See also 2kin
1kin ಕಿನ್‍
ನಾಮವಾಚಕ
  1. ಬುಡಕಟ್ಟು; ಮನೆತನ; ಕುಲ; ವಂಶ: he comes of good kin ಅವನು ಒಳ್ಳೆಯ ಮನೆತನದಲ್ಲಿ ಹುಟ್ಟಿದವನು, ಸತ್ಕುಲಪ್ರಸೂತ.
  2. ಬಳಗ; ನೆಂಟರು; ಬಂಧುಗಳು; ಬಂಧುವರ್ಗ.
ಪದಗುಚ್ಛ
  1. kith and kin ನಂಟರಿಷ್ಟರು; ಬಂಧು ಬಳಗ; ಬಂಧುಮಿತ್ರರು.
  2. near of kin ಹತ್ತಿರದ ನಂಟಿನ; ಸಮೀಪಬಾಂಧವ್ಯದ.
  3. $^4$next of kin (ಬದುಕಿರುವವರಲ್ಲಿ) ಹತ್ತಿರದ ನೆಂಟರು; ಸಮೀಪ ಬಂಧುಗಳು.
  4. of kin
    1. ರಕ್ತ ಸಂಬಂಧದ; ನಂಟಿನ; ನಂಟಸ್ತಿಕೆಯುಳ್ಳ; ಬಾಂಧವ್ಯದ; ನಂಟಸ್ತನದ.
    2. (ರೂಪಕವಾಗಿ) ಸಮಾನ ಸ್ವಭಾವದ; ಒಂದೇ ಬಗೆಯ ಸ್ವಭಾವವುಳ್ಳ.