ಸೇರುವ ಕಡೆ.
- (ಒಬ್ಬನ) ಪರಿಚಯ ಮಾಡಿಕೊ; ಸಂಧಿಸು; (ಒಬ್ಬನ ಜೊತೆಗೆ) ಕಲೆ, ಸೇರು (ಪರಿಚಯ ಮಾಡಿಕೊಡುವಾಗ, ಅಮೆರಿಕನ್ ಪ್ರಯೋಗ ವಿಧಿರೂಪದಲ್ಲಿ ಪ್ರಯೋಗ): meet Dr. Smith ಡಾ| ಸ್ಮಿತ್ರನ್ನು ಸಂಧಿಸಿ; ಇಕೋ; ಇವರೆ ಡಾ| ಸ್ಮಿತ್. delighted to meet you ನಿಮ್ಮನ್ನು ಭೇಟಿ ಮಾಡಲು ಸಂತೋಷವಾಗುತ್ತದೆ.
- (ಸಮ್ಮೇಳನ, ವ್ಯವಹಾರ, ಪೂಜೆ, ಮೊದಲಾದವುಗಳಿಗಾಗಿ) ಒಟ್ಟಿಗೆ ಸೇರು; ಸಭೆಸೇರು: the committee meets every week ಆ ಸಮಿತಿ ಪ್ರತಿವಾರವೂ ಸಭೆ ಸೇರುತ್ತದೆ.
- (ಒಬ್ಬ ವ್ಯಕ್ತಿ ಯಾ ಒಂದು ಗುಂಪಿನ ವಿಷಯದಲ್ಲಿ) (ಬೇಡಿಕೆ, ಆವಶ್ಯಕತೆ, ಮೊದಲಾದವನ್ನು) ಪೂರೈಸು; ತೃಪ್ತಿಗೊಳಿಸು: could not meet his requirements ಅವನ ಆವಶ್ಯಕತೆಗಳನ್ನು ಅದು ಪೂರೈಸಲಿಲ್ಲ. met the original proposal with hostility ಮೂಲ ಪ್ರಸ್ತಾಪಕ್ಕೆ ವಿರೋಧ ತೋರಿಸಲಾಯಿತು.
- (ಆಕ್ಷೇಪ ಮೊದಲಾದವುಗಳಿಗೆ) ಉತ್ತರ ಕೊಡು; ಸಮಾಧಾನ ಹೇಳು; ಸಮಜಾಯುಷಿ ಕೊಡು.
- (ಸೂಚನೆಗಳು, ಗಡುವುಗಳು, ಮೊದಲಾದವುಗಳಿಗೆ) ಒಪ್ಪು; ಸಮ್ಮತಿಸು: agreed to meet the new terms ಹೊಸ ಷರತ್ತುಗಳನ್ನು ಪೂರೈಸಲು ಒಪ್ಪಿದ.
- (ಬಿಲ್ಲನ್ನು) ಪಾವತಿ ಮಾಡು; (ಅದರ ಹಣ) ಸಲ್ಲಿಸು.
- (ಚೆಕ್ಕಿಗೆ ಆವಶ್ಯಕವಾದ ಹಣ) ತುಂಬು; ನೀಡು; ಸಲ್ಲಿಸು; ಪಾವತಿ ಮಾಡು.
- (ಕಷ್ಟ ನಷ್ಟ, ಜಯ, ಮೊದಲಾದವುಗಳನ್ನು) ಎದುರಿಸು; ಅನುಭವಿಸು: met many a difficulty ಅನೇಕ ಕಷ್ಟಗಳನ್ನು ಅನುಭವಿಸಿದ, ಎದುರಿಸಿದ.
- (ಪಂದ್ಯ, ಕಾಳಗ, ದ್ವಂದ್ವ ಯುದ್ಧ, ಮೊದಲಾದವನ್ನು) ಎದುರಿಸು; ವಿರೋಧಿಸು; ಎದುರಿಸಿ ನಿಲ್ಲು: our boys meet the University team next week ನಮ್ಮ ಹುಡುಗರು ಮುಂದಿನ ವಾರ ವಿಶ್ವವಿದ್ಯಾನಿಲಯದ ತಂಡವನ್ನು ಎದುರಿಸುತ್ತಾರೆ.
