See also 2base  3base
1base ಬೇಸ್‍
ನಾಮವಾಚಕ
  1. ಅವಲಂಬನ; ಆಧಾರ; ಆಸರೆ; ವಸ್ತು ಯಾ ವಿಷಯ ಯಾವುದರ ಮೇಲೆ ನಿಂತಿದೆಯೋ ಯಾ ಅವಲಂಬಿಸಿದೆಯೋ ಅದು.
  2. ತಳ; ಪಾಯ; ಅಸ್ತಿಭಾರ; ಅಡಿಪಾಯ; ತಳಹದಿ.
  3. ಮೂಲತತ್ತ್ವ; ಮೂಲಾಧಾರ; ನೆಲೆಗಟ್ಟು.
  4. ಆದಿ; ಮೂಲ; ಪ್ರಾರಂಭ; ಕೆಲಸ ಯಾ ಎಣಿಕೆ ಪ್ರಾರಂಭಿಸುವ ಎಡೆ.
  5. (ವಾಸ್ತುಶಿಲ್ಪ) ಸುಣ್ಣಪಾದ; ಪೀಠಕ್ಕೂ ಕಂಬಕ್ಕೂ ನಡುವಣ ಕಂಬದ ಭಾಗ.
  6. (ಸಸ್ಯವಿಜ್ಞಾನ, ಜೀವವಿಜ್ಞಾನ) ಅಂಗಮೂಲ; ಅವಯವದ, ಅಂಗದ – ಮೂಲ, ಬುಡ; ಅಂಗ ಯಾ ಅಂಗ ಭಾಗವು ಪ್ರಧಾನ ಭಾಗಕ್ಕೆ ಸೇರಿರುವ ಕೊನೆ.
  7. (ಜ್ಯಾಮಿತಿ) (ಸಮತಲವಾಗಲಿ, ಘನಾಕೃತಿಯಾಗಲಿ ನಿಂತಿರುವ) ತಳರೇಖೆ; ಆಧಾರ ರೇಖೆ; ಆಧಾರ ತಲ; base of a triangle ತ್ರಿಕೋಣದ ತಳ ರೇಖೆ.
  8. (ರಸಾಯನವಿಜ್ಞಾನ) ಪ್ರತ್ಯಾಮ್ಲ; ಆಮ್ಲಗಳೊಂದಿಗೆ ವರ್ತಿಸಿ ಲವಣವನ್ನೂ ನೀರನ್ನೂ ಉತ್ಪತ್ತಿ ಮಾಡುವ ಸ್ವಭಾವಸಿದ್ಧ ರಾಸಾಯನಿಕ ಗುಣವುಳ್ಳ ಸಂಯುಕ್ತ.
  9. (ಸೈನ್ಯದ ಯಾ ಅನ್ವೇಷಣ ಯಾತ್ರೆಯ)
    1. ಹಿಂಬೀಡು; ಮೂಲಠಾಣ್ಯ; ಬೇಕಾದ ಸಾಮಾನು ಸರಂಜಾಮು, ಆಸ್ಪತ್ರೆ, ಮೊದಲಾದವುಗಳು ಇರುವ, ಸೇನೆಯ ಯಾ ಅನ್ವೇಷಣ ತಂಡದ ಹಿಂಭಾಗದಲ್ಲಿರುವ ನಗರ ಯಾ ಪ್ರದೇಶ.
    2. ಕಾರ್ಯಾಚರಣೆ ಕೇಂದ್ರ; ಕಾರ್ಯಕೇಂದ್ರ; ಮೂಲ ಯಾ ಕೇಂದ್ರ ಕಾರ್ಯಸ್ಥಾನ.
  10. (ಸರ್ವೆ) ಜ್ಯಾಮಿತೀಯ ಆಧಾರ ರೇಖೆ.
  11. (ಗಣಿತ) ಆಧಾರ; ಮೂಲ ಸಂಖ್ಯೆ; ಆಧಾರ ಸಂಖ್ಯೆ; ಲಾಗರಿತಮ್‍ಗಳ ಗಣನೆಯಲ್ಲಿ ಯಾವ ಸಂಖ್ಯೆಯ ಘಾತವನ್ನು ಪರಿಗಣಿಸುವೆವೋ ಆ ಸಂಖ್ಯೆ.
  12. (ಯಾವುದೇ ಮಿಶ್ರಣದ) ಮುಖ್ಯ ಘಟಕ; ಪ್ರಧಾನಾಂಶ.
  13. (ಬೇಸ್‍ಬಾಲ್‍ ಆಟದಲ್ಲಿ) ಗೊತ್ತು; ರನ್ನು ಗಳಿಸಲು ಒಂದರಿಂದ ಓಡಿ ನಿಲ್ಲಬೇಕಾದ ನಾಲ್ಕು ನಿರ್ದಿಷ್ಟ ಜಾಗಗಳಲ್ಲಿ ಒಂದು.
  14. (ಹಾಕಿ ಮೊದಲಾದ ಆಟಗಳಲ್ಲಿ) ಗೋಲು; ನೆಲೆ; ಕಟ್ಟೆ.
  15. (ವ್ಯಾಕರಣ) ಧಾತು; ಪ್ರಕೃತಿ; ಪ್ರತ್ಯಯಗಳನ್ನು ಹಚ್ಚಬಹುದಾದ ಮೂಲ ಪದಾಂಶ.
  16. (ವಂಶಲಾಂಛನ ವಿದ್ಯೆ) (ಗುರಾಣಿಯ) ತಳ; ಕೆಳಭಾಗ; ಬುಡ.
  17. (ಚಿತ್ರಣ) ಬೇಸು; (ಬಣ್ಣ ಮಾಸಿ ಹೋಗದೆ ನಿಲ್ಲುವಂತೆ ಮಾಡುವ) ಗಚ್ಚು; ಬಣ್ಣ ಗಚ್ಚು.
  18. (ಬಣ್ಣ ಬಳಿಯುವುದರಲ್ಲಿ) ತಳ ಬಳಿತ; ಮೊದಲ ಯಾ ಆಧಾರ – ಲೇಪ; ತಳಲೇಪ.
  19. ಆಧಾರ; ಛಾಯಾಚಿತ್ರ ಫಿಲ್ಮಿಗೆ ಬಳಸುವ ಪಾರದರ್ಶಕ ಆಧಾರ ಯಾ ಛಾಯಾಚಿತ್ರ ಕಾಗದದ ಆಧಾರ.
  20. ಬೇಸ್‍; ಟ್ರಾನ್ಸಿಸ್ಟರಿನ ಮೂರು ಇಲೆಕ್ಟ್ರೋಡುಗಳಲ್ಲಿ ಮಧ್ಯದ್ದು.
ನುಡಿಗಟ್ಟು
  1. get to first base (ರೂಪಕವಾಗಿ) (ಯಾವುದನ್ನೇ ಸಾಧಿಸುವಲ್ಲಿ) ಯಶಸ್ವಿಯಾದ ಮೊದಲ ಹೆಜ್ಜೆ ಇಡು; ಮೊದಲ ಘಟ್ಟ ಸಾಧಿಸು.
  2. off base
    1. (ಬೇಸ್‍ಬಾಲ್‍ ಆಟದಲ್ಲಿ) ಗೊತ್ತು ಮುಟ್ಟದೆ ಯಾ ತಲುಪದೆ.
    2. (ರೂಪಕವಾಗಿ) ಪೂರ್ತಿ ತಪ್ಪು ತಿಳಿದುಕೊಂಡು ಯಾ ತಪ್ಪಾಗಿ ಗ್ರಹಿಸಿ.
    3. (ರೂಪಕವಾಗಿ) ಹಠಾತ್ತಾಗಿ; ಅನಿರೀಕ್ಷಿತವಾಗಿ; ಮುನ್ನೆಚ್ಚರಿಕೆ ಕೊಡದೆ.