See also 1cramp  2cramp  3cramp
4cramp ಕ್ರಾಂಪ್‍
ಸಕರ್ಮಕ ಕ್ರಿಯಾಪದ
  1. ಇಕ್ಕಟ್ಟಿನಲ್ಲಿರಿಸು; ಇಡುಕು.
  2. (ಶಕ್ತಿ, ಬೆಳವಣಿಗೆ, ಚಲನೆ ಮೊದಲಾದವನ್ನು) ತಡೆ; ಅಡ್ಡಿಪಡಿಸು; ನಿರ್ಬಂಧಿಸು; ನಿಗ್ರಹಿಸು: all these difficulties cramped his progress ಈ ಕಷ್ಟಗಳೆಲ್ಲ ಅವನ ಪ್ರಗತಿಯನ್ನು ತಡೆದುವು.
  3. ಕ್ರ್ಯಾಂಪು ಹಾಕು; ಬಿಗಿಪಟ್ಟಿಯಿಂದ–ಬಂಧಿಸು, ಕೂಡಿಸು, ಭದ್ರಪಡಿಸು.
ಪದಗುಚ್ಛ

cramp up = 4cramp(1).

ನುಡಿಗಟ್ಟು

cramp person’s style (ಆಡುಮಾತು) ಒಬ್ಬ ವ್ಯಕ್ತಿಯ ಚಲನವಲನಗಳನ್ನು, ಕಾರ್ಯಗಳನ್ನು–ತಡೆ, ಕಟ್ಟಿಹಾಕು, ನಿರ್ಬಂಧಿಸು; ಸ್ವತಂತ್ರವಾಗಿ ವರ್ತಿಸಲು, ಕೆಲಸಮಾಡಲು ಅವಕಾಶ ಕೊಡದಿರು.