See also 1even  2even  3even
4even ಈವನ್‍
ಸಕರ್ಮಕ ಕ್ರಿಯಾಪದ
  1. ಸಮಮಟ್ಟವಾಗಿಸು; ಸಮತಟ್ಟಾಗಿಸು; ಒಂದೇ ಮಟ್ಟವಾಗಿ ಮಾಡು: even surface of the soil with a spade ಗುದ್ದಲಿಯಿಂದ ನೆಲದ ಮೇಲ್ಭಾಗವನ್ನು ಸಮಮಟ್ಟಮಾಡು.
  2. (ಪ್ರಾಚೀನ ಪ್ರಯೋಗ) ಸರಿಸಮವೆಂದು, ಎಣೆಯೆಂದು — ಪರಿಗಣಿಸು: we cannot even the two poets in any way ಆ ಇಬ್ಬರು ಕವಿಗಳನ್ನು ಯಾವ ರೀತಿಯಲ್ಲೂ ಸರಿಸಮರೆಂದು ಎಣಿಸಲಾಗದು.
  3. ಸರಿಸಮಗೊಳಿಸು; ಸಮಮಾಡು.
ಅಕರ್ಮಕ ಕ್ರಿಯಾಪದ

ಸಮಗೊಳ್ಳು; ಸರಿಸಮವಾಗು; ಅಸಮತೆ ನಿವಾರಣೆಯಾಗು: the racing odds evened before the race ಪಂದ್ಯದ ಅಸಮತೆಯು ಪಂದ್ಯಕ್ಕೆ ಮುಂಚೆಯೇ ನಿವಾರಣೆಯಾಯಿತು.

ನುಡಿಗಟ್ಟು
  1. even up ಸರಿತೂಗಿಸು; ಸಮಗೊಳಿಸು: to even up the accounts ಲೆಕ್ಕಾಚಾರಗಳನ್ನು ಸರಿತೂಗಿಸಲು.
  2. even up on (ಅಮೆರಿಕನ್‍ ಪ್ರಯೋಗ) ಮುಯ್ಯಿ ತೀರಿಸು; ಮುಯ್ಯಿಗೆ ಮುಯ್ಯಿಮಾಡು; (ಒಬ್ಬನಿಗೆ) ಹಿಂದಿರುಗಿಸಿ ಕೊಡು; ಪ್ರತೀಕಾರ ಮಾಡು.