See also 2zero  3zero
1zero ಸಿಅರೋ
ನಾಮವಾಚಕ

(ಬಹುವಚನ zeros).

  1. ಸೊನ್ನೆ; ಶೂನ್ಯ.
  2. ಸೊನ್ನೆ ಪ್ರಮಾಣ; ಸೊನ್ನೆ ಸಂಖ್ಯೆ.
  3. ಸೊನ್ನೆ; ಧನಮೊತ್ತ ಮತ್ತು ಋಣಮೊತ್ತಗಳನ್ನು ಲೆಕ್ಕ ಹಾಕುವ ಮಾಪಕದಲ್ಲಿನ ಪ್ರಾರಂಭ ಬಿಂದು.
  4. ತಟ್ಟತಳ; ಅತ್ಯಂತ ಕೆಳಬಿಂದು; ಶುದ್ಧ ಶೂನ್ಯ; ನಗಣ್ಯವಾದದ್ದು; ಗಣನೆಗೆ ಬಾರದ್ದು.
  5. = zero-hour.
ಪದಗುಚ್ಛ

absolute zero ಶಾಖಕ್ಕೆ ಕಾರಣವಾದ ಅಣುಚಲನೆ ಸಂಪೂರ್ಣವಾಗಿ ನಿಂತುಹೋಗಿರುವಾಗಿನ ಶಾಖ: $-273.15^\circ{\rm C}$.

See also 1zero  3zero
2zero ಸಿಅರೋ
ಗುಣವಾಚಕ

ಶೂನ್ಯಮೌಲ್ಯದ; ಶೂನ್ಯಪ್ರಮಾಣದ; ಅಭಾವದ; ರಹಿತವಾದ: zero population growth ಶೂನ್ಯಪ್ರಮಾಣದ ಜನಸಂಖ್ಯಾವರ್ಧನೆ; ಜನಸಂಖ್ಯೆಯ ಬೆಳವಣಿಗೆಯ, ಹೆಚ್ಚಳದ ಅಭಾವ.

See also 1zero  2zero
3zero ಸಿಅರೋ
ಸಕರ್ಮಕ ಕ್ರಿಯಾಪದ
  1. (ಯಂತ್ರ ಸಲಕರಣೆ ಮೊದಲಾದವನ್ನು) ಸೊನ್ನೆ ಬಿಂದುವಿಗೆ ತಿರುಗಿಸು, ಅಳವಡಿಸು.
  2. ಬಂದೂಕ ಹಾರಿಸಲು ಅದರ ಲಕ್ಷ್ಯಕ್ಕೆ ಸರಿಯಾಗಿ ಗುರಿ ಸಿದ್ಧಪಡಿಸು, ಅಳವಡಿಸು.
ಪದಗುಚ್ಛ

zero in on

  1. (ಲಕ್ಷ್ಯ ಮೊದಲಾದವುಗಳತ್ತ) ಗುರಿ ಇಡು.
  2. ಗಮನವನ್ನು, ಲಕ್ಷ್ಯವನ್ನು ಕೇಂದ್ರೀಕರಿಸು.