See also 2tug
1tug ಟಗ್‍
ಸಕರ್ಮಕ ಕ್ರಿಯಾಪದ
  1. ಜಗ್ಗು; ಬಹಳ ಪ್ರಯತ್ನದಿಂದ, ಬಲವಾಗಿ–ಎಳೆ, ತುಯ್ಯಿ ( ಅಕರ್ಮಕ ಕ್ರಿಯಾಪದ ಸಹ): the child was tugging her toy cart round the garden ಮಗು ತನ್ನ ಆಟದ ಗಾಡಿಯನ್ನು ತೋಟದ ಸುತ್ತಲೂ ಬಲವಾಗಿ ಎಳೆದಾಡುತ್ತಿತ್ತು. how many recollections tugged at his heart! ಎಷ್ಟೊಂದು ನೆನಪುಗಳು ಅವನ ಹೃದಯವನ್ನು ಎಳೆದಾಡಿದವು!
  2. (ಹಡಗನ್ನು) ಜಗ್ಗುದೋಣಿಯಿಂದ, ಕರ್ಷಕನೌಕೆಯಿಂದ–ಎಳೆ.
See also 1tug
2tug ಟಗ್‍
ನಾಮವಾಚಕ
  1. ಎಳೆತ; ತುಯ್ತ: a good tug at the bell ಗಂಟೆಯ ಬಲವಾದ ಎಳೆತ.
  2. (ಭಾವದ) ಬಲವಾದ ಹಠಾತ್‍–ತುಯ್ತ, ಸೆಳೆತ, ಜಗ್ಗು: felt a tug at parting ಬೀಳ್ಕೊಡುವಾಗ ಹೃದಯವನ್ನು ಜಗ್ಗಿದಂತಾಯಿತು.
  3. ಜಗ್ಗುದೋಣಿ; ಕರ್ಷಕನೌಕೆ; ಇತರ ದೊಡ್ಡ ಹಡಗುಗಳನ್ನು ಯಾ ದೋಣಿಗಳನ್ನು ಎಳೆಯಲು ಬಳಸುವ ಬಲವಾದ, ಸಣ್ಣ ಆವಿದೋಣಿ.
  4. ಕರ್ಷಕವಿಮಾನ; ಎಂಜಿನ್ನು ಇಲ್ಲದ ಫಲಕ(ವಿಮಾನ)ವನ್ನು ಎಳೆಯುವ ವಿಮಾನ.
    1. (ಒಂಟಿ ಕುದುರೆ ಹಲ್ಲಣದಲ್ಲಿ) ಪಕ್ಕ ಮೂಕಿಯನ್ನು ಯಾ ಪಕ್ಕಮರವನ್ನು ತೂರುವ ಕುಣಿಕೆ.
    2. (ಜೋಡಿಕುದುರೆಗಾಡಿಯಲ್ಲಿ) ಎಳೆ ಸರಪಣಿ; ಪಟ್ಟಿಸರಪಣಿ.
ಪದಗುಚ್ಛ
  1. tug of love (ಆಡುಮಾತು) ಮಮತೆಯ ಜಗ್ಗಾಟ; (ವಿವಾಹ ವಿಚ್ಫೇದಿತ ಪತಿಪತ್ನಿಯರ ನಡುವೆ) ಮಗುವನ್ನು ಯಾರ ವಶದಲ್ಲಿಟ್ಟುಕೊಳ್ಳಬೇಕೆಂಬ ವಿವಾದ.
  2. tug of war
    1. ಜಗ್ಗಾಟ ಸ್ಪರ್ಧೆ; (ಹೊರಜಿ) ಎಳೆಯುವ ಸ್ಪರ್ಧೆ; ಒಂದು ಹಗ್ಗವನ್ನು ಒಂದು ಪಂಗಡದವರು ಒಂದು ತುದಿಯಲ್ಲೂ ಮತ್ತೊಂದು ಪಂಗಡದವರು ಇನ್ನೊಂದು ತುದಿಯಲ್ಲೂ ಹಿಡಿದು ಎಳೆಯುತ್ತ, ಎದುರು ಪಂಗಡದವರನ್ನು ನಡುಗೆರೆ ದಾಟಿಸಿ ತಮ್ಮ ಕಡೆಗೆ ಬರುವಂತೆ ಎಳೆಯುವ, ಒಂದು ಸ್ಪರ್ಧೆ.
    2. ಪ್ರಬಲವಾದ ಯಾ ನಿರ್ಣಾಯಕವಾದ ಹೋರಾಟ, ಸೆಣೆಸಾಟ.