See also 2hard  3hard
1hard ಹಾರ್ಡ್‍
ಗುಣವಾಚಕ
  1. ಗಟ್ಟಿ(ಯಾದ); ಕಠಿಣ; ದೃಢ; ಗಡಸು; ಮೆತುವಲ್ಲದ; ಒತ್ತಡಕ್ಕೆ ಬಗ್ಗದ; ಸುಲಭವಾಗಿ ಕತ್ತರಿಸಲಾಗದ: as hard as rock ಬಂಡೆಯಷ್ಟು ಗಟ್ಟಿಯಾಗಿರುವ.
  2. ಕಷ್ಟವಾದ; ಕಠಿಣ; ಕ್ಲಿಷ್ಟ; ಪ್ರಯಾಸದ; ಸುಲಭಸಾಧ್ಯವಲ್ಲದ.
  3. ಅರ್ಥ ಮಾಡಿಕೊಳ್ಳಲು ಯಾ ವಿವರಿಸಲು ಕಷ್ಟವಾದ; ಕ್ಲಿಷ್ಟ; ತೊಡಕಿನ: hard question ಕ್ಲಿಷ್ಟ ಪ್ರಶ್ನೆ.
  4. (ವ್ಯಕ್ತಿಯಲ್ಲಿ ಯಾ ವರ್ತನೆಯಲ್ಲಿ) ದಯೆಯಿಲ್ಲದ; ನಿರ್ದಯ; ನಿಷ್ಕರುಣೆಯ; ಕಠೋರ; ನಿಷ್ಠುರ; ಕಟು.
  5. ಅನ್ಯಾಯವಾದ; ಮಿತಿಮೀರಿದ ಯಾ ಅನ್ಯಾಯವಾದ ಸಂಕಷ್ಟಕ್ಕೆ ಗುರಿ ಮಾಡುವ: hard cases make bad law ಅನ್ಯಾಯವಾದ ಹಾಗೂ ಕಷ್ಟಕ್ಕೆ ಗುರಿ ಮಾಡುವ ಮೊಕದ್ದಮೆಗಳು (ವ್ಯವಹಾರಗಳು) ಕ್ರೂರ ಶಾಸನಕ್ಕೆ ಕಾರಣವಾಗುತ್ತವೆ.
  6. ಜಿಪುಣ; ಜುಗ್ಗ; ಕೃಪಣ; ಲೋಭಿತನದ.
  7. ಸಹಿಸಲು ಕಷ್ಟವಾದ; ಅಸಹನೀಯ; ದುರ್ಭರ: hard life ಕಷ್ಟದ ಜೀವನ. hard times ಕಷ್ಟಕಾಲ; ದುರ್ದಶೆ; ಕಷ್ಟದ ಅವಧಿ.
    1. (ಕಣ್ಣಿಗೆ) ಅಪ್ರಿಯ: ಅಹಿತ: hard colours ಅಹಿತ ಬಣ್ಣಗಳು.
    2. (ಕಿವಿಗೆ) ಕರ್ಕಶ; ಕಟುವಾದ; ಬಿರುಸಾದ: hard voice ಕರ್ಕಶ ಧ್ವನಿ.
  8. (ಮದ್ಯದ ವಿಷಯದಲ್ಲಿ):
    1. ಬಹಳ ಮದ್ಯಸಾರವುಳ್ಳ; ತೀಕ್ಷ್ಣ.
    2. ಮತ್ತುಬರಿಸುವ; ಅಮಲೇರಿಸುವ.
  9. (ಬೆಲೆಗಳು ಮತ್ತು ಮಾರುಕಟ್ಟೆಗಳ ವಿಷಯದಲ್ಲಿ) ತುಟ್ಟಿಯಾದ; ದುಬಾರಿ; ಏರಿದ; ಬಿಗಿಯ ಮೇಲಿರುವ; ಇಳಿವರಿ ಸೂಚನೆಯಿಲ್ಲದ.
  10. (ಭಾಷಾಶಾಸ್ತ್ರ)ಕರ್ಕಶ; ಪರುಷ; ಅಘೋಷ: k, t, and p are hard as opposed to g, d, and b ಜಿ, ಡಿ ಮತ್ತು ಬಿ ಗಳಿಗೆ ವ್ಯತಿರೇಕವಾಗಿ ಕೆ, ಟಿ ಮತ್ತು ಪಿ ಕರ್ಕಶ (ವರ್ಣಗಳು).
  11. (ಭಾಷಾಶಾಸ್ತ್ರ) ಕಂಠ್ಯ; ಕಂಠಸ್ಥಾನದಲ್ಲಿ ಹುಟ್ಟುವ: C is hard in ‘cat’‘cat’ ನಲ್ಲಿ C ಕಂಠ್ಯ (ವರ್ಣ).
  12. ಕಷ್ಟದ; ಶ್ರಮಪಡಿಸುವ; ದಣಿಸುವ: hard fight ಶ್ರಮದ ಕಷ್ಟದ ಹೋರಾಟ. hard worker ಕಷ್ಟದಾಳು; ಕಷ್ಟಪಟ್ಟು ದುಡಿಯುವವನು; ಶ್ರಮಜೀವಿ.
  13. (ಸಾಕ್ಷಗಳು, ಪುರಾವೆಗಳು – ಇವುಗಳ ವಿಷಯದಲ್ಲಿ) ನಂಬಲರ್ಹವಾದ; ನೆಚ್ಚಬಹುದಾದ; ಗಟ್ಟಿ; ದೃಢ; ನಿರ್ವಿವಾದವಾದ; ವಿಶ್ವಸನೀಯ; ಶ್ರದ್ಧೆಯ; ಶ್ರದ್ಧಾರ್ಹ; ವಿಶ್ವಾಸಾರ್ಹ: hard facts ನಿರ್ವಿವಾದ ಅಂಶಗಳು, ಸಂಗತಿಗಳು; ವಾದಕ್ಕೆ ಆಸ್ಪದವಿಲ್ಲದ ವಾಸ್ತವಾಂಶಗಳು.
  14. (ವಿಕಿರಣದ ವಿಷಯದಲ್ಲಿ) ತೀಕ್ಷ್ಣವೇಧಕ; ತೀಕ್ಷ್ಣಭೇದಿ; ತೀವ್ರವಾಗಿ ಒಳನುಗ್ಗುವ ಸಾಮರ್ಥ್ಯವುಳ್ಳ.
  15. (ಋತು, ಹವಾ – ಇವುಗಳ ವಿಷಯದಲ್ಲಿ) ತೀವ್ರ; ತೀಕ್ಷ್ಣ; ಚುರುಕಾದ; ಮುಖ್ಯವಾಗಿ ಹಿಮಬೀಳುತ್ತಿರುವ: hard winter ತೀವ್ರ ಚಳಿಗಾಲ; ಹಿಮದಿಂದ ಕೂಡಿದ ಚಳಿಗಾಲ.
  16. (ವ್ಯಾಪಾರದ ವಿಷಯದಲ್ಲಿ) ರಿಯಾಯಿತಿ ಇಲ್ಲದ: hard bargain ರಿಯಾಯಿತಿ ಇಲ್ಲದ ವ್ಯಾಪಾರ; ಬಿಗಿ ವ್ಯಾಪಾರ.
  17. (ಮಾದಕ ವಸ್ತುವಿನ ವಿಷಯದಲ್ಲಿ) ತೀರ ಪ್ರಬಲವಾಗಿದ್ದು, ಚಟವನ್ನುಂಟುಮಾಡುವ, ಗೀಳು ಹುಟ್ಟಿಸುವ.
  18. (ನೀರಿನ ವಿಷಯದಲ್ಲಿ) ಗಡುಸಾದ; ಸಾಬೂನು ಸುಲಭವಾಗಿ ಕರಗದ ಯಾ ನೊರೆ ಕೊಡದ; ಖನಿಜ ಲವಣಗಳು ಹೆಚ್ಚಾಗಿರುವ.
  19. (ಅಶ್ಲೀಲ ಸಾಹಿತ್ಯದ ವಿಷಯದಲ್ಲಿ) ತೀರ ಅಶ್ಲೀಲವಾದ.
  20. (ಸ್ಟಾಕ್‍ ಎಕ್ಸ್‍ಚೇಂಜ್‍) (ಕರೆನ್ಸಿ ಬೆಲೆಗಳು, ಮೊದಲಾದವುಗಳ ವಿಷಯದಲ್ಲಿ) ಉತ್ತಮ ಬೆಲೆಯ; ಏರು ಬೆಲೆಯ; ಉನ್ನತ ಮೌಲ್ಯದ; ಮೌಲ್ಯದಲ್ಲಿ, ಬೆಲೆಯಲ್ಲಿ ಕುಸಿಯುವ ಸಾಧ್ಯತೆಯಿಲ್ಲದ.
ಪದಗುಚ್ಛ

hard of hearing ತುಸು ಕಿವುಡಾದ; ಕಿವಿಮಂದವಾದ.

ನುಡಿಗಟ್ಟು
  1. (do thing) the hard way:
    1. (ಇತರರ ನೆರವಿಲ್ಲದೆ) ಖುದ್ದು ಮಾಡು; ಸ್ವಪ್ರಯತ್ನದಿಂದಲೇ ಮಾಡು.
    2. ಕಹಿಯಾದ ಅನುಭವ ಪಡೆದು ಬಳಿಕ ಮಾಡು.
  2. drive a hard bargain (ವ್ಯಾಪಾರ, ವ್ಯವಹಾರಗಳಲ್ಲಿ) ಬಿಗಿ ವ್ಯವಹಾರ ನಡೆಸು; ತನಗೆ ಅನುಕೂಲವಾಗಿರುವ ಒಪ್ಪಂದವನ್ನು ಹೇರು, ಒತ್ತಾಯಿಸು, ಬಲಾತ್ಕರಿಸು.
  3. hard and fast (ನಿಯಮಗಳ ವಿಷಯದಲ್ಲಿ) ಕಟ್ಟುನಿಟ್ಟಾದ; ಬಿಗಿಯಾದ; ನಿಷ್ಠುರ; ಕಠೋರ:hard and fast rules ಕಂಠಿನ ನಿಯಮಗಳು.
  4. hard as nails ಕಲ್ಲೆದೆಯ; ಕಠಿನ ಹೃದಯದ; ಕರುಣೆ, ಸಹಾನುಭೂತಿ ಇಲ್ಲದ.
  5. hard nut to crack ಕಬ್ಬಿಣದ ಕಡಲೆ; ಉಕ್ಕಿನ ಕಡಲೆ:
    1. ಕಠಿಣ ಸಮಸ್ಯೆ; ಸುಲಭವಾಗಿ ಅರ್ಥವಾಗದ ಯಾ ಬಿಡಿಸಲಾಗದ ಯಾ ನಿರ್ವಹಿಸಲಾಗದ ವಿಷಯ.
    2. ಆಂತರ್ಯ ತಿಳಿಯಲಾಗದ ಯಾ ಪ್ರಭಾವಕ್ಕೊಳಪಡದ ಯಾ ಬಗ್ಗಿಸಲಾಗದ ವ್ಯಕ್ತಿ.
  6. hard row to hoe ಕಷ್ಟದ ಕೆಲಸ; ಪ್ರಯಾಸದ ಕೆಲಸ.