See also 1hard  2hard
3hard ಹಾರ್ಡ್‍
ಕ್ರಿಯಾವಿಶೇಷಣ
  1. ಕಷಪಟ್ಟು; ಶ್ರಮದಿಂದ; ಪ್ರಯಾಸದಿಂದ; ಕಷ್ಟದಿಂದ: try hardಕಷ್ಪಪಟ್ಟು ಪ್ರಯತ್ನಿಸು. hard earned ಕಷ್ಟಾರ್ಜಿತ; ಕಷ್ಪಪಟ್ಟು ಸಂಪಾದಿಸಿದ.
  2. ಉಗ್ರವಾಗಿ; ಪ್ರಚಂಡವಾಗಿ; ಜೋರಾಗಿ; ತೀವ್ರವಾಗಿ; ಬಿರುಸಾಗಿ: raining hard ಮಳೆ ಬಿರುಸಾಗಿ ಬೀಳುತ್ತಿದೆfreezing hard ಜೋರಾಗಿ ಹೆಪ್ಪುಗಟ್ಟುತ್ತಿದೆlook hard ಬಿರುಸಾಗಿ, ಬಿರುಗಣ್ಣಿನಿಂದ ನೋಡು.
  3. (ನೌಕೆ.) ಪೂರ್ಣವಾಗಿ; ಪೂರ್ತಿಯಾಗಿ: hard a-port (ನೌಕೆಯನ್ನು) ಬಂದರಿಗೆ ಪೂರ್ತಿ ಹತ್ತಿರ (ಒಯ್ದು) ನಿಲ್ಲಿಸು!
  4. ಗಡುಸಾಗುವಂತೆ; ಗಟ್ಟಿಯಾಗುವಂತೆ: hard baked ಗಟ್ಟಿಯಾಗುವಂತೆ ಬೇಯಿಸಿದ.
ನುಡಿಗಟ್ಟು
  1. be hard on:
    1. (ಟೀಕೆಯಲ್ಲಿ ಯಾ ನಡವಳಿಕೆಯಲ್ಲಿ) ಅತಿ ಕಟುವಾಗಿರು; ಉಗ್ರವಾಗಿರು; ಕಠೋರವಾಗಿರು; ನಿಷ್ಠುರವಾಗಿರು: don’t be too hard on him ಅವನನ್ನು ಬಹುಕಟುವಾಗಿ ಟೀಕಿಸಬೇಡ; ಅವನೊಡನೆ ಬಹು ಕಠಿಣವಾಗಿ ನಡೆದುಕೊಳ್ಳಬೇಡ:
    2. (ಪರಿಸ್ಥಿತಿ, ಸಂದರ್ಭ) ವಿಪರೀತ ಕಷ್ಟವಾಗಿರು; ಅತಿ ಕಠಿನವಾಗಿರು; ತೀವ್ರವಾಗಿರು:
    3. ಇಂದ್ರಿಯಗಳಿಗೆ ಅಹಿತಕರವಾಗಿರು:
  2. be hard put to it ಕಷ್ಟಕ್ಕೆ ಸಿಕ್ಕು; ಕಷ್ಟದಲ್ಲಿರು; ತೊಂದರೆಯಾಗು: we were hard put to it to finish the lessons in the required length of time ಕೊಟ್ಟ ಕಾಲಾವಧಿಯಲ್ಲಿ ಪಾಠಗಳನ್ನು ಮುಗಿಸುವುದು ನಮಗೆ ಕಷ್ಟವಾಯಿತು:
  3. be hard up ಹಣವಿಲ್ಲದಿರು; ಕಾಸಿಲ್ಲದಿರು; ಹಣವಿಲ್ಲದ ಕಷ್ಟಕ್ಕೆ, ಪರಿಸ್ಥಿತಿಗೆ ಸಿಕ್ಕು:
  4. be hard up for (something) (ಯಾವುದರದೇ) ಮುಗ್ಗಟ್ಟಿರು; ಕೊರತೆಯಿರು; ಅಭಾವವಿರು: the country is hard up for doctors ದೇಶದಲ್ಲಿ ವೈದ್ಯರ ಕೊರತೆಯಿದೆ:
  5. die hard:
    1. ಬಹಳ ಹೋರಾಡಿಯೇ ಸಾಯು:
    2. (ನಂಬಿಕೆ, ಸಿದ್ಧಾಂತ, ಮೊದಲಾದವುಗಳ ವಿಷಯದಲ್ಲಿ) ಸುಲಭವಾಗಿ – ಸೋಲದಿರು, ಮಣಿಯದಿರು, ಹೋಗದಿರು, ಅಳಿಯದಿರು: racial prejudice dies hard ವರ್ಣದ್ವೇಷ ಬಡಪಟ್ಟಿಗೆ ಹೋಗುವುದಿಲ್ಲ.
  6. go hard but ಮಿತಿಮೀರಿದ ಅಡಚಣೆಗಳು, ಕಷ್ಟಗಳು ಅಡ್ಡಬರದಿದ್ದರೆ: it shall go hard but I will find them ಮಿತಿಮೀರಿದ ಕಷ್ಟಗಳು ಅಡ್ಡಬರದಿದ್ದರೆ ನಾನು ಅವರನ್ನು ಪತ್ತೆ ಮಾಡುವೆನು.
  7. go hard with (person) (ವ್ಯಕ್ತಿಗೆ) ಅನನುಕೂಲವಾಗು; ಪ್ರತಿಕೂಲವಾಗಿ ಪರಿಣಮಿಸು.
  8. hard at it ಆಡುಮಾತು (ಯಾವುದೇ ಕೆಲಸವನ್ನು) ಕಷ್ಟಪಟ್ಟು, ಶ್ರಮವಹಿಸಿ, ಪಟ್ಟು ಹಿಡಿದು – ಮಾಡುತ್ತಾ.
  9. hard by ತೀರ ಹತ್ತಿರ; ಬಳಿಯಲ್ಲಿ; ಸಮೀಪದಲ್ಲಿ: the house is hard by the river ಮನೆಯು ನದಿಯ ಸಮೀಪದಲ್ಲಿದೆ.
  10. hard cheese (ಅಶಿಷ್ಟ) ದುರದೃಷ್ಟ.
  11. hard done by ನಿರ್ದಯದ ಯಾ ಅನ್ಯಾಯದ ವರ್ತನೆಗೆ ಒಳಗಾದ.
  12. hard hit ಬಹು ತೊಂದರೆಗೆ ಸಿಕ್ಕಿದ; ವಿಪರೀತ ಕಷ್ಟಕ್ಕೆ ಗುರಿಯಾದ. he was hard hit in the slump after the war ಯುದ್ಧಾನಂತರದ ಬೆಲೆ ಕುಸಿತದಲ್ಲಿ ಅವನು ವಿಪರೀತ ಕಷ್ಟಕ್ಕೆ ಗುರಿಯಾದ.
  13. hard on (or upon) ಹಿಂದೆಯೇ; ಬೆನ್ನು ಹತ್ತಿ; ಹತ್ತಿರ ಹತ್ತಿರ: you are hard upon sixty ನಿನಗೆ ಹತ್ತಿರ ಹತ್ತಿರ ಅರುವತ್ತು ವಯಸ್ಸು.
  14. run(person)hard (ವ್ಯಕ್ತಿಯನ್ನು) ಬಿಡದೆ ಬೆನ್ನು ಹತ್ತು.