See also 1base  2base
3base ಬೇಸ್‍
ಗುಣವಾಚಕ
  1. (ಹಿಂದೆ) ಕುರುಚಾದ; ಕುಳ್ಳಾದ; ಗಿಡ (ಈಗ ಸಸ್ಯಗಳ ಹೆಸರುಗಳಲ್ಲಿ ಮಾತ್ರ ಬಳಕೆ): base rocket ಕುರುಚಾದ ರಾಕೆಟ್‍ (ಸಸ್ಯ).
  2. ನೀಚ; ಹೀನ; ಹಲ್ಕ; ಗೌರವಾರ್ಹವಲ್ಲದ; ಅಯೋಗ್ಯ; ಅಲ್ಪ; ತುಚ್ಛ; ನಿಕೃಷ್ಟ; ಹೇಯ.
  3. ಕೀಳು ಕೆಲಸದ; ಗುಲಾಮ ಚಾಕರಿಯ; ದಾಸ್ಯವೃತ್ತಿಯ: base employment ಗುಲಾಮ ಚಾಕರಿ.
  4. (ಭಾಷಾಶಾಸ್ತ್ರ) ಕ್ಲ್ಯಾಸಿಕಲ್‍ ಅಲ್ಲದ; ಅಭಿಜಾತವಲ್ಲದ; ಅಶುದ್ಧ; ಪರಿಷ್ಕಾರವಿಲ್ಲದ: base Latin ಅಶುದ್ಧ ಲ್ಯಾಟಿನ್‍ ಭಾಷೆ.
  5. ಕೆಳಮಟ್ಟದ; ತೀರ ಸಾಧಾರಣವಾದ.
  6. ಖೋಟಾ; ಬೆರಕೆಯ: base coin
    1. ಖೋಟಾ ನಾಣ್ಯ.
    2. ಬೆರಕೆ ಲೋಹಗಳಿಂದ ಮಾಡಿದ ನಾಣ್ಯ.
  7. (ನ್ಯಾಯಶಾಸ್ತ್ರ) ಷರತ್ತಿಗೊಳಪಟ್ಟ; ಸೋಪಾಧಿಕ; ಪತ್ರದಲ್ಲಿ ನಮೂದಿಸಿರುವ ಷರತ್ತುಗಳನ್ನು ಪೂರೈಸಿದರೆ ಮಾತ್ರ ದೊರಕುವ, ಒದಗುವ.