See also 1tuck  3tuck
2tuck ಟಕ್‍
ನಾಮವಾಚಕ
  1. ಮಡಿಕೆ; ನೆರಿಗೆ; ಟಕ್ಕು; ಬಟ್ಟೆ, ಉಡುಪು, ಮೊದಲಾದವುಗಳಲ್ಲಿ ಚಿಕ್ಕದು ಮಾಡಲು, ಬಿಗಿಗೊಳಿಸಲು ಯಾ ಅಲಂಕರಿಸಲು ಚಪ್ಪಟೆಯಾಗಿ ಹೊಲಿದ ಮಡಿಕೆ, ನಿರಿಗೆ.
  2. = tuck-net.
  3. (ನೌಕಾಯಾನ) ಹಲಗೆಗಳು ಸೇರುವ ಹಡಗಿನ ಹಿಂಭಾಗ.
  4. (ಬ್ರಿಟಿಷ್‍ ಪ್ರಯೋಗ) (ಆಡುಮಾತು) ತಿಂಡಿತಿನಿಸು (ಮುಖ್ಯವಾಗಿ ಮಕ್ಕಳು ತಿನ್ನುವ ರೊಟ್ಟಿಯಂಗಡಿಯ ಯಾ ಬೇಕರಿಯ ಪದಾರ್ಥಗಳು, ಮಿಠಾಯಿಗಳು).
  5. (ನೀರಿನಲ್ಲಿ ಮುಳುಗುವುದು, ಅಂಗಸಾಧನೆ, ಮೊದಲಾದವುಗಳಲ್ಲಿ) ಮಂಡಿಮಡಿಕೆ; ಮಂಡಿಗಳನ್ನು ಎತ್ತಿ ಮಡಚಿ, ಎದೆಯ ಮೇಲೆ ಅವುಕಿ, ಮೊಣಕಾಲುಗಳನ್ನು ಕೈಗಳಿಂದ ತಬ್ಬಿರುವ ಸ್ಥಿತಿ.