See also 2twinkle
1twinkle ಟ್ವಿಂಕ(ಕ್‍)ಲ್‍
ಸಕರ್ಮಕ ಕ್ರಿಯಾಪದ
  1. (ಕಣ್ಣುಗಳನ್ನು) ಮಿಟುಕು; ಪಿಳುಕಿಸು; ಮಿಟುಕಿಸು.
  2. (ಬೆಳಕು, ಸಂಜ್ಞಾದೀಪ, ಮೊದಲಾದವನ್ನು) ವೇಗವಾಗಿ ಮಿನುಗಿಸು; ಮಿಣುಕಿಸು.
ಅಕರ್ಮಕ ಕ್ರಿಯಾಪದ
  1. (ಬೆಳಕು, ನಕ್ಷತ್ರ, ಮೊದಲಾದವುಗಳ ವಿಷಯದಲ್ಲಿ) ಮಿನುಗು; ಮಿರುಗು; ಥಳಥಳಿಸು.
  2. (ನೃತ್ಯದಲ್ಲಿ ಕಾಲುಗಳು) ತಕತಕ ಕುಣಿ; ತಕತಕನೆ ಹೆಜ್ಜೆಹಾಕು; ವೇಗವಾಗಿ, ಹಗುರವಾಗಿ–ಚಲಿಸು.
  3. (ಕಣ್ಣುಗಳ ವಿಷಯದಲ್ಲಿ) (ತಮಾಷೆ ಮೊದಲಾದವನ್ನು ನೋಡುವಾಗ) ಸ್ಫುರಿಸು; ಥಳಥಳಿಸು; ಹೊಳೆ; ಮಿನುಗು.
See also 1twinkle
2twinkle ಟ್ವಿಂಕ(ಕ್‍)ಲ್‍
ನಾಮವಾಚಕ
  1. ಕಣ್ಣು ಮಿಟುಕು; ರೆಪ್ಪೆ ಹೊಡೆತ; ಮಿಟಿಮಿಟಿ ನೋಟ.
  2. (ಕಣ್ಣಿನ) ಮಿನುಗು; ಸ್ಫುರಣ: a mischievous twinkle ಕುಚೇಷ್ಟೆಯ ಮಿನುಗು.
  3. ಲಘು ಶೀಘ್ರಗತಿ, ಉದಾಹರಣೆಗೆ ನರ್ತನದಲ್ಲಿ ಪಾದಗಳ ಕ್ಷಿಪ್ರ ಚಲನೆ.
  4. ಮಿಣುಕು; ನಸುಹೊಳಪು.
ಪದಗುಚ್ಛ

in a twinkle ಒಂದು ಕ್ಷಣದಲ್ಲಿ; ಕಣ್ಣು ಮಿಟುಕಿಸುವಷ್ಟರಲ್ಲಿ; ಎವೆ ಮುಚ್ಚುವುದರಲ್ಲಿ.