should ಷು(ಷ)ಡ್‍ ಸಹಾಯಕ
ಕ್ರಿಯಾಪದ
(ಪ್ರಥಮ ಪುರುಷ ಏಕವಚನ should; shall ಧಾತುವಿನ ಭೂತರೂಪ ಮತ್ತು ಭೂತಕೃದಂತ ರೂಪ.)

ಪ್ರಯೋಗ:

  1. ಪರೋಕ್ತ ಕಥನದಲ್ಲಿ, ಮುಖ್ಯವಾಗಿ ಕಥಕ ವ್ಯಕ್ತಿ ಉತ್ತಮ ಪುರುಷದಲ್ಲಿರುವಾಗ: I said I should be home by evening.
  2. ಕರ್ತವ್ಯವನ್ನು ಸೂಚಿಸಲು (=$^1$ought): I should tell you; you should have been more careful.
  3. ಸಲಹೆಗಳನ್ನು ಕೊಡಲು ಯಾ ಕೇಳಲು: I should like to say something.
  4. ಸಂಭವನೀಯವಾದುದನ್ನು ಸೂಚಿಸಲು: I should have been killed if I had gone. if you should see him.
  5. ಉದ್ದೇಶ ತಿಳಿಸಲು (= may, may): in order that we should not worry.
  6. ವಿನಯಪೂರ್ವಕವಾಗಿ ಕೋರಿಕೆ ಸಲ್ಲಿಸಲು ಯಾ ಯಾವುದನ್ನಾದರೂ ಸ್ವೀಕರಿಸಲು.
  7. (ಉತ್ತಮ ಪುರುಷದಲ್ಲಿ) ಊಹೆ ಯಾ ನಿರೀಕ್ಷೆ ತಿಳಿಸಲು.