truth ಟ್ರೂತ್‍
ನಾಮವಾಚಕ
(ಬಹುವಚನ truths ಉಚ್ಚಾರಣೆ ಟೂತ್ಸ್‍(ದ್ಸ್‍))
  1. ಸತ್ಯತೆ; ಯಥಾರ್ಥತೆ; ಪ್ರಾಮಾಣ್ಯ; ನಿಜವಾಗಿರುವ ಯಾ ಪ್ರಾಮಾಣಿಕವಾಗಿರುವ ಗುಣ, ಸ್ಥಿತಿ: doubted the truth of the statement ಹೇಳಿಕೆಯ ಸತ್ಯತೆಯನ್ನು ಶಂಕಿಸಿದ.
  2. ನಿಜ; ಸತ್ಯ; ಯಥಾರ್ಥತೆ; ವಾಸ್ತವಿಕ ಸಂಗತಿ: tell us the whole truth ಸಂಪೂರ್ಣ ಸತ್ಯವನ್ನು (ಸತ್ಯಸಂಗತಿಯನ್ನು) ಹೇಳು.
  3. ನಿಜವೆಂದು ಪರಿಗೃಹೀತವಾಗಿರುವುದು, ಸ್ವೀಕೃತವಾಗಿರುವುದು: fundamental truths ಮೂಲಾಧಾರ(ವೆಂದು ಒಪ್ಪಿರುವ) ಸತ್ಯಗಳು.
  4. ಸರಿಯಾದ–ಆಕಾರ, ಹೊಂದಿಕೆ: wheel is out of truth ಚಕ್ರ ಸರಿಯಾಗಿಲ್ಲ, ಸರಿಯಾದ ಸ್ಥಾನದಲ್ಲಿಲ್ಲ.
ಪದಗುಚ್ಛ
  1. $^1$god’s truth.
  2. home truth ನೇರಸತ್ಯ; ಮುಚ್ಚುಮರೆಯಿಲ್ಲದೆ ಸ್ಪಷ್ಟವಾಗಿ ಪ್ರಕಟಿಸಿದ ಸತ್ಯ, ವಾಸ್ತವಿಕ ಸಂಗತಿ.
  3. in truth (ಸಾಹಿತ್ಯಕ) ದಿಟವಾಗಿ; ನಿಜವಾಗಿ; ಸತ್ಯವಾಗಿ.
  4. moment of truth.
  5. of a truth (ಪ್ರಾಚೀನ ಪ್ರಯೋಗ) ಸತ್ಯವಾಗಿ; ನಿಜವಾಗಿ.
  6. to tell the truth (or truth to tell) (ಸತ್ಯವನ್ನು ಒಪ್ಪಿಕೊಳ್ಳಲು ಪ್ರಾರಂಭಿಸಿದಾಗ) ನಿಜವಾಗಿ ಹೇಳುವುದಾದರೆ.