- (ಒಬ್ಬನಿಗೆ, ಒಬ್ಬನ ಅಭಿಲಾಷೆಗಳಿಗೆ) ಹೊಂದಿಕೊ; ಅನುಕೂಲವಾಗಿರು: expressed his willingness to meet him on that point ಆ ವಿಷಯದಲ್ಲಿ (ಅವನೊಡನೆ) ಹೊಂದಿಕೊಳ್ಳಲು ಒಪ್ಪಿದ.
ಅಕರ್ಮಕ ಕ್ರಿಯಾಪದ
- (ಇಬ್ಬರು ಯಾ ಹೆಚ್ಚು ಜನರ ವಿಷಯದಲ್ಲಿ) ಎದುರಾಗು; ಮುಖಾಮುಖಿಯಾಗು; (ಒಬ್ಬರನ್ನೊಬ್ಬರು) ಭೇಟಿಯಾಗು; ಸಂಧಿಸು: we met on the street ನಾವು ರಸ್ತೆಯಲ್ಲಿ ಸಂಧಿಸಿದೆವು. decided to meet on the bridge ಸೇತುವೆಯ ಮೇಲೆ ಸಂಧಿಸಲು ನಿರ್ಧರಿಸಿದ.
- (ಒಬ್ಬರು ಯಾ ಹೆಚ್ಚು ಜನರ ವಿಷಯದಲ್ಲಿ) ಪರಸ್ಪರ ಪರಿಚಯ ಮಾಡಿಕೊ.
- (ಚಲಿಸುವ ವಸ್ತು, ಗೆರೆ, ಪ್ರದೇಶ, ಮೊದಲಾದವುಗಳ ವಿಷಯದಲ್ಲಿ) ಸೇರು; ಸಂಧಿಸು; ಸಂಪರ್ಕಕ್ಕೆ ಬರು: where the sky and the land meet ಆಕಾಶ, ಭೂಮಿ ಸೇರುವ ಸ್ಥಳದಲ್ಲಿ: their hands met ಅವರ ಕೈಗಳು ಪರಸ್ಪರ ಸೇರಿದವು.
- (ಸಭೆ, ಕಾರ್ಯಕಲಾಪ, ಪೂಜೆ, ಮೊದಲಾದವನ್ನು ನಡೆಸಲು) ಸೇರು; ಕೂಡು; ಒಟ್ಟಿಗೆ ಬರು: the city council will meet soon to deal with the problems ಸಮಸ್ಯೆಯನ್ನು ಪರಿಶೀಲಿಸಲು ನಗರಸಮಿತಿಯು ಸದ್ಯದಲ್ಲಿಯೇ ಸೇರಲಿದೆ.
- (ಕಷ್ಟ, ನಷ್ಟ, ಜಯ, ಮೊದಲಾದವುಗಳನ್ನು) ಅನುಭವಿಸು; ಎದುರಿಸು: meet with success ಜಯ ಪಡೆ. meet with many problems ಅನೇಕ ಸಮಸ್ಯೆಗಳನ್ನು ಎದುರಿಸು.
- (ಬಟ್ಟೆಗಳು, ಪರದೆಗಳು, ಮೊದಲಾದವುಗಳ ವಿಷಯದಲ್ಲಿ) ಸರಿಯಾಗಿ ಸೇರಿಕೊ, ಕೂಡು: my jacket won’t meet ನನ್ನ ಜಾಕೆಟ್ಟು ಸರಿಯಾಗಿ ಒಂದಕ್ಕೊಂದು ಕೂಡುವುದಿಲ್ಲ, ಜಾಕೆಟ್ಟು ತುಂಬ ಬಿಗಿ ಯಾ ಗುಂಡಿ ಹಾಕಲಾಗದಷ್ಟು ಚಿಕ್ಕದು.
- (ಗುಣಗಳು ಮೊದಲಾದವುಗಳ ವಿಷಯದಲ್ಲಿ) ಒಂದುಗೂಡು; ಒಟ್ಟಿಗೆ ಸೇರು; ಸಂಗಮಿಸು; ಸಂಗಮವಾಗು; ಒಬ್ಬನಲ್ಲಿ ಒಟ್ಟಿಗೆ ಸೇರು: many virtues meet in her ಅವಳಲ್ಲಿ ಅನೇಕ ಒಳ್ಳೆಯ ಗುಣಗಳು ಸೇರಿವೆ.
ಪದಗುಚ್ಛ
- make both $^1$ends meet.
- meet a person’s eye
- ಒಬ್ಬನ ದೃಷ್ಟಿಗೆ ಬೀಳು; ನೋಟಕ್ಕೆ ಸಿಗು; ಅವನು ನಿನ್ನನ್ನು ನೋಡುವಂತಾಗು.
- ಒಬ್ಬನು ನಿನ್ನನ್ನು ನೋಡುತ್ತಿದ್ದಾನೆಯೇ ಎಂಬುದನ್ನು ಗಮನಿಸಿ ಅವನತ್ತ ಮರುದೃಷ್ಟಿ ಬೀರು.
- meet a person halfway
- (ಇನ್ನೊಬ್ಬನು) ನೀಡುವ ಸ್ನೇಹ ಹಸ್ತ ಹಿಡಿ, ತೆಗೆದುಕೊ, ಸ್ವೀಕರಿಸು.
- ಒಪ್ಪಂದಕ್ಕೆ ಬರು; ಕೊಟ್ಟು, ಪಡೆದು ರಾಜಿಯಾಗು; ಅರ್ಧ ಪಟ್ಟು ಬಿಟ್ಟು ರಾಜಿಯಾಗು: in spite of their differences they agreed to meet halfway ಭಿನ್ನಾಭಿಪ್ರಾಯಗಳಿದ್ದರೂ ಅವರಿಬ್ಬರೂ ಕೊಟ್ಟು ಪಡೆದು ರಾಜಿಯಾಗಲು ಒಪ್ಪಿದರು.
- meet the ear ಕಿವಿಗೆ ಬೀಳು; ಕೇಳಿಸಿಕೊ.
- meet the eye ಕಣ್ಣಿಗೆ ಬೀಳು; ದೃಷ್ಟಿಗೋಚರವಾಗು; ಕಾಣಿಸಿಕೊ.
- meet together ಸೇರು; ಒಟ್ಟಾಗು; ಒಟ್ಟುಗೂಡು; ಕಲೆ: they met together ಅವರು ಒಬ್ಬರನ್ನೊಬ್ಬರು ಸಂಧಿಸಿದರು.
- meet up (ಆಡುಮಾತು) ಅಕಸ್ಮಾತ್ತಾಗಿ ಸಂಧಿಸು.
- meet with
- (ಅಡಚಣೆ ಮೊದಲಾದವನ್ನು) ಎದುರಿಸು.
- (ಮುಖ್ಯವಾಗಿ ಅಮೆರಿಕನ್ ಪ್ರಯೋಗ) (ವ್ಯಕ್ತಿ ಮೊದಲಾದವರನ್ನು) ಸಂಧಿಸು; ಭೇಟಿಯಾಗು.
- ಪಾತ್ರವಾಗು; ಪಕ್ಕಾಗು; ಅನುಭವಿಸು: they met with courtesy during their stay ಅವರು ಅಲ್ಲಿ ಇಳಿದುಕೊಂಡಿದ್ದಾಗ ಸೌಜನ್ಯಕ್ಕೆ ಪಾತ್ರರಾದರು.
- more in it than meets the eye ಅದರಲ್ಲಿ ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಿನ ಅಂಶಗಳಿವೆ; ಕಣ್ಣಿಗೆ ಕಾಣದ ಗುಣಗಳು ಯಾ ತೊಡಕುಗಳು ಅದರಲ್ಲಿವೆ.
- meet the case ಸಂದರ್ಭಕ್ಕೆ ಸಾಕಷ್ಟಿರು, ಸಾಕಾಗಿರು.