2clap
ಕ್ಲಪ್
ಸಕರ್ಮಕ ಕ್ರಿಯಾಪದ
- ಚಪ್ಪಾಳೆ ಹೊಡೆದು ಒಪ್ಪಿಗೆ ಸೂಚಿಸು.
- (ಸ್ನೇಹ, ಮೆಚ್ಚಿಗೆ, ಸಂತೋಷ ಸೂಚಿಸಲು ಯಾ ಸಂಕೇತಸೂಚಕವಾಗಿ) ಚಪ್ಪಾಳೆ–ತಟ್ಟು, ಹೊಡೆ.
- (ರೆಕ್ಕೆಗಳನ್ನು) ರಪರಪನೆ–ಬಡಿ, ಹೊಡೆ, ಬಾರಿಸು.
- ಬೇಗನೆ ಯಾ ಬಲಪ್ರಯೋಗದಿಂದ (ವ್ಯಕ್ತಿಯನ್ನು ಜೈಲಿಗೆ, ಸರಕಿನ ಮೇಲೆ ತೆರಿಗೆ) ಹಾಕು, ಇಡು, ಹೇರು.
- ರಪ್ಪನೆ–ಇಡು, ಬಡಿ, ಬಿಸಾಡು, ಎಸೆ: he clapped the book on the table ಅವನು ಪುಸ್ತಕವನ್ನು ಮೇಜಿನ ಮೇಲೆ ಬಡಿದನು.
- (ಸ್ನೇಹ, ಉತ್ತೇಜನ ಮೊದಲಾದವನ್ನು ತೋರಿಸಲು) ತಟ್ಟು; ಮೃದುವಾಗಿ ಪೆಟ್ಟು ಕೊಡು.
ಅಕರ್ಮಕ ಕ್ರಿಯಾಪದ
- ಒಂದಕ್ಕೊಂದು ಬಡಿ, ಸದ್ದಾಗುವಂತೆ ತಾಗು: the loose shutters clapped against the house ಸಡಿಲವಾಗಿರುವ ಕದಗಳು ಮನೆಗೆ ಬಡಿಯುತ್ತಿದ್ದವು.
- ದಢಾರನೆ ಹಾಕಿಕೊ; ದಢೀರನೆ ಮುಚ್ಚಿಕೊ: the windows clapped shut ಕಿಟಕಿಗಳು ದಢೀರನೆ ಮುಚ್ಚಿಕೊಂಡವು.
- (ಮೆಚ್ಚುಗೆ, ಒಪ್ಪಿಗೆ ಸೂಚಿಸಲು) ಚಪ್ಪಾಳೆ–ತಟ್ಟು, ಹಾಕು: the audience clapped ಪ್ರೇಕ್ಷಕರು ಚಪ್ಪಾಳೆ ತಟ್ಟಿದರು.
ಪದಗುಚ್ಛ
- clap duty on goods ಇದ್ದಕ್ಕಿದ್ದಂತೆ ಸರಕಿನ ಮೇಲೆ ಸುಂಕ ಹೇರು, ಹಾಕು.
- clap eyes on (ಆಡುಮಾತು) (ಸಾಮಾನ್ಯವಾಗಿ ನಿಷೇಧ ಪ್ರಯೋಗದಲ್ಲಿ) ನೋಡು; ಕಣ್ಣುಹಾಯಿಸು; ದೃಷ್ಟಿ–ಹಾಕು, ಬೀರು.
- clap on all sail ಹಡಗಿಗೆ ಎಲ್ಲ ಹಾಯಿಗಳನ್ನೂ ಸಿದ್ಧಗೊಳಿಸು.
- clap one’s hands = 2clap ($1$, $2$).
- clap person in jail ವ್ಯಕ್ತಿಯನ್ನು ಜೈಲಿಗೆ–ಹಾಕು, ದಬ್ಬು, ತಳ್ಳು, ನೂಕು.
- clap spurs to horse ಕುದುರೆ ಪಕ್ಕಗಳನ್ನು–ತಿವಿ, ಚಪ್ಪರಿಸು, ತಟ್ಟು.
- clap up bargain ಅವಸರದಲ್ಲಿ ವ್ಯಾಪಾರ ಮುಗಿಸು, ತೀರಿಸು.
- clap up peace ಹಿಂದುಮುಂದು ನೋಡದೆ ಸಂಧಿ ಮಾಡಿಕೊ.
ನುಡಿಗಟ್ಟು
- clap on the back = $^2$slap on the back.
- clapped out (ಅಶಿಷ್ಟ) ಸುಸ್ತಾಗಿ ಹೋದ; ಉಸಿರು ಉಡುಗಿದ; ತುಂಬ ಆಯಾಸಗೊಂಡ.