See also 1shape
2shape ಷೇಪ್‍
ನಾಮವಾಚಕ
  1. (ಹೊರ, ಬಾಹ್ಯ) ರೂಪ; ಆಕಾರ; ಆಕೃತಿ: spherical in shape ಗೋಳಾಕಾರದ. it has the shape of a boat ಅದಕ್ಕೆ ದೋಣಿಯ ಆಕಾರವಿದೆ.
  2. (ವ್ಯಕ್ತಿಯ ಯಾ ವಸ್ತುವಿನ) ಹೊರನೋಟ; ತೋರ್ಕೆ; ರೂಪ; ಆಕೃತಿ; ಆಕಾರ; ವೇಷ: monster in human shape ಮಾನವಾಕೃತಿಯ, ಮಾನವ – ರೂಪದ, ವೇಷದ ಪೆಡಂಭೂತ.
  3. ನಿರ್ದಿಷ್ಟ – ರೂಪ, ಆಕಾರ: his intention took shape in action ಅವನ ಸಂಕಲ್ಪವು ಕಾರ್ಯರೂಪ ತಾಳಿತು. he showed me politeness in the shape of an invitation ಆಹ್ವಾನ ಕೊಡುವ ರೂಪದಲ್ಲಿ ಅವನು ತನ್ನ ವಿನಯವನ್ನು ತೋರಿಸಿದ.
  4. ರೀತಿ; ಬಗೆ; ಪ್ರಕಾರ: he made no approach in any shape (or form ) ಅವನು ಯಾವುದೇ ರೀತಿಯಲ್ಲೂ, ಪ್ರಕಾರದಲ್ಲೂ ಯಾವ ಸಂಧಾನವನ್ನೂ ಮಾಡಲಿಲ್ಲ.
  5. ಸ್ಪಷ್ಟ ಯಾ ಸರಿಯಾದ – ರೂಪ, ಆಕಾರ; ಕ್ರಮ; ವ್ಯವಸ್ಥೆ: get one’s ideas into shape ತನ್ನ ಭಾವನೆಗಳಿಗೆ ಸ್ಪಷ್ಟ ರೂಪ ಕೊಡು; ತನ್ನ ಭಾವನೆಗಳನ್ನು ಸರಿಯಾಗಿ ವ್ಯವಸ್ಥೆಗೊಳಿಸು. give shape to (ಯಾವುದಕ್ಕೇ ಆಗಲಿ) ರೂಪ ಕೊಡು; ಸರಿಯಾದ ವ್ಯವಸ್ಥೆ ಕಲ್ಪಿಸು.
    1. (ವಿಶೇಷಣವಿರುವಾಗ ಆ ವಿಶೇಷಣಕ್ಕೆ ತಕ್ಕ) ಸ್ಥಿತಿ: in bad shape ದುಃಸ್ಥಿತಿಯಲ್ಲಿ; ಹದಗೆಟ್ಟ ಸ್ಥಿತಿಯಲ್ಲಿ. in good shape ಒಳ್ಳೆಯ ಸ್ಥಿತಿಯಲ್ಲಿ. in poor shape ಅಷ್ಟೇನೂ ಉತ್ತಮವಲ್ಲದ ಸ್ಥಿತಿಯಲ್ಲಿ.
    2. (ವಿಶೇಷಣರಹಿತವಾಗಿ) ಸುಸ್ಥಿತಿ; ಉತ್ತಮ ಸ್ಥಿತಿ: back in shape ಮತ್ತೆ ಸುಸ್ಥಿತಿಯಲ್ಲಿ.
  6. ಅಸ್ಪಷ್ಟಾಕೃತಿ; ಛಾಯೆ; (ಯಾವುದೋ) ಅಸ್ಪಷ್ಟ – ರೂಪ, ಆಕಾರ, ಮೂರ್ತಿ; ಪ್ರತ್ಯಕ್ಷವಾಗಿ ಕಂಡ ಯಾ ಕಲ್ಪಿಸಿಕೊಂಡ ವ್ಯಕ್ತಿ, ವಸ್ತು, ಭೂತ, ಪ್ರೇತ, ಮೊದಲಾದವುಗಳ ಆಕಾರ: a shape loomed through the mist ಆ ಮಂಜಿನ ರಾಶಿಯಲ್ಲಿ ಯಾವುದೋ ಒಂದು ಆಕೃತಿ ಬೆಳೆಯುತ್ತಾ ಬಂತು. a grim mysterious shape stalked towards me ಒಂದು ಉಗ್ರ, ವಿಚಿತ್ರ ಆಕಾರವು ನನ್ನ ಕಡೆಗೆ ಧಾವಿಸಿ ಬಂತು.
  7. (ಕಸಬಉದಾರನ) ಮಾದರಿ; ಅಚ್ಚು (ಉದಾ. ಹ್ಯಾಟು, ಬೆಲ್ಲ, ಮೊದಲಾದವುಗಳ ಮಾದರಿ ಯಾ ಅಚ್ಚು).
  8. (ಅಚ್ಚಿನಲ್ಲಿ ತಯಾರಿಸಿದ, ದೂಧ್‍ಪೇಡಾದಂತಹ) ಗಟ್ಟಿ ಹಲ್ವ, ಜೆಲ್ಲಿ, ಮೊದಲಾದವು.
  9. ಒಂದು ವಿಶಿಷ್ಟ ರೂಪದಲ್ಲಿ ತಯಾರಿಸಿದ, ಕತ್ತರಿಸಿದ ಯಾವುದೇ ಸಾಮಗ್ರಿ, ಕಾಗದ, ಮೊದಲಾದವು.
ಪದಗುಚ್ಛ
  1. in the shape of (-ರ) ರೀತಿಯಲ್ಲಿ; ರೂಪದಲ್ಲಿ.
  2. lick (or knock or whip someone/thing) into shape (ಯಾರನ್ನೇ ಯಾ ಯಾವುದನ್ನೇ)
    1. ಸರಿಯಾದ ರೂಪಕ್ಕೆ ತರು; ಉತ್ತಮ ಸ್ಥಿತಿಗೆ ತರು.
    2. ದರ್ಶನೀಯವಾಗಿಸು; ಅಂದವಾಗಿ ಕಾಣುವಂತೆ ಮಾಡು.
    3. ದಕ್ಷವಾಗಿರುವಂತೆ, ಸಮರ್ಥವಾಗಿರುವಂತೆ – ಮಾಡು.
  3. out of shape
    1. ತನ್ನ ಸಹಜವಾದ ಯಾ ಮೂಲರೂಪ ಕೆಟ್ಟಿರು; ಆಕಾರ ಕಳೆದುಕೊಂಡಿರು; ಆಕಾರದಲ್ಲಿಲ್ಲದಿರು.
    2. ಶಾರೀರಕವಾಗಿ ದುಃಸ್ಥಿತಿಯಲ್ಲಿರು, ಅಸ್ವಸ್ಥವಾಗಿರು.
  4. take shape ನಿರ್ದಿಷ್ಟ ಆಕಾರ ತಳೆ, ರೂಪ – ತಾಳು, ಹೊಂದು.