See also 2dirty  3dirty
1dirty ಡರ್ಟಿ
ಗುಣವಾಚಕ
  1. ಕೊಳಕಾದ; ಹೊಲಸಾದ; ಮಲಿನ; ಮೈಲಿಗೆಯ; ಕಸದಿಂದ ಕೂಡಿದ; ಕಸ ತುಂಬಿದ; ಕಸದಂಥ.
  2. ಅಶುದ್ಧ; ಅಶುಚಿ; ಚೊಕ್ಕಟವಾಗಿಲ್ಲದ.
  3. ಅಶ್ಲೀಲ; ಅಸಭ್ಯ; ಅವಾಚ್ಯ; ಹಲ್ಕ; ಹೊಲಸು.
  4. ನೀಚ; ಹೀನ; ಅಧಮ; ಕುತ್ಸಿತ; ಜಘನ್ಯ; ಕೀಳಾದ; ಕ್ಷುದ್ರ; ತುಚ್ಛ; ಹೇಯವಾದ; ಹೇಸಿಗೆ ಬರಿಸುವ; ತಿರಸ್ಕಾರ ಉಂಟುಮಾಡುವ.
  5. ಹೆಣಗೆಲಸದ; ಕತ್ತೆಚಾಕರಿಯ; ಗುಲಾಮಚಾಕರಿಯ: do person’s dirty work for him ಒಬ್ಬನಿಗೆ ಅವನು ಮಾಡಬೇಕಾದ ಕತ್ತೆಚಾಕರಿಯನ್ನೆಲ್ಲ ಮಾಡು.
  6. ಅನ್ಯಾಯಾರ್ಜಿತ; ಅನ್ಯಾಯವಾಗಿ ಸಂಪಾದಿಸಿದ.
  7. (ಹವಾಮಾನ) ವಿಷಮ; ಬಿರುಗಾಳಿ ಮತ್ತು ಮಳೆಯಿಂದ ಕೂಡಿದ.
  8. (ಬಣ್ಣ) ಶುದ್ಧವಲ್ಲದ; ತಿಳಿಯಲ್ಲದ; ಕಪ್ಪು ಯಾ ಕಂದು ಛಾಯೆ ಇರುವ.
  9. (ಆಡುಮಾತು) (ಬೈಜಿಕ ಅಸ್ತ್ರದ ವಿಷಯದಲ್ಲಿ) ಸಾಕಷ್ಟು ದೂಳುಗರೆಯುವ; ದೂಳೀಪಟವಾಗುವ; ಪರಮಾಣು ಯಾ ಹೈಡ್ರೊಜನ್‍ ಬಾಂಬಿನ ಸಿಡಿತದಿಂದಾಗಿ ಗಾಳಿಯಲ್ಲಿ ಹರಡಿ ಅನಂತರ ಸಾಕಷ್ಟು ವಿಕಿರಣಪಟು ಕಣಗಳು ದೂಳಾಗಿ ಉದುರುವ.
ಪದಗುಚ್ಛ
  1. dirty dog (ಅಶಿಷ್ಟ) ಕೊಳಕುನಾಯಿ; ಹೊಲಸುನಾಯಿ; ನೀಚ ಯಾ ಅಪ್ರಾಮಾಣಿಕ ವ್ಯಕ್ತಿ.
  2. dirty look (ಆಡುಮಾತು) ಅಸಮ್ಮತಿ ನೋಟ; ಜುಗುಪ್ಸೆಯ ನೋಟ; ಒಪ್ಪದೆ ಇರುವದನ್ನು ಯಾ ಜುಗುಪ್ಸೆಯನ್ನು ತೋರಿಸುವ ನೋಟ.
  3. dirty money ಕೊಳಕು ಹಣ; ಕೊಳಕು ವಸ್ತುಗಳನ್ನು ಮುಟ್ಟಿ ಕೆಲಸ ಮಾಡುವವನಿಗೆ ಕೊಡುವ ಹಣ.
  4. dirty work
    1. ಕೊಳಕು ಕೆಲಸ; ಹೊಲಸು ಕೆಲಸ.
    2. ಹೀನಕಾರ್ಯ; ಕೀಳುಗೆಲಸ.
    3. ಹೊಲೆಗೆಲಸ; ಮೋಸ; ವಂಚನೆ; ಮುಖ್ಯವಾಗಿ ಅಪ್ರಾಮಾಣಿಕ ವರ್ತನೆ.
    4. ದುಡಿತ; ಗುಲಾಮಚಾಕರಿ.
  5. dirty trick ತುಚ್ಛಕೆಲಸ; ಹೀನಕಾರ್ಯ; ನೀಚಗೆಲಸ.
  6. dirty word
    1. ಅಶ್ಲೀಲ ಪದ; ಹೊಲಸು ಶಬ್ದ.
    2. ಅಗೌರವ ಪದ; ಅಪಮಾನಕರವೆಂದು ಭಾವಿಸಿರುವ ಅರ್ಥವನ್ನು ಸೂಚಿಸುವ ಪದ.
ನುಡಿಗಟ್ಟು
  1. dirty end of the stick (ಆಡುಮಾತು) (ಯಾವುದೇ ಪರಿಸ್ಥಿತಿಯ) ಕ್ಲಿಷ್ಟವಾದ ಯಾ ಅಹಿತವಾದ ಭಾಗ.
  2. do the dirty (ಅಶಿಷ್ಟ) ನೀಚ ರೀತಿಯಲ್ಲಿ ಮೋಸಗೊಳಿಸು.