See also 1truss
2truss ಟ್ರಸ್‍
ನಾಮವಾಚಕ
  1. (ಚಾವಣಿ, ಸೇತುವೆ, ಮೊದಲಾದವುಗಳ) ಊರೆಕಟ್ಟು; ಆಸರೆ ಕಟ್ಟು; ಸರಕಟ್ಟು.
  2. (ಬ್ರಿಟಿಷ್‍ ಪ್ರಯೋಗ) (56ಪೌಂಡ್‍ ಯಾ 60ಪೌಂಡ್‍ ತೂಕದ) ಹಳೆಯ ಒಣಹುಲ್ಲು ಹೊರೆ ಯಾ (36ಪೌಂಡ್‍ ತೂಕದ) ಹೊಸ ಒಣಹುಲ್ಲು ಪಿಂಡಿ.
  3. ತುದಿಗೊಂಚಲು; ಕಾವಿನ ತುದಿಯಲ್ಲಿ ಒತ್ತಾಗಿರುವ ಹೂವಿನ ಯಾ ಹಣ್ಣಿನ ಗೊಂಚಲು.
  4. (ಗೋಡೆಯಿಂದ ಚಾಚಿದ, ಸ್ಮಾರಕ ಕಲ್ಲುರಚನೆ ಮೊದಲಾದವಕ್ಕೆ ಆಸರೆಯಾದ) ಬೋದಿಗೆ; ಬೋದಿಗೆ ಕೈ; ಊರೆಕಲ್ಲು.
  5. (ನೌಕಾಯಾನ) ಕೆಳದಿಮ್ಮಿಕಟ್ಟು; ಕೆಳದಿಮ್ಮಿಗಳನ್ನು ಕೂವೆಗೆ ಬಿಗಿಸುವ, ಕಬ್ಬಿಣದ ಕಟ್ಟು.
  6. (ಶಸ್ತ್ರವೈದ್ಯ) ಆಸರೆಕಟ್ಟು; ‘ಹರ್ನಿಯಾ’ ರೋಗಿಗೆ ಆಧಾರವಾಗಿ ಹಾಕುವ ಮೆತ್ತೆಕಟ್ಟು ಯಾ ಸ್ಪ್ರಿಂಗಿನ ಸುತ್ತುಪಟ್ಟಿ.