would ವುಡ್‍, ವಡ್‍ ಸಹಾಯಕ
ಕ್ರಿಯಾಪದ

(ಪ್ರಥಮ ಪುರುಷ ಏಕವಚನ would) (will ಕ್ರಿಯಾಪದದ ಭೂತರೂಪ). (ಮುಖ್ಯವಾಗಿ ಕೆಳಗಿನ ಸಂದರ್ಭಗಳಲ್ಲಿ ಬಳಕೆ):

  1. ದ್ವಿತೀಯ ಮತ್ತು ಪ್ರಥಮ ಪುರುಷಗಳಲ್ಲಿ, ಮತ್ತು ಕೆಲವೊಮ್ಮೆ ಉತ್ತಮ ಪುರುಷದಲ್ಲೂ ಸಹ = should(1):
    1. ಪರೋಕ್ಷ ವರದಿಯಲ್ಲಿ: he said he would be home by evening ಸಾಯಂಕಾಲದ ಹೊತ್ತಿಗೆ ಮನೆಗೆ ಬರುವೆನೆಂದು ಅವನು ಹೇಳಿದ.
    2. ಸಂಭಾವನಾಸೂಚಕ ಕ್ರಿಯೆಯನ್ನು ಸೂಚಿಸಲು: they would have been killed if they had gone ಒಂದು ವೇಳೆ ಅವರು ಹೋಗಿದ್ದಿದ್ದರೆ ಅವರು ಕೊಲೆಯಾಗುತ್ತಿದ್ದರು.
  2. ರೂಢಿಯ ಯಾ ದಿನಂಪ್ರತಿಯ ಕೆಲಸವನ್ನು ಸೂಚಿಸಲು: would wait for her every evening ಪ್ರತಿದಿನ ಸಂಜೆ ಅವಳಿಗಾಗಿ ಕಾಯುತ್ತಿದ್ದ.
  3. ಪ್ರಶ್ನೆ ಯಾ ನಮ್ರ ಬೇಡಿಕೆಯನ್ನು ಸೂಚಿಸಲು: would they like it? ಅದನ್ನು ಅವರು ಇಷ್ಟಪಡುವರೇ? would you come in, please? ದಯವಿಟ್ಟು, ಒಳಗೆ ಬರುವಿರಾ?
  4. ಸಂಭವನೀಯತೆಯನ್ನು ಸೂಚಿಸಲು: I guess she would be over fifty by now ಸದ್ಯಕ್ಕೆ ಆಕೆ ಐವತ್ತನ್ನು ದಾಟಿದ್ದಾಳೆಂದು ನನ್ನ ಊಹೆ.
  5. (ಸಾಹಿತ್ಯಕ) ಇಷ್ಟವನ್ನು ಸೂಚಿಸಲು: would that you were here ನೀವು ಇಲ್ಲಿ ಇರುವಂತಾದರೆ ನನಗೆ ಚೆನ್ನಾಗಿರುತ್ತಿತ್ತು.
  6. ಒಪ್ಪಿಗೆಯನ್ನು ಸೂಚಿಸಲು: they would not help ಅವರು ಸಹಾಯ ಮಾಡುವುದಿಲ್ಲ, ಮಾಡಲೊಪ್ಪುವುದಿಲ್ಲ.