See also 2true  3true  4true
1true ಟ್ರೂ
ಗುಣವಾಚಕ
  1. ನಿಜವಾದ; ಸತ್ಯವಾದ; ದಿಟವಾದ; ವಾಸ್ತವವಾದ; ಯಥಾರ್ಥವಾದ: his story is true ಅವನ ಕಥೆ ನಿಜ.
  2. ಸಾಚಾ; ನಿಜವಾದ; ಅಸಲಿ; ಕೃತಕವಲ