See also 1tug
2tug ಟಗ್‍
ನಾಮವಾಚಕ
  1. ಎಳೆತ; ತುಯ್ತ: a good tug at the bell ಗಂಟೆಯ ಬಲವಾದ ಎಳೆತ.
  2. (ಭಾವದ) ಬಲವಾದ ಹಠಾತ್‍–ತುಯ್ತ, ಸೆಳೆತ, ಜಗ್ಗು: felt a tug at parting ಬೀಳ್ಕೊಡುವಾಗ ಹೃದಯವನ್ನು ಜಗ್ಗಿದಂತಾಯಿತು.
  3. ಜಗ್ಗುದೋಣಿ; ಕರ್ಷಕನೌಕೆ; ಇತರ ದೊಡ್ಡ ಹಡಗುಗಳನ್ನು ಯಾ ದೋಣಿಗಳನ್ನು ಎಳೆಯಲು ಬಳಸುವ ಬಲವಾದ, ಸಣ್ಣ ಆವಿದೋಣಿ.
  4. ಕರ್ಷಕವಿಮಾನ; ಎಂಜಿನ್ನು ಇಲ್ಲದ ಫಲಕ(ವಿಮಾನ)ವನ್ನು ಎಳೆಯುವ ವಿಮಾನ.
    1. (ಒಂಟಿ ಕುದುರೆ ಹಲ್ಲಣದಲ್ಲಿ) ಪಕ್ಕ ಮೂಕಿಯನ್ನು ಯಾ ಪಕ್ಕಮರವನ್ನು ತೂರುವ ಕುಣಿಕೆ.
    2. (ಜೋಡಿಕುದುರೆಗಾಡಿಯಲ್ಲಿ) ಎಳೆ ಸರಪಣಿ; ಪಟ್ಟಿಸರಪಣಿ.
ಪದಗುಚ್ಛ
  1. tug of love (ಆಡುಮಾತು) ಮಮತೆಯ ಜಗ್ಗಾಟ; (ವಿವಾಹ ವಿಚ್ಫೇದಿತ ಪತಿಪತ್ನಿಯರ ನಡುವೆ) ಮಗುವನ್ನು ಯಾರ ವಶದಲ್ಲಿಟ್ಟುಕೊಳ್ಳಬೇಕೆಂಬ ವಿವಾದ.
  2. tug of war
    1. ಜಗ್ಗಾಟ ಸ್ಪರ್ಧೆ; (ಹೊರಜಿ) ಎಳೆಯುವ ಸ್ಪರ್ಧೆ; ಒಂದು ಹಗ್ಗವನ್ನು ಒಂದು ಪಂಗಡದವರು ಒಂದು ತುದಿಯಲ್ಲೂ ಮತ್ತೊಂದು ಪಂಗಡದವರು ಇನ್ನೊಂದು ತುದಿಯಲ್ಲೂ ಹಿಡಿದು ಎಳೆಯುತ್ತ, ಎದುರು ಪಂಗಡದವರನ್ನು ನಡುಗೆರೆ ದಾಟಿಸಿ ತಮ್ಮ ಕಡೆಗೆ ಬರುವಂತೆ ಎಳೆಯುವ, ಒಂದು ಸ್ಪರ್ಧೆ.
    2. ಪ್ರಬಲವಾದ ಯಾ ನಿರ್ಣಾಯಕವಾದ ಹೋರಾಟ, ಸೆಣೆಸಾಟ.