See also 2large  3large
1large ಲಾರ್ಜ್‍
ಗುಣವಾಚಕ
  1. (ಅಳತೆ ಯಾ ವಿಸ್ತಾರದಲ್ಲಿ) ದೊಡ್ಡ; ಭಾರಿ.
  2. ದೊಡ್ಡಬಗೆಯ; ದೊಡ್ಡ: the large intestine ದೊಡ್ಡ ಕರುಳು.
  3. ವ್ಯಾಪಕವಾದ; ಸಮಗ್ರವಾದ; ವಿಶಾಲ ವ್ಯಾಪ್ತಿಯುಳ್ಳ; ಎಲ್ಲವನ್ನೂ ಒಳಗೊಳ್ಳುವ: large powers ವ್ಯಾಪಕವಾದ ಅಧಿಕಾರಗಳು.
  4. ದೊಡ್ಡ, ಭಾರಿ – ಪ್ರಮಾಣದ; ಬೃಹತ್ಪ್ರಮಾಣದ: large farmers ದೊಡ್ಡ ಬೇಸಾಯಗಾರರು.
  5. (ಪ್ರಾಚೀನ ಪ್ರಯೋಗ)
    1. ಉದಾರ(ವಾದ); ಹೇರಳ; ಧಾರಾಳವಾದ: large views ಉದಾರ ಅಭಿಪ್ರಾಯಗಳು. large charity ಧಾರಾಳವಾದ ದಾನ.
    2. ದಯಾಪರ; ದಯಾಳುವಾದ.
    3. ದಾನಶೀಲ; ಕೊಡುಗೈಯ.
  6. (ಕಲಾನಿರೂಪಣೆಯ ವಿಷಯದಲ್ಲಿ)
    1. ಮುಕ್ತ; ಸ್ವತಂತ್ರ; ತಡೆಯಿಲ್ಲದ; ನಿರ್ಬಂಧವಿಲ್ಲದ.
    2. ಸರಾಗವಾದ; ಸಲೀಸಾದ.
    3. ಸ್ಥೂಲವಾದ; ಒಟ್ಟಿನಲ್ಲಿಯ; ಒಟ್ಟಾರೆಯ.
    4. ಒಟ್ಟು – ನೋಟದ, ದೃಷ್ಟಿಯ; ಸಮಗ್ರವಾದ.
ಪದಗುಚ್ಛ

large of limb (ಮನುಷ್ಯರ ವಿಷಯದಲ್ಲಿ) ದೊಡ್ಡ ಕೈಕಾಲುಗಳುಳ್ಳ.

ನುಡಿಗಟ್ಟು
  1. large as life.
  2. larger than life.