See also 2field  3field
1field ಹೀಲ್ಡ್‍
ನಾಮವಾಚಕ
  1. ನೆಲ; ಭೂಮಿ; ಹೊಲ; ಜಈನು; ಕ್ಷೇತ್ರ; ಗದ್ದೆ; ಹುಲ್ಲುಗಾವಲು.
  2. (ಯಾವುದೇ) ಸ್ವಾಭಾವಿಕ ಉತ್ಪನ್ನ ಹೇರಳವಾಗಿ ದೊರಕುವ ಕ್ಷೇತ್ರ; ಪ್ರದೇಶ: diamond field ವಜ್ರ ಪ್ರದೇಶ. coal field ಕಲ್ಲಿದ್ದಲು ಪ್ರದೇಶ.
  3. ಯುದ್ಧಭೂಮಿ; ರಣರಂಗ; ಕಳ; ಕಣ (ರೂಪಕವಾಗಿ ಸಹ) : left his rival in possession of the field ಎದುರಾಳಿಗೆ ಕಣವನ್ನು ಬಿಟ್ಟುಕೊಟ್ಟನು, ಸೋತುಬಿಟ್ಟನು.
  4. ಕದನ; ಕಾಳಗ; ಯುದ್ಧ; ಸಂಗ್ರಾಮ: hard-fought field ಉಗ್ರಕಾಳಗ; ಬಿರುಸಿನ ಕದನ.
  5. (ಕ್ರಿಕೆಟ್‍, ಕಾಲ್ಚೆಂಡು, ಮೊದಲಾದ ಆಟಗಳ) ಮೈದಾನ; ಬಯಲು.
  6. ಆಟದ ಮೈದಾನದ ಆಕ್ರಮಣಕಾರಿ ಯಾ ರಕ್ಷಣಾತ್ಮಕ ಆಟ ಆಡುವ ಭಾಗ.
  7. ಇಂಥ ಕಡೆಗಳಲ್ಲಿ ನಿಲ್ಲಿಸಿರುವ ಆಟಗಾರ(ರು).
  8. (ಬಯಲಿನ ಕ್ರೀಡಾಸ್ಪರ್ಧೆಗಳಲ್ಲಿನ) ಆಟಗಾರರು; ಕ್ರೀಡಾಪಟುಗಳು.
  9. ಎಲ್ಲಾ ಸ್ಪರ್ಧಿಗಳು.
  10. ನಿರ್ದಿಷ್ಟ ಆಟಗಾರರನ್ನು ಬಿಟ್ಟು ಉಳಿದ ಹುರಿಯಾಳುಗಳು: a good field ಅನೇಕ ಸಮರ್ಥ ಹುರಿಯಾಳುಗಳು.
  11. (ಕ್ರಿಕೆಟ್‍) ಹೀಲ್ಡ್‍ ಮಾಡುವವ; ಆಟ ಕಾಯುವ ಪಕ್ಷದವರಲ್ಲೊಬ್ಬ.
  12. (ಕ್ರಿಕೆಟ್‍) ಹೀಲ್ಡ್‍ ಮಾಡುವ ಪಕ್ಷ; ಆಟ ಕಾಯುವ ಪಕ್ಷ.
  13. (ಸಮುದ್ರ, ಆಕಾಶ, ನೀರ್ಗಲ್ಲು, ಹಿಮ, ಮೊದಲಾದವುಗಳ) ವಿಸ್ತಾರ; ಹರವು (ರೂಪಕವಾಗಿ ಸಹ): the whole field of history ಚರಿತ್ರೆಯ ಒಟ್ಟು ವಿಸ್ತಾರ.
  14. (ವಂಶಲಾಂಛನ ವಿದ್ಯೆ) ಗುರಾಣಿಯ ಮೇಲ್ಮೈ; ಗುರಾಣಿಯ ಒಡಲು.
  15. (ವಂಶಲಾಂಛನ ವಿದ್ಯೆ) ಗುರಾಣಿಯ ಭಾಗವೊಂದರ ಮೇಲ್ಮೈ.
  16. (ಚಿತ್ರ, ನಾಣ್ಯ, ಬಾವುಟ, ಮೊದಲಾದವುಗಳ) ಹಿನ್ನೆಲೆ; ನೆಲಗಟ್ಟು; ತಳಪಾಯ.
  17. (ಕಾರ್ಯಾಚರಣೆ, ವೀಕ್ಷಣೆ, ಬೌದ್ಧಿಕ ಚಟುವಟಿಕೆ, ಮೊದಲಾದವುಗಳ ವ್ಯಾಪ್ತಿಗೆ ಒಳಪಟ್ಟ) ಕ್ಷೇತ್ರ; ರಂಗ: each supreme in his own field ಒಬ್ಬೊಬ್ಬನೂ ತನ್ನತನ್ನ ಕ್ಷೇತ್ರದಲ್ಲಿ ಅಸಮಾನನಾಗಿ. filled the field of the telescope ದೂರದರ್ಶಕದ ದೃಷ್ಟಿಕ್ಷೇತ್ರವನ್ನೆಲ್ಲ ತುಂಬಿತು. wide field of vision ವಿಶಾಲ ದೃಷ್ಟಿಕ್ಷೇತ್ರ.
  18. ಕ್ಷೇತ್ರ:
    1. ವಿದ್ಯುತ್‍, ಗುರುತ್ವಾಕರ್ಷಣ, ಕಾಂತ, ಮೊದಲಾದ ಪ್ರಭಾವವಿರುವ ಪ್ರದೇಶ: outside the magnetic field ಕಾಂತೀಯ ಕ್ಷೇತ್ರದ ಆಚೆ, ಹೊರಗಡೆ.
    2. ವಿದ್ಯುತ್‍, ಗುರುತ್ವಾಕರ್ಷಣೆ, ಮೊದಲಾದ ಪ್ರಭಾವವಿರುವಿಕೆ.
    3. ವಸ್ತುವಿನ ಮೇಲೆ ವಿದ್ಯುತ್‍, ಗುರುತ್ವಾಕರ್ಷಣಶಕ್ತಿ, ಮೊದಲಾದವು ಬೀರುವ ಪ್ರಭಾವ.
ನುಡಿಗಟ್ಟು
  1. a fair field and no favour ಸಮಾನ ನಿಯಮಗಳ ಸ್ಪರ್ಧೆ; ಪಕ್ಷಪಾತವಿಲ್ಲದ ಸ್ಪರ್ಧೆ.
  2. a good field ಒಳ್ಳೆಯ ಅನೇಕ ಮಂದಿ ಸ್ಪರ್ಧಾಳುಗಳು.
  3. field of honour
    1. ದ್ವಂದ್ವಯುದ್ಧ ನಡೆಯುವ ಕಣ, ಕಳ, ಪ್ರದೇಶ.
    2. ರಣರಂಗ; ಯುದ್ಧಭೂಮಿ.
  4. hold the field (ಕಳವನ್ನು, ಸ್ಥಾನವನ್ನು) ಬಿಟ್ಟುಕೊಡದಿರು; ಪ್ರದೇಶವನ್ನು ವಶದಲ್ಲಿಟ್ಟುಕೊಂಡಿರು, ಕಳೆದುಕೊಳ್ಳದಿರು.
  5. in the field
    1. ಕಾಳಗ ಮಾಡುತ್ತಾ.
    2. (ಕೆಲಸದ ಕೇಂದ್ರ, ಪ್ರಯೋಗಾಲಯ, ಮೊದಲಾದವುಗಳ) ಹೊರಗೆ ಕೆಲಸ ಮಾಡುತ್ತಾ.
  6. keep the field ಕಾಳಗ ಮುಂದುವರಿಸು.
  7. play the field (ಅಮೆರಿಕನ್‍ ಪ್ರಯೋಗ, ಆಡುಮಾತು) ಒಂದಕ್ಕೇ – ಅಂಟಿಕೊಳ್ಳದಿರು, ಜೋತುಬೀಳದಿರು; ಒಂದೇ ಧ್ಯೇಯ, ವ್ಯಕ್ತಿ, ಮೊದಲಾದವುಗಳಿಗೆ ಬದ್ಧವಾಗದಿರು; ಅನೇಕ ಧ್ಯೇಯಗಳು, ವ್ಯಕ್ತಿಗಳು, ಮೊದಲಾದವಕ್ಕೆ ತನ್ನನ್ನು ಅರ್ಪಿಸಿಕೊ.
  8. take the fields ಕದನ ಪ್ರಾರಂಭಿಸು; ಕಾಳಗ ಆರಂಭಮಾಡು; ಕಣಕ್ಕಿಳಿ.