See also 1even  2even  4even
3even ಈವನ್‍
ಕ್ರಿಯಾವಿಶೇಷಣ
  1. (ವಾಸ್ತವಾಂಶಗಳಿಂದ ಸೂಚಿತವಾದ ಅನುಮಿತಿ ಹಾಗಿರಲಿ, ವಾಸ್ತವಾಂಶಗಳನ್ನೇ ಒಬ್ಬನು ಒಪ್ಪಿಕೊಳ್ಳುವುದಿಲ್ಲ ಎನ್ನುವ ಅರ್ಥದಲ್ಲಿ) -ಊ; ಕೂಡ; ಸಹ: he disputes even the fact ಅವನು ವಾಸ್ತವಾಂಶಗಳನ್ನೂ ಪ್ರಶ್ನಿಸುತ್ತಾನೆ, I never even opened that book ನಾನು ಆ ಪುಸ್ತಕವನ್ನು (ಓದುವುದು ಹಾಗಿರಲಿ) ತೆರೆದು ಕೂಡ ನೋಡಲಿಲ್ಲ. does he even suspect the danger? ಅವನಿಗೆ ಅಪಾಯದ ಅರಿವು ಹಾಗಿರಲಿ, ಅಪಾಯವಿದೆಯೆಂಬ ಬಗ್ಗೆಯೂ ಸಂಶಯವಿದೆಯೇ? even if my watch is right, we shall be late ಒಂದು ವೇಳೆ ನನ್ನ ಗಡಿಯಾರ ಸರಿಯಾಗಿದ್ದರೂ (ಅದು ತಡವಾಗಿ ನಡೆಯುತ್ತಿದ್ದರೂ) ನಾವು ಹೊತ್ತು ಮೀರಿ ಹೋಗುತ್ತೇವೆ. this applies even more to French than to English (ಇಂಗ್ಲಿಷ್‍ ಹ್ರೆಂಚ್‍ ಎರಡಕ್ಕೂ ಒಂದೇ ಸಮನಾಗಿ ಅನ್ವಯಿಸುವುದಿಲ್ಲ — ಎನ್ನುವ ಅರ್ಥದಲ್ಲಿ) ಇದು ಇಂಗ್ಲಿಷಿಗಿಂತ ಹೆಚ್ಚಾಗಿ ಹ್ರೆಂಚಿಗೇ ಅನ್ವಯಿಸುತ್ತದೆ.
  2. (ಪ್ರಾಚೀನ ಪ್ರಯೋಗ) ಹೆಚ್ಚು ಕಡಮೆಯಿಲ್ಲದೆ; ಸರಿಯಾಗಿ; ಅಂತೆಯೇ; ಅಷ್ಟೇ: it was even so ಅದು ಸರಿಯಾಗಿತ್ತು, ಅಂತೆಯೇ ಇತ್ತು.
  3. (ಗುರುತನ್ನು ಒತ್ತಿಹೇಳುವಾಗ) ಅಂದರೆ: God, even our own God ದೇವರು, ಅಂದರೆ, ನಮ್ಮ ದೇವರು ಕೂಡ.
ಪದಗುಚ್ಛ
  1. even now ಈಗಲೂ; ಈ ಕ್ಷಣದಲ್ಲೂ.
  2. even (quite) so ಅಂತಿದ್ದರೂ; ಹಾಗಿದ್ದರೂ: it has many omissions; even so it is a useful reference book ಅದರಲ್ಲಿ, ಎಷ್ಟೋ ವಿಷಯಗಳು ಬಿಟ್ಟುಹೋಗಿವೆ; ಹಾಗಿದ್ದರೂ ಅದೊಂದು ಉಪಯುಕ್ತವಾದ ಪರಾಮರ್ಶನ ಗ್ರಂಥ.