moment ಮೋಮಂಟ್‍
ನಾಮವಾಚಕ
  1. ಕ್ಷಣ; ಚಣ; ಗಳಿಗೆ; ಅತ್ಯಲ್ಪಾವಧಿ.
  2. ಸ್ವಲ್ಪಕಾಲ; ಅಲ್ಪಾವಧಿ: wait a moment ಸ್ವಲ್ವ ಕಾಲ ತಾಳು, ತಡೆ.
  3. ನಿರ್ದಿಷ್ಟ ಕಾಲ; ಖಚಿತವಾದ ಕಾಲ.
  4. ಪ್ರಾಮುಖ್ಯ; ಮಹತ್ತ್ವ: of no great moment ಅಂತಹ ಪ್ರಮುಖವಾದದ್ದೇನೂ ಅಲ್ಲದ.
  5. (ಭೌತವಿಜ್ಞಾನ) ಮಹತ್ತ್ವ:
    1. ಮುಖ್ಯವಾಗಿ ಒಂದು ಬಿಂದು ಯಾ ಅಕ್ಷದ ಸುತ್ತ ಚಲನೆಯುಂಟುಮಾಡುವ ಪ್ರತ್ತಿ ಯಾ ಅಳತೆ.
    2. ಬಲ ಮತ್ತು ಒಂದು ಬಿಂದುವಿನಿಂದ ಯಾ ಅಕ್ಷದಿಂದ ಇರುವ ದೂರ – ಇವುಗಳ ಗುಣಲಬ್ಧ.
ಪದಗುಚ್ಛ
  1. at the moment
    1. ಈಗ; ಸದ್ಯದಲ್ಲಿ : am busy at the moment ನಾನು ಸದ್ಯದಲ್ಲಿ ಬಹಳ ಕೆಲಸದಲ್ಲಿದ್ದೇನೆ.
    2. ಆಗ; ಆ ಹೊತ್ತಿನಲ್ಲಿ : was busy at the moment ಆಗ ಬಹಳ ಕೆಲಸದಲ್ಲಿದ್ದೆ.
  2. (ಒಂದು ಕ್ಷಣ ತಾಳು ಎಂಬುದರ ಅಧ್ಯಾಹಾರ ಪ್ರಯೋಗವಾಗಿ half a moment) ಅರ್ಧಕ್ಷಣ; ಅರೆಕ್ಷಣ.
  3. in a moment
    1. ಒಂದು ಕ್ಷಣದಲ್ಲಿ; ಕೂಡಲೇ.
    2. ಬೇಗನೆ.
  4. just a moment (ಒಂದು ಕ್ಷಣ ತಾಳು ಎಂಬುದರ ಅಧ್ಯಾಹಾರ ಪ್ರಯೋಗವಾಗಿ) ಒಂದು ಕ್ಷಣ ಮಾತ್ರ.
  5. man (or woman) of the moment ಈ ಯಾ ಆ ಸಮಯದಲ್ಲಿನ – ಪ್ರಮುಖ ವ್ಯಕ್ತಿ, ಮುಖಂಡ.
  6. moment of truth
    1. (ಸ್ಪೇನಿನ ಗೂಳಿ ಕಾಳಗದಲ್ಲಿ) ಗೂಳಿಯನ್ನು ಕತ್ತಿಯಿಂದ ಇರಿಯುವ ಕ್ಷಣ.
    2. ಪರೀಕ್ಷಾ ಕಾಲ; ಪರ್ವಕಾಲ; ಸಂಧಿಕಾಲ.
  7. not for a (or one) moment ಎಂದೆಂದಿಗೂ ಇಲ್ಲ.
  8. one moment (ಒಂದು ಕ್ಷಣ ತಾಳು ಎಂಬುದರ ಅಧ್ಯಾಹಾರ ಪ್ರಯೋಗವಾಗಿ) ಒಂದು ಕ್ಷಣ.
  9. the moment ತಕ್ಕ, ಅನುಕೂಲ – ಕಾಲ; ಅವಕಾಶ ಒದಗುವ ಕಾಲ, ಹೊತ್ತು, ಕ್ಷಣ.
  10. the very moment ಕೂಡಲೇ: came the very moment I heard of it ನಾನದನ್ನು ಕೇಳಿದ ಕೂಡಲೇ ಬಂದೆ.
  11. this moment ಈಗಲೇ; ಕೂಡಲೇ: come here this moment ಈ ಕ್ಷಣ ಇಲ್ಲಿಗೆ ಬಾ.
  12. to the moment ಆ ಕ್ಷಣಕ್ಕೆ, ಗಳಿಗೆಗೆ, ಹೊತ್ತಿಗೆ – ಸರಿಯಾಗಿ: timed it to the moment ಆ ಹೊತ್ತಿಗೆ ಸರಿಯಾಗಿ ನಡೆಯುವಂತೆ ಏರ್ಪಡಿಸಿದೆ.