See also 2cramp  3cramp  4cramp
1cramp ಕ್ರಾಂಪ್‍
ನಾಮವಾಚಕ
  1. (ಥಟ್ಟನೆ ತಗಲುವ ಶೀತ, ಶ್ರಮ ಮೊದಲಾದವುಗಳಿಂದ ಆಗುವ) ಮಾಂಸಖಂಡದ–ಸೆಳೆತ, ಸೆಟೆತ, ಹಿಡಿತ, ಸೆಡೆತ, ಸೇದು: often suffers from cramp ಪದೇಪದೇ ಸೇದಿನಿಂದ ನರಳುತ್ತಾನೆ(ಳೆ). a cramp in the leg ಕಾಲುಸೆಡೆತ.
  2. (ಸಾಮಾನ್ಯವಾಗಿ ಬಹುವಚನದಲ್ಲಿ) ಹೊಟ್ಟೆನುಲಿತ; ಹೊಟ್ಟೆಯಲ್ಲಿ ಹಿಂಡಿದಂತಾಗುವ ಬಾಧೆ.
  3. (ಬಹುವಚನದಲ್ಲಿ) ಗರ್ಭ ನುಲಿತ; ಗರ್ಭಕೋಶದ ಸಂಕೋಚನೆ; ಹೆಂಗಸು ಮುಟ್ಟಾದಾಗ ಯಾ ಹೆರುವಾಗ ಆಗುವ ಗರ್ಭಕೋಶದ ಮಾಂಸಖಂಡಗಳ–ಹಿಂಡಿಕೆ, ಸಂಕೋಚನೆ.
  4. (ಅತಿಯಾದ ಶ್ರಮದಿಂದ ಆಗುವ) ಕೈಸೆಡೆತ; ಕೈವಟ್ಟೆ; ಕೈಜಡತೆ.