See also 1knock
2knock ನಾಕ್‍
ನಾಮವಾಚಕ
  1. ಏಟು (ಹೊಡೆಯುವಿಕೆ, ಹೊಡೆಯುವುದು); ತಾಡನ.
  2. (ಬಲವಾದ ಯಾ ಸದ್ದು ಕೇಳುವಂಥ) ಏಟು; ಪೆಟ್ಟು; ಹೊಡೆತ; ಬಡಿತ.
  3. (ಮುಖ್ಯವಾಗಿ ಬಾಗಿಲು) ತಟ್ಟುವಿಕೆ ಯಾ ತಟ್ಟುವ ಶಬ್ದ; ತಾಡನ.
  4. (ಮೋಟಾರು ಮೊದಲಾದವುಗಳ ಎಂಜಿನುಗಳಲ್ಲಿ ಆಗುವ) ದಡದಡಿಕೆ; ಲಟಲಟ, ದಬದಬ ಶಬ್ದ.
  5. (ಆಡುಮಾತು) (ಕ್ರಿಕೆಟ್‍ನಲ್ಲಿಯ) ಒಂದು ಇನಿಂಗ್ಸ್‍.
ಪದಗುಚ್ಛ

knock for knock agreement ಹೊಣೆರಹಿತ ಪಾವತಿ ಒಪ್ಪಂದ; ಸ್ವಂತ ಪಾವತಿ ಒಪ್ಪಂದ; ಏಟಿಗೆ ಮಾರೇಟಿನ ಒಪ್ಪಂದ; ಹೊಣೆಗಾರಿಕೆಯನ್ನು ಲೆಕ್ಕಿಸದೆ ವಿಮಾ ಕಂಪೆನಿಗಳು ತಮ್ಮಲ್ಲಿ ಪ್ರತಿಯೊಂದೂ ತನ್ನ ಸ್ವಂತ ಪಾಲಿಸಿದಾರರಿಗೆ ಹಣ ನೀಡುವುದಾಗಿ ತಮ್ಮ ತಮ್ಮ ನಡುವೆ, ಪರಸ್ಪರ ಮಾಡಿಕೊಂಡ ಒಪ್ಪಂದ.

ನುಡಿಗಟ್ಟು

take a (or the) knock

  1. (ಆರ್ಥಿಕವಾಗಿ) ಬಲವಾದ ಪೆಟ್ಟು, ಹೊಡೆತ ತಿನ್ನು; ಭಾರಿ ನಷ್ಟ ಅನುಭವಿಸು.
  2. (ಭಾವನಾತ್ಮಕವಾಗಿ) ಬಲವಾದ ಪೆಟ್ಟು, ಹೊಡೆತ ತಿನ್ನು; ಭಾರಿ ನೋವು, ಆಘಾತ ಅನುಭವಿಸು.