See also 2tuck  3tuck
1tuck ಟಕ್‍
ಸಕರ್ಮಕ ಕ್ರಿಯಾಪದ
  1. (ಬಟ್ಟೆಯ ಅಂಚುಗಳನ್ನು ಯಾ ತುದಿಗಳನ್ನು) ಮಡಿಚು; ಕೂಡಿಸು; ಎಳೆದು ಬಿಗಿ.
  2. (ವಸ್ತುವಿನ) ತುದಿಯನ್ನು ಒಳತುರುಕು: tucked his shirt into his trousers ಷರ್ಟನ್ನು ಷರಾಯಿಯ ಒಳಕ್ಕೆ ತುರುಕಿದ.
    1. (ಬಟ್ಟೆ, ಉಡಿಗೆ, ಮೊದಲಾದವುಗಳಲ್ಲಿ) ಟಕ್ಕುಹಿಡಿ; ನಿರಿಗೆ–ಕಟ್ಟು, ಇಡು, ಹೊಲಿ.
    2. ನಿರಿಗೆ ಕಟ್ಟಿ–ಚಿಕ್ಕದು ಮಾಡು ಯಾ ಬಿಗಿಮಾಡು ಯಾ ಅಲಂಕಾರ ಮಾಡು.
  3. ಮಡಿಚು; ಮುದುರು; ಹುದುಗಿಸು: tucked his legs like a tailor ದರ್ಜಿಯ ಹಾಗೆ ಕಾಲು ಮುದುರಿಕೊಂಡ: tucked her legs under her ತನ್ನ ಕೆಳಗೆ ಕಾಲನ್ನು ಮುದುರಿಕೊಂಡಳು. the bird tucked its head under the wing ಪಕ್ಷಿ ರೆಕ್ಕೆಯ ಕೆಳಗೆ ತನ್ನ ತಲೆಯನ್ನು ಹುದುಗಿಸಿಕೊಂಡಿತು.
  4. (ವ್ಯಕ್ತಿಗೆ) ಹೊದ್ದಿಸು; ಬಟ್ಟೆಬರೆ ಸುತ್ತು: tucked himself up in bed ಹಾಸಿಗೆಯಲ್ಲಿ ಹೊದ್ದು ಮಲಗಿದ.
  5. (ಸಾಮಾನು ಮೊದಲಾದವನ್ನು, ನಿರ್ದಿಷ್ಟ ಜಾಗ, ರೀತಿ, ಮೊದಲಾದವುಗಳಲ್ಲಿ) ತುರುಕು; ಅಡಕು; ಒತ್ತಟ್ಟಿಗಿಡು; ತಳ್ಳು; ಒತ್ತರಿಸು: the map is tucked away in a pocket at the end of the book ಭೂಪಟವನ್ನು ಪುಸ್ತಕದ ತುದಿಯ ಮಡಿಕೆಯಲ್ಲಿ ಅಡಕಿಸಲಾಗಿದೆ. tucked it out of sight ಕಣ್ಣಿಗೆ ಕಾಣದಂತೆ ಅದನ್ನು ತಳ್ಳಿಟ್ಟ.
  6. (ಮೀನನ್ನು) ಮೊಗೆ ಬಲೆಯಿಂದ–ತೆಗೆದುಹಾಕು, ತೆಗೆದು ಖಾಲಿಮಾಡು.
  7. ಉದ್ದಿಷ್ಟ ಸ್ಥಳಕ್ಕೆ (ಚೆಂಡನ್ನು)ಹೊಡೆ.
ಪದಗುಚ್ಛ
  1. tuck away ಪುಷ್ಕಳವಾಗಿ ತಿನ್ನು; ಗಡದ್ದಾಗಿ ಊಟ ಮಾಡು: tucked it away ಭರ್ಜರಿಯಾಗಿ ಊಟ ಹೊಡೆದರು.
  2. tuck in (or into) = ಪದಗುಚ್ಛ \((1)\).
See also 1tuck  3tuck
2tuck ಟಕ್‍
ನಾಮವಾಚಕ
  1. ಮಡಿಕೆ; ನೆರಿಗೆ; ಟಕ್ಕು; ಬಟ್ಟೆ, ಉಡುಪು, ಮೊದಲಾದವುಗಳಲ್ಲಿ ಚಿಕ್ಕದು ಮಾಡಲು, ಬಿಗಿಗೊಳಿಸಲು ಯಾ ಅಲಂಕರಿಸಲು ಚಪ್ಪಟೆಯಾಗಿ ಹೊಲಿದ ಮಡಿಕೆ, ನಿರಿಗೆ.
  2. = tuck-net.
  3. (ನೌಕಾಯಾನ) ಹಲಗೆಗಳು ಸೇರುವ ಹಡಗಿನ ಹಿಂಭಾಗ.
  4. (ಬ್ರಿಟಿಷ್‍ ಪ್ರಯೋಗ) (ಆಡುಮಾತು) ತಿಂಡಿತಿನಿಸು (ಮುಖ್ಯವಾಗಿ ಮಕ್ಕಳು ತಿನ್ನುವ ರೊಟ್ಟಿಯಂಗಡಿಯ ಯಾ ಬೇಕರಿಯ ಪದಾರ್ಥಗಳು, ಮಿಠಾಯಿಗಳು).
  5. (ನೀರಿನಲ್ಲಿ ಮುಳುಗುವುದು, ಅಂಗಸಾಧನೆ, ಮೊದಲಾದವುಗಳಲ್ಲಿ) ಮಂಡಿಮಡಿಕೆ; ಮಂಡಿಗಳನ್ನು ಎತ್ತಿ ಮಡಚಿ, ಎದೆಯ ಮೇಲೆ ಅವುಕಿ, ಮೊಣಕಾಲುಗಳನ್ನು ಕೈಗಳಿಂದ ತಬ್ಬಿರುವ ಸ್ಥಿತಿ.
See also 1tuck  2tuck
3tuck ಟಕ್‍
ನಾಮವಾಚಕ

(ಪ್ರಾಚೀನ ಪ್ರಯೋಗ) ಶಬ್ದ; ತಾಡನ; ಬಡಿತದ ಸದ್ದು: tuck of drum ಮದ್ದಲೆಯ ಶಬ್ದ, ಹೊಡೆತ; ಭೇರಿತಾಡನ.