See also 2knock
1knock ನಾಕ್‍
ಸಕರ್ಮಕ ಕ್ರಿಯಾಪದ
  1. (ಸದ್ದಾಗುವಂತೆ ಬಲವಾಗಿ) ಹೊಡೆ; ಬಡಿ; ಕುಟ್ಟು; ಗುದ್ದು: he knocked the table thrice ಅವನು ಮೇಜನ್ನು ಮೂರು ಬಾರಿ ಕುಟ್ಟಿದ.
  2. (ಯಾವುದನ್ನೇ) ಹೊಡೆದು (ಅದರಲ್ಲಿ ತೂತು ಮೊದಲಾದವನ್ನು) ಮಾಡು: knock a hole in the wall ಹೊಡೆದು ಗೋಡೆಯಲ್ಲಿ ತೂತು ಮಾಡು.
  3. (ಅಶಿಷ್ಟ) ಖಂಡಿಸು; ಕಟುವಾಗಿ ಟೀಕಿಸು; ವಾಕ್ಪ್ರಹಾರ ಮಾಡು.
  4. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಮನಸ್ಸಿನ ಮೇಲೆ ಬಲವಾಗಿ – ಅಚ್ಚೊತ್ತು, ಮುದ್ರೆಯೊತ್ತು, ಪ್ರಭಾವ ಬೀರು; ಬೆರಗುಂಟುಮಾಡು; ಚಕಿತಗೊಳಿಸು: what knocks me is his impudence ನನ್ನನ್ನು ಬೆರಗುಗೊಳಿಸುವುದೆಂದರೆ ಅವನ ಧಾರ್ಷ್ಟ್ಯ.
  5. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಪೆಟ್ಟು; ಸಂಭೋಗಿಸು; ಜಡಿ; ಗುಮ್ಮು.
  6. ಬಡಿದು, ಹೊಡೆದು (ವಸ್ತು, ವ್ಯಕ್ತಿಯನ್ನು)
    1. ಒಳಕ್ಕೆ ತಳ್ಳು, ಹೊಗಿಸು, ದೂಡು, ದಬ್ಬು: knocked the ball into the hole ಚೆಂಡನ್ನು ಕುಳಿಯೊಳಕ್ಕೆ ಹೊಡೆದೆ, ಕುಳಿಯೊಳಕ್ಕೆ ತಳ್ಳಿದೆ.
    2. ಹೊರಕ್ಕೆ, ಆಚೆಗೆ, ಮೊದಲಾಗಿ ಓಡಿಸು, ಅಟ್ಟು, ದೂಡು, ತಳ್ಳು: knocked those ideas out of his head ಆ ಭಾವನೆಗಳನ್ನು ನಾನು ಅವನ ತಲೆಯಿಂದ, ಮನಸ್ಸಿನಿಂದ ಆಚೆಗೆ ದೂಡಿದೆ, ಓಡಿಸಿದೆ, ಅಟ್ಟಿದೆ.
ಅಕರ್ಮಕ ಕ್ರಿಯಾಪದ
  1. (ಒಳಕ್ಕೆ ಪ್ರವೇಶಿಸಲು) ಬಾಗಿಲು ತಟ್ಟು; ಕದ ಬಡಿ: knock at the door ಕದ ತಟ್ಟು.
  2. (ಮೋಟಾರು ಯಾ ಇತರ ಎಂಜಿನ್ನು) (ಯಾವುದೋ ಭಾಗ ಸಡಿಲವಾಗಿ ಯಾ ಇತರ ಯಾಂತ್ರಿಕ ದೋಷದಿಂದ) ದಬದಬಿಸು; ದಬದಬ ಬಡಿದುಕೊ; ಲಟಲಟಿಸು; ಲಟಲಟ ಸದ್ದು ಮಾಡು.
  3. (ಯಂತ್ರದ ಎಂಜಿನ್ನಿನ ವಿಷಯದಲ್ಲಿ) (ಇಂಧನ ಸ್ಫೋಟದ ಪರಿಣಾಮವಾಗಿ) ಸಿಡಿಯುತ್ತಿರು; ಭಾರಿ ಸ್ಫೋಟಗಳ ಸದ್ದಿನ ಸರಣಿಯನ್ನು ಸೂಸು, ಹೊರಬಿಡು.
ಪದಗುಚ್ಛ
  1. knock about (or around)
    1. ಮತ್ತೆ ಮತ್ತೆ, ಮೇಲಿಂದ ಮೇಲೆ, ಪದೇ ಪದೇ – ಹೊಡೆ, ಬಡಿ, ಚಚ್ಚು.
    2. (ಒಬ್ಬನನ್ನು) ಒರಟಾಗಿ, ನಿಷ್ಠುರವಾಗಿ, ಕಠೋರವಾಗಿ – ಕಾಣು; (ಒಬ್ಬನ ವಿಷಯದಲ್ಲಿ) ಪ್ರೀತಿ, ದಯೆಗಳಿಲ್ಲದೆ ಯಾ ನಿರ್ದಯವಾಗಿ ವರ್ತಿಸು, ನಡೆದುಕೊ: he knocked his children about ಅವನು ತನ್ನ ಮಕ್ಕಳ ಬಗ್ಗೆ ನಿರ್ದಯವಾಗಿ ನಡೆದುಕೊಳ್ಳುತ್ತಿದ್ದ.
    3. ಅಕಸ್ಮಾತ್ತಾಗಿ, ಆಕಸ್ಮಿಕವಾಗಿ–(ಒಂದೆಡೆ) ಇರು, ಹಾಜರಿರು, ಉಪಸ್ಥಿತನಾಗಿರು.
    4. (ಕೆಲಸವಿಲ್ಲದೆ) ಅಲೆದಾಡುತ್ತಿರು; ಸುತ್ತಾಡುತ್ತಿರು.
    5. ಅವ್ಯವಸ್ಥಿತ ಬಾಳನ್ನು ಬದುಕು; ಗೊತ್ತು ಗುರಿಯಿಲ್ಲದ ಜೀವನ ನಡೆಸು.
  2. knock against
    1. (ಒಂದಕ್ಕೆ) ಬಡಿ; ಡಿಕ್ಕಿ ಹೊಡೆ: the car knocked against a tree ಕಾರು ಮರವೊಂದಕ್ಕೆ ಬಡಿಯಿತು, ಡಿಕ್ಕಿ ಹೊಡೆಯಿತು.
    2. (ರೂಪಕವಾಗಿ) (ಒಬ್ಬನನ್ನು) ಅಕಸ್ಮಾತ್ತಾಗಿ – ಕಾಣು, ಸಂಧಿಸು, ಎದುರು ಹಾಯು: I knocked against an old crony at the theatre ನಾಟಕಶಾಲೆಯಲ್ಲಿ ಅಕಸ್ಮಾತ್ತಾಗಿ ನನ್ನ ಹಳೆಯ ಗೆಳೆಯನೊಬ್ಬನನ್ನು ಕಂಡೆ.
  3. knock back (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ)
    1. (ಮುಖ್ಯವಾಗಿ ಗಬಗಬನೆ) ತಿನ್ನು; ಮುಕ್ಕು.
    2. (ಮುಖ್ಯವಾಗಿ ಗಟಗಟನೆ, ಬೇಗಬೇಗ) ಕುಡಿ.
    3. (ಎಣಿಕೆ, ಯೋಜನೆ, ಕಾರ್ಯಕ್ರಮ, ಮೊದಲಾದವನ್ನು) ಕೆಡಿಸು; ಅಸ್ತವ್ಯಸ್ತಗೊಳಿಸು.
    4. (ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍) (ಆಡುಮಾತು) ನಿರಾಕರಿಸು; ಧಿಕ್ಕರಿಸು.
  4. knock down
    1. (ವ್ಯಕ್ತಿ, ಬೇಟೆ, ಶತ್ರು ವಿಮಾನ, ಮೊದಲಾದವನ್ನು) ಹೊಡೆದುರುಳಿಸು; ಹೊಡೆದು ನೆಲಕ್ಕೆ ಬೀಳಿಸು: the hunter knocked the boar down ಬೇಡ ಕಾಡುಹಂದಿಯನ್ನು ಹೊಡೆದುರುಳಿಸಿದ. knocked down by the blazing sun, he died on the spot ಉರಿಬಿಸಿಲಿನ ಹೊಡೆತದಿಂದ ಅವನು ನಿಂತಲ್ಲೇ ಸತ್ತು ಬಿದ್ದ.
    2. (ಕಟ್ಟಡ ಮೊದಲಾದವನ್ನು) ಕೆಡವು; ಉರುಳಿಸು; ನೆಲಸಮ ಮಾಡು.
    3. (ರೂಪಕವಾಗಿ) (ವಾದ ಮೊದಲಾದವುಗಳಲ್ಲಿ) ಮೇಲುಗೈ ಸಾಧಿಸು; ಮಣಿಯಿಸು; ಸೋಲಿಸು.
    4. (ಹರಾಜಿನಲ್ಲಿ ಸುತ್ತಿಗೆ ಬಡಿದು) ಸವಾಲುದಾರನಿಗೆ ವಸ್ತುವನ್ನು – ಬಿಡು, ಕೊಡು, ವಹಿಸು.
    5. (ಆಡುಮಾತು) (ಒಬ್ಬನನ್ನು ಹಾಡಲು) ಕೂಗಿ – ಕರೆ, ಕೋರು.
    6. (ಆಡುಮಾತು) (ವಸ್ತುವಿನ) (ಬೆಲೆ) ಇಳಿಸು; ತಗ್ಗಿಸು; ಕಡಿಮೆ ಮಾಡು.
    7. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಕದಿ; ಲಪಟಾಯಿಸು; ಎಗರಿಸು.
    8. (ವಾಣಿಜ್ಯ) (ರವಾನೆಯಲ್ಲಿ ಜಾಗ ಉಳಿಸಲು ಯಂತ್ರ, ಪೀಠೋಪಕರಣ, ಮೊದಲಾದವುಗಳ) ಭಾಗಗಳನ್ನು – ಬೇರ್ಪಡಿಸು; ಕಳಚಿ ಹಾಕು.
    9. (ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍) (ಅಶಿಷ್ಟ) (ಸಂಬಳದ ಚೆಕ್ಕನ್ನು, ಹಣವನ್ನು) ಉಡಾಯಿಸು; ಖರ್ಚು ಮಾಡಿ ಬಿಡು.
  5. knock off
    1. (ತಲೆ ಮೊದಲಾದವನ್ನು) ಹೊಡೆದುರುಳಿಸು; ಏಟು ಕೊಟ್ಟು ಕೆಡವು; ಹೊಡೆದು ಹಾಕು: knock person’s head off (ಒಬ್ಬನ) ತಲೆ ಹಾರಿಸು; ತಲೆ ಕಡಿದು ಹಾಕು.
    2. (ರೂಪಕವಾಗಿ) (ಒಬ್ಬನನ್ನು) ಸುಲಭವಾಗಿ ಸೋಲಿಸು; ಸರಾಗವಾಗಿ ಮೀರಿಸು; ಶ್ರಮವಿಲ್ಲದಂತೆ ತಲೆ ಮೆಟ್ಟು.
    3. ಕೆಲಸ ಮುಗಿಸದೆ ನಿಲ್ಲಿಸು, ಸ್ಥಗಿತಗೊಳಿಸು: we knocked off at 5.30 ನಾವು ಐದೂವರೆಗೆ ಕೆಲಸ ನಿಲ್ಲಿಸಿದೆವು, ಸ್ಥಗಿತಗೊಳಿಸಿದೆವು.
    4. (ಕೆಲಸವನ್ನು) (ಮಾಡಿ) ಮುಗಿಸು; ಸಮಾಪ್ತಿಗೊಳಿಸು; ಕೊನೆಗೊಳಿಸು; ಪೂರ್ಣ ಮಾಡು: knocked off work early ಬೇಗ ಕೆಲಸ ಮುಗಿಸಿದೆವು.
    5. (ಆಡುಮಾತು) (ವ್ಯವಹಾರವನ್ನು) ಬೇಗಬೇಗ, ಅವಸರವಸರವಾಗಿ, ತ್ವರೆಯಿಂದ – ಮಾಡಿ ಮುಗಿಸು, ಪೂರ್ಣಗೊಳಿಸು.
    6. (ಆಡುಮಾತು) (ಪದ್ಯ ಮೊದಲಾದವನ್ನು) ಬೇಗ ಬೇಗ ರಚಿಸು; ಅವಸರವಸರವಾಗಿ ಹೆಣೆ, ತಯಾರಿಸು.
    7. (ಬೆಲೆ, ಬಿಲ್ಲು, ಮೊದಲಾದವುಗಳಿಂದ ಗೊತ್ತಾದ ಮೊಬಲಗನ್ನು) ಕಡಿಮೆ ಮಾಡು; ಕಡಿದು ಹಾಕು; ವಜಾ ಮಾಡು.
    8. (ಅಶಿಷ್ಟ) ಕದಿ; ಎಗರಿಸು; ಲಪಟಾಯಿಸು.
    9. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) (ಹೆಂಗಸನ್ನು) ಕೇಯು; ಸಂಭೋಗಿಸು.
    10. (ಅಶಿಷ್ಟ) ಕೊಲ್ಲು; ಕೊಂದು ಹಾಕು.
  6. knock on (ರಗ್ಬಿ ಚೆಂಡಾಟದಲ್ಲಿ) ಎದುರು ಪಕ್ಷದ ಗೋಲಿನತ್ತ (ಚೆಂಡನ್ನು) ಕೈಯಿಂದಲೋ, ತೋಳಿನಿಂದಲೋ ತಳ್ಳು, ದೂಡು, ನೂಕು.
  7. knock out
    1. ಚುಂಗಾಣಿಯನ್ನು (ಕುಟ್ಟಿ ಯಾ ತಟ್ಟಿ) – ಬರಿದು ಮಾಡು, ಖಾಲಿ ಮಾಡು; (ಅದರಲ್ಲಿನ ಬೂದಿ, ಕರಕು, ಮೊದಲಾದವನ್ನು) ಕೊಡವು.
    2. ತಲೆಯ ಮೇಲೆ ಮೊಟ್ಟಿ, ಹೊಡೆದು–(ಒಬ್ಬನಿಗೆ) ಪ್ರಜ್ಞೆ ತಪ್ಪಿಸು, (ಒಬ್ಬನನ್ನು) ಮೂರ್ಛೆ ಹೋಗಿಸು.
    3. (ಮುಷ್ಟಿಕಾಳಗದಲ್ಲಿ) (ಸಾಮಾನ್ಯವಾಗಿ ಹತ್ತೆಣಿಸುವುದರೊಳಗಾಗಿ) ಮೇಲೇಳದಂತೆ (ಮಲ್ಲನನ್ನು)–ಹೊಡೆದು ಕೆಡವು; ಹೊಡೆದುರುಳಿಸು.
    4. (ರೂಪಕವಾಗಿ) (ಮುಖ್ಯವಾಗಿ ಸ್ಪರ್ಧಾತ್ಮಕ ಪಂದ್ಯದಲ್ಲಿ) ಸೋಲಿಸು.
    5. ನಿಷ್ಪ್ರಯೋಜಕಗೊಳಿಸು; ನಿರುಪಯುಕ್ತವಾಗಿಸು; ಕೆಲಸಕ್ಕೆ ಬಾರದಂತೆ ಮಾಡು.
    6. (ಅಶಿಷ್ಟ) ಬೆರಗುಗೊಳಿಸು; ಚಕಿತಗೊಳಿಸು; ಅಚ್ಚರಿಗೊಳಿಸು; ಆಶ್ಚರ್ಯ ಹುಟ್ಟಿಸು.
    7. (ಅಶಿಷ್ಟ) (ಆತ್ಮಾರ್ಥಕ) ಸುಸ್ತಾಗು; ಸುಸ್ತು ಮಾಡಿಕೊ; ದಣಿದು ಹೋಗು: knocked themselves out swimming ಈಜಿ ಸುಸ್ತು ಮಾಡಿಕೊಂಡರು.
    8. (ಆಡುಮಾತು) (ಯೋಜನೆ ಮೊದಲಾದವನ್ನು) ಅವಸರವಸರವಾಗಿ ಮಾಡು; ಅವಸರದಲ್ಲಿ – ರಚಿಸು, ನಿರ್ಮಿಸು, ರೂಪಿಸು, ತಯಾರಿಸು.
    9. (ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍, ಅಮೆರಿಕನ್‍ ಪ್ರಯೋಗ, ಅಶಿಷ್ಟ)ಗಳಿಸು; ಸಂಪಾದಿಸು.
  8. knock sideways (ಆಡುಮಾತು) ಬೆರಗುಗೊಳಿಸು; ಅಚ್ಚರಿ ಹುಟ್ಟಿಸು.
  9. knock together ಅವಸರವಸರವಾಗಿ – ಕಲೆ ಹಾಕು, ಒಟ್ಟಿಗೆ ಸೇರಿಸು: he knocked together 50 runs ಅವನು ಅವಸರವಸರವಾಗಿ 50 ರನ್ನುಗಳನ್ನು ಸೇರಿಸಿದ.
  10. knock under ಮಣಿ; ಶರಣಾಗು; ಸೋಲೊಪ್ಪಿಕೊ; ಅಧೀನನಾಗು.
  11. knock up
    1. ಹೊಡೆದು ಮೇಲಕ್ಕೆ ದೂಡು, ತಳ್ಳು, ಏರಿಸು.
    2. ಅವಸರವಸರವಾಗಿ ಮಾಡು ಯಾ ಏರ್ಪಡಿಸು.
    3. (ಕ್ರಿಕೆಟ್‍) ಬೇಗ ಬೇಗ, ಕ್ಷಿಪ್ರವಾಗಿ (ರನ್ನುಗಳನ್ನು)–ಮಾಡು, ಗಳಿಸು.
    4. (ಬ್ರಿಟಿಷ್‍ ಪ್ರಯೋಗ) ಬಾಗಿಲು ತಟ್ಟಿ, ಕುಟ್ಟಿ, ಬಡಿದು (ಮಲಗಿರುವವನನ್ನು)– ಎಬ್ಬಿಸು, ಎಚ್ಚರಗೊಳಿಸು.
    5. ಸುಸ್ತಾಗು; ದಣಿದು ಹೋಗು.
    6. ಸುಸ್ತಾಗಿಸು; ದಣಿಸು; ಸುಸ್ತು ಮಾಡು.
    7. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಬಸಿರು ಮಾಡು; ಬಸಿರಾಗಿಸು.
    8. (ಚೆಂಡಾಟಗಳಲ್ಲಿ) ಪಂದ್ಯ ವಿಧ್ಯುಕ್ತವಾಗಿ ಶುರುವಾಗುವುದಕ್ಕಿಂತ ಮುಂಚೆ ಅಭ್ಯಾಸ ನಡೆಸು, ಮಾಡು; ಅಭ್ಯಾಸಕ್ಕಾಗಿ ಚೆಂಡನ್ನು ಅಲ್ಲಿಂದಿಲ್ಲಿಗೆ – ಹೊಡೆಯುತ್ತಿರು ಯಾ ಒದೆಯುತ್ತಿರು.
ನುಡಿಗಟ್ಟು
  1. knock into a cocked hat (ಯಾವುದನ್ನೇ ಯಾ ಯಾರನ್ನೇ) ಪೂರ್ತಿ – ಸೋಲಿಸು, ಮೀರಿಸು, ಜಜ್ಜಿ ಹಾಕು.
  2. knock into $^2$shape. (ಯಾರನ್ನೇ ಯಾ ಯಾವುದನ್ನೇ)
    1. ಸರಿಯಾದ ರೂಪಕ್ಕೆ ತರು; ಉತ್ತಮ ಸ್ಥಿತಿಗೆ ತರು.
    2. ದರ್ಶನೀಯವಾಗಿಸು; ಅಂದವಾಗಿ ಕಾಣುವಂತೆ ಮಾಡು.
    3. ದಕ್ಷವಾಗಿರುವಂತೆ, ಸಮರ್ಥವಾಗಿರುವಂತೆ – ಮಾಡು.
  3. knock one into the middle of next week ಹೊಡೆದಟ್ಟು; ಒದ್ದೋಡಿಸು.
  4. knock one’s head against
    1. (ಗೋಡೆ ಮೊದಲಾದವಕ್ಕೆ) ತಲೆ – ಬಡಿದುಕೊ, ತಾಕಿಸಿಕೊ.
    2. (ಪ್ರತಿಕೂಲ ಘಟನೆ, ಪರಿಸ್ಥಿತಿಗಳೊಡನೆ) ಹೋರಾಡು; ಅಹಿತ ಘರ್ಷಣೆಗೆ ಬರು; ತಲೆ ಚಚ್ಚಿಕೊ.
  5. knock on the head
    1. ತಲೆಯ ಮೇಲೆ ಚಚ್ಚಿ ಯಾ ಬಡಿದು (ವ್ಯಕ್ತಿಯನ್ನು) ಮೂರ್ಛೆ ಹೋಗಿಸು ಯಾ ಕೊಲ್ಲು.
    2. (ರೂಪಕವಾಗಿ) (ಹಂಚಿಕೆ, ಯೋಜನೆ, ಮೊದಲಾದವನ್ನು) ತಲೆ ಎತ್ತದಂತೆ ಮಾಡು; ಮೆಟ್ಟು; ಅಡಗಿಸು; ನಾಶಗೊಳಿಸು.
  6. knock spots off ಸುಲಭವಾಗಿ ಸೋಲಿಸು.
  7. knock the $^1$bottom out of (ವಾದ ಮೊದಲಾದವನ್ನು) ಬುಡವಿಲ್ಲದ್ದೆಂದು, ನಿರಾಧಾರವೆಂದು, ನಿರುಪಯುಕ್ತವೆಂದು – ತೋರಿಸು, ಸಾಧಿಸು, ಪ್ರಮಾಣೀಕರಿಸು.