tunic ಟ್ಯೂನಿಕ್‍
ನಾಮವಾಚಕ
  1. ಕಪನಿ(ಣಿ); ಪ್ರಾಚೀನ ಗ್ರೀಕರ ಯಾ ರೋಮನ್ನರ, ಮಂಡಿಯವರೆಗೆ ಬರುವ, ಮೋಟುತೋಳಿನ ಜುಬ್ಬ.
  2. (ನಡುವಿನ ಬಳಿ ನಿರಿಕಟ್ಟಿದ ಯಾ ನಡುಪಟ್ಟಿ ಹಾಕಿದ, ಸಡಿಲ) ರವಿಕೆ; ಗಿಡ್ಡ ಅಂಗಿ.
  3. = tunicle\((1)\).
  4. (ಸಿಪಾಯಿಯ ಯಾ ಪೊಲೀಸಿನವನ ಸಮವಸ್ತ್ರದ) ಗಿಡ್ಡ, ಗುತ್ತನೆಯ ಅಂಗಿ; ಕುಡುತ.
  5. (ಪ್ರಾಣಿವಿಜ್ಞಾನ) ಅಸ್ಸಿಡಿಯನ್‍ ಸಮುದ್ರಜೀವಿಯ (ಹೊರಭಾಗದಲ್ಲಿನ ರಬ್ಬರ್‍ನಂಥ) ಕವಚ.
  6. (ಸಸ್ಯವಿಜ್ಞಾನ)
    1. ಸಿಪ್ಪೆ; ಈರುಳ್ಳಿ, ಬೆಳ್ಳುಳ್ಳಿಯಂಥ ಗೆಡ್ಡೆಯ ಹೊರಪದರಗಳಲ್ಲೊಂದು.
    2. ಗೆಡ್ಡೆಯ ಗಟ್ಟಿ ಹೊರಪದರ, ಹೊರಪದರದ ಗಟ್ಟಿಭಾಗ.
  7. (ಅಂಗರಚನಾಶಾಸ್ತ್ರ) ಯಾವುದೇ ಅಂಗದ ಹೊದಿಕೆ, ಹೊರಪೊರೆ, ಆವರಣ ಕೋಶ.