See also 2truss
1truss ಟ್ರಸ್‍
ಸಕರ್ಮಕ ಕ್ರಿಯಾಪದ
  1. (ಸೇತುವೆ, ಚಾವಣಿ, ಮೊದಲಾದವಕ್ಕೆ) ಊರೆಕಟ್ಟು ಕೊಡು; ಆಸರೆಕಟ್ಟು ಹಾಕು.
  2. (ಬಿಗಿ ಪಟ್ಟಿ ಹಾಕಿ) ಬಿಗಿಸು; ಭದ್ರ ಮಾಡು.
  3. (ಅಡುಗೆ ಮಾಡುವ ಮೊದಲು, ಕೋಳಿ, ಮೊದಲಾದವುಗಳ) ರೆಕ್ಕೆಗಳನ್ನು ಕಟ್ಟು.
  4. (ಮನುಷ್ಯನ ತೋಳುಗಳನ್ನು) ಪಕ್ಕೆಗಳಿಗೆ ಸೇರಿಸಿ ಕಟ್ಟು, ಬಿಗಿ.
  5. (ಪ್ರಾಚೀನ ಪ್ರಯೋಗ)
    1. (ಉಡುಪು ಮೊದಲಾದವನ್ನು) ಸರಿಯಾಗಿ–ಬಿಗಿ, ಬಿಗಿಮಾಡು, ಕಟ್ಟು.
    2. (ಅಪರಾಧಿಯನ್ನು) ಗಲ್ಲಿಗೇರಿಸು; ನೇಣುಹಾಕು.
See also 1truss
2truss ಟ್ರಸ್‍
ನಾಮವಾಚಕ
  1. (ಚಾವಣಿ, ಸೇತುವೆ, ಮೊದಲಾದವುಗಳ) ಊರೆಕಟ್ಟು; ಆಸರೆ ಕಟ್ಟು; ಸರಕಟ್ಟು.
  2. (ಬ್ರಿಟಿಷ್‍ ಪ್ರಯೋಗ) (56ಪೌಂಡ್‍ ಯಾ 60ಪೌಂಡ್‍ ತೂಕದ) ಹಳೆಯ ಒಣಹುಲ್ಲು ಹೊರೆ ಯಾ (36ಪೌಂಡ್‍ ತೂಕದ) ಹೊಸ ಒಣಹುಲ್ಲು ಪಿಂಡಿ.
  3. ತುದಿಗೊಂಚಲು; ಕಾವಿನ ತುದಿಯಲ್ಲಿ ಒತ್ತಾಗಿರುವ ಹೂವಿನ ಯಾ ಹಣ್ಣಿನ ಗೊಂಚಲು.
  4. (ಗೋಡೆಯಿಂದ ಚಾಚಿದ, ಸ್ಮಾರಕ ಕಲ್ಲುರಚನೆ ಮೊದಲಾದವಕ್ಕೆ ಆಸರೆಯಾದ) ಬೋದಿಗೆ; ಬೋದಿಗೆ ಕೈ; ಊರೆಕಲ್ಲು.
  5. (ನೌಕಾಯಾನ) ಕೆಳದಿಮ್ಮಿಕಟ್ಟು; ಕೆಳದಿಮ್ಮಿಗಳನ್ನು ಕೂವೆಗೆ ಬಿಗಿಸುವ, ಕಬ್ಬಿಣದ ಕಟ್ಟು.
  6. (ಶಸ್ತ್ರವೈದ್ಯ) ಆಸರೆಕಟ್ಟು; ‘ಹರ್ನಿಯಾ’ ರೋಗಿಗೆ ಆಧಾರವಾಗಿ ಹಾಕುವ ಮೆತ್ತೆಕಟ್ಟು ಯಾ ಸ್ಪ್ರಿಂಗಿನ ಸುತ್ತುಪಟ್ಟಿ.