See also 1major  3major
2major ಮೇಜರ್‍
ಗುಣವಾಚಕ
  1. (ಎರಡು ವಸ್ತುಗಳು, ವರ್ಗಗಳು, ಮೊದಲಾದವುಗಳ ಪೈಕಿ) ದೊಡ್ಡ; ಹಿರಿಯ; ಪ್ರಧಾನ; ಪ್ರಮುಖ: a major road ಪ್ರಧಾನ ರಸ್ತೆ. major war ದೊಡ್ಡ ಯುದ್ಧ. major consideration ಪ್ರಮುಖ ವಿಚಾರ.
  2. (ಸಂಗೀತ)
    1. (ಸ್ವರಾಂತರಗಳ ವಿಷಯದಲ್ಲಿ) ಲಘು ಸ್ಥಾಯಿಗಳಿಗಿಂತ ಅರ್ಧ ಸ್ವರ ಹೆಚ್ಚಾಗಿರುವ.
    2. (ಸ್ವರ ಸಂಯೋಜನೆಗಳ ವಿಷಯದಲ್ಲಿ) ಸ್ವರಶ್ರೇಣಿಯಲ್ಲಿ 3 ಮತ್ತು 4 ಹಾಗೂ 7 ಮತ್ತು 8ರ ನಡುವೆ ಅರ್ಧ ಸ್ವರದ ಅಂತರವುಳ್ಳ.
  3. ಹರೆಯಕ್ಕೆ ಬಂದ; ಪ್ರಾಪ್ತವಯಸ್ಕ; ಪ್ರಾಯಕ್ಕೆ ಬಂದ.
  4. (ಶಸ್ತ್ರಚಿಕಿತ್ಸೆಯ ವಿಷಯದಲ್ಲಿ) ದೊಡ್ಡ; ತೀವ್ರ ಸ್ವರೂಪದ ಯಾ ಜೀವಕ್ಕೆ ಅಪಾಯಕಾರಿಯಾದ.
  5. (ಬ್ರಿಟಿಷ್‍ ಪ್ರಯೋಗ) (ಮುಖ್ಯವಾಗಿ ಪಬ್ಲಿಕ್‍ ಶಾಲೆಗಳಲ್ಲಿ, ಕುಲನಾಮಕ್ಕೆ ಸೇರಿಸುವ ಪದ) ಇಬ್ಬರು ಸೋದರರಲ್ಲಿ ಹಿರಿಯ ಅಥವಾ ಶಾಲೆಗೆ ಮೊದಲು ಸೇರಿದ: Brown major (ಬ್ರಿಟಿಷ್‍ ಪ್ರಯೋಗ) ಹಿರಿಯ ಬ್ರೌನ್‍; ಶಾಲೆಗೆ ಪ್ರವೇಶಿಸಿದ ಬ್ರೌನ್‍ ಹೆಸರಿನ ಬಾಲಕರಲ್ಲಿ ಹಿರಿಯ ಇಲ್ಲವೇ ಮೊದಲಿಗ.
  6. (ತರ್ಕಶಾಸ್ತ್ರ)
    1. (ಪದದ ವಿಷಯದಲ್ಲಿ) ಮುಖ್ಯ; ಪ್ರತಿಜ್ಞೆಯ ಸಮರ್ಥನೆಯಲ್ಲಿ ಯಾ ನಿಗಮದಲ್ಲಿ ಬರುವ.
    2. (ಪ್ರತಿಜ್ಞೆಯ ವಿಷಯದಲ್ಲಿ) ಸಾಧ್ಯ ಪದವನ್ನು ಒಳಗೊಂಡಿರುವ.