See also 1even  3even  4even
2even ಈವನ್‍
ಗುಣವಾಚಕ
( ತರರೂಪ evener, ತಮರೂಪ evenest).
  1. ಸಮಮಟ್ಟವಾದ; ಸಮತಲವಾದ; ಸಪಾಟ; ಸಮತಿಟ್ಟಿನ; ಏರುಪೇರಿಲ್ಲದ; ಸಮವಾದ.
  2. ನಯವಾದ; ನುಣಪಾದ.
  3. ಏಕಪ್ರಕಾರದ; ಏಕರೂಪವಾದ; ಏಕರೀತಿಯ; ಸ್ವರೂಪ, ಗುಣ ಯಾ ಕ್ರಿಯೆಯಲ್ಲಿ — ಒಂದೇ ಸಮನಾದ, ವ್ಯತ್ಯಾಸವಾಗದ.
  4. ಸಮರೇಖೀಯ; ಸಮತಲೀಯ; (ಇನ್ನೊಂದರೊಡನೆ) ಅದೇ ಸಮತಲದಲ್ಲಿ ಯಾ ಅದೇ ರೇಖೆಯಲ್ಲಿ ಇರುವ.
  5. ಸಮತೂಕದ; ಸಮತೋಲನದ; ಸಮದೃಷ್ಟಿಯ: even handed justice ಸಮದೃಷ್ಟಿಯ, ನಿಷ್ಪಕ್ಷಪಾತವಾದ ನ್ಯಾಯ.
  6. ಸರಿಸಮನಾದ; ಸಮಭಾಗದ; ಸಂಖ್ಯೆಯಲ್ಲಿ ಯಾ ಮೊತ್ತದಲ್ಲಿ ಸರಿಸಮನಾದ: it was divided into three even parts ಅದನ್ನು ಮೂರು ಸಮಭಾಗ ಮಾಡಲಾಯಿತು.
  7. (ಮನುಷ್ಯ, ಪ್ರಕೃತಿ, ಮೊದಲಾದವುಗಳ ವಿಷಯದಲ್ಲಿ) ಸಮಸ್ಥಿತಿಯ; ಸಮತೆಯ; ಪ್ರಶಾಂತ; ಅಕ್ಷುಬ್ಧ.
  8. (ಸಂಖ್ಯೆಯ ವಿಷಯದಲ್ಲಿ) ಸಮ; ಸರಿ; ಎರಡರಿಂದ ಭಾಗವಾಗುವ.
  9. ಸಮಸಂಖ್ಯೆಯ: on the even pages of a book ಗ್ರಂಥದ ಸಮಸಂಖ್ಯೆಯ ಪುಟಗಳಲ್ಲಿ.
  10. (ಹಣ, ಕಾಲ, ಮೊದಲಾದವುಗಳ ವಿಷಯದಲ್ಲಿ) ಪೂರ್ಣಾಂಕಗಳಲ್ಲಿ ಹೇಳಬಹುದಾದ; ಚಿಲ್ಲರೆ ಇಲ್ಲದ; ಬರಾಬರಿ; ಬಟು: an even hundred ಬರಾಬರಿ ನೂರು. an even mile ಬರಾಬರಿ ಒಂದು ಮೈಲಿ.
ಪದಗುಚ್ಛ
  1. odd and even ಸಂಭಾವ್ಯತೆ ಮೇಲೆ ನಿರ್ಧಾರವಾಗುವ ಆಟ, ಪಂದ್ಯ.
  2. of even date (ನ್ಯಾಯಶಾಸ್ತ್ರ ಮತ್ತು ವ್ಯಾಪಾರದಲ್ಲಿ) ಅದೇ ತೇದಿಯ, ದಿನಾಂಕದ, ತಾರೀಖಿನ.
  3. on an even keel
    1. (ಹಡಗಿನ, ವಿಮಾನದ ವಿಷಯದಲ್ಲಿ) ಒಂದೇ ಮಟ್ಟದಲ್ಲಿ; ಏರುಪೇರಿಲ್ಲದೆ.
    2. (ರೂಪಕವಾಗಿ) ಸಮಸ್ಥಿತಿಯಲ್ಲಿ; ಏಕಪ್ರಕಾರವಾಗಿ; ವ್ಯತ್ಯಾಸವಾಗದೆ.
ನುಡಿಗಟ್ಟು
  1. be or get even with ಹಗೆ, ಸೇಡು — ತೀರಿಸಿಕೊ.
  2. even break (ಆಡುಮಾತು) (ಯಾವುದೇ ವಿದ್ಯಮಾನ ನಡೆಯುತ್ತದೆ ಯಾ ನಡೆಯುವುದಿಲ್ಲ ಎಂಬುದರ ಬಗ್ಗೆ) ಸರಿಸಮ ಅವಕಾಶ.
  3. even chance (ಸೋಲು ಯಾ ಗೆಲುವಿಗೆ) ಸಮಾನ ಅವಕಾಶ; ಸರಿಸಮ ಅವಕಾಶ.