See also 2video  3video
1video ವಿಡಿಓ
ನಾಮವಾಚಕ
(ಬಹುವಚನ videos).

ವಿಡಿಯೋ; ದೃಶ್ಯ :

  1. ಕಾಂತೀಯ ಪಟ್ಟಿಯ ಮೇಲೆ ಕಣ್ಣಿಗೆ ಕಾಣಿಸುವ ಬಿಂಬಗಳನ್ನು ದಾಖಲಿಸುವ, ಪುನರುತ್ಪತ್ತಿ ಮಾಡುವ ಯಾ ಪ್ರಸಾರ ಮಾಡುವ ಪ್ರಕ್ರಿಯೆ.
  2. ದೂರದರ್ಶನ ಪ್ರಸಾರದ ದೃಶ್ಯಭಾಗ.
  3. ವಿಡಿಯೊ ಪಟ್ಟಿಯ ಮೇಲೆ ದಾಖಲಿಸಿರುವ ಚಲನಚಿತ್ರ ಮೊದಲಾದವು.
  4. (ಆಡುಮಾತು) = video cassette recorder.
See also 1video  3video
2video ವಿಡಿಓ
ಗುಣವಾಚಕ

ವಿಡಿಯೋ; ದೃಶ್ಯ:

  1. ಕಾಂತೀಯ ಪಟ್ಟಿಯ ಮೇಲೆ ಕಣ್ಣಿಗೆ ಕಾಣಿಸುವ ಬಿಂಬಗಳನ್ನು ದಾಖಲಿಸುವುದಕ್ಕೆ ಯಾ ಪುನರುತ್ಪತ್ತಿ ಮಾಡುವುದಕ್ಕೆ ಯಾ ಪ್ರಸಾರ ಮಾಡುವುದಕ್ಕೆ ಸಂಬಂಧಿಸಿದ.
  2. ದೂರದರ್ಶನ ಚಲನಚಿತ್ರಗಳನ್ನು ಪ್ರಸಾರ ಮಾಡುವುದಕ್ಕೆ ಸಂಬಂಧಿಸಿದ.
See also 1video  2video
3video ವಿಡಿಓ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ videoes; ಭೂತರೂಪ ಮತ್ತು ಭೂತಕೃದಂತ videoed).

ವಿಡಿಯೋಕರಿಸು; ದೃಶ್ಯೀಕರಿಸು.