variety ವರೈಅಟಿ
ನಾಮವಾಚಕ
(ಬಹುವಚನ varieties).
  1. ಬಗೆಬಗೆ(ಯಾಗಿರುವುದು); ವಿವಿಧತೆ; ವೈವಿಧ್ಯ: variety of the scenery ಆ ದೃಶ್ಯಾವಳಿಯ ವೈವಿಧ್ಯ. Bangalore has the charm of variety ಬೆಂಗಳೂರು ನಗರಕ್ಕೆ ವೈವಿಧ್ಯದ ಮೋಹಕತೆ ಇದೆ.
  2. ಬಹುಮುಖತೆ: the variety of his conversation ಅವನ ಸಂಭಾಷಣೆಯಲ್ಲಿ ಕಂಡುಬರುವ ಬಹುಮುಖತೆ.
  3. ಬಗೆಬಗೆಯ, ವಿವಿಧ, ನಾನಾ ಬಗೆಯ – ವಸ್ತುಗಳು ಯಾ ವಿಷಯಗಳು ಯಾ ಅವುಗಳ ಸಮುದಾಯ: a variety of books ಬಗೆಬಗೆಯ ಪುಸ್ತಕಗಳು. a variety of reasons ನಾನಾ ಬಗೆಯ ಕಾರಣಗಳು.
  4. ವಿವಿಧ ವಿನೋದಾವಳಿ; ನೃತ್ಯ, ಗಾಯನ, ಹಾಸ್ಯಾಭಿನಯ, ಮೊದಲಾದವುಗಳ ಪ್ರದರ್ಶನ ಕಾರ್ಯಕ್ರಮ.
  5. (ಜೀವವಿಜ್ಞಾನ) ಉಪಜಾತಿ; ಸಾಮಾನ್ಯ ಲಕ್ಷಣಗಳಲ್ಲಿ ಪ್ರಧಾನ ಜಾತಿವೊಂದರಿಂದ ಭಿನ್ನವಾದ ಒಂದು ಉಪಜಾತಿ ಯಾ ಅದರಲ್ಲೊಂದು ಪ್ರಾಣಿ.
  6. (ಜೀವವಿಜ್ಞಾನ)
    1. ಉಪಜಾತಿ; ಒಂದೇ ಜಾತಿಗೆ ಸೇರಿದುದಾಗಿ, ಜಾತಿಯೊಳಗೆ ಪುನರುತ್ಪತ್ತಿ ಸಾಧ್ಯವಿರುವ, ಆದರೆ ಆನುವಂಶಿಕ ಲಕ್ಷಣಗಳು ಸ್ವಲ್ಪಮಟ್ಟಿಗೆ ಭಿನ್ನವಾಗಿರುವ ವ್ಯಕ್ತಿ ಯಾ ಗುಂಪು.
    2. = cultivar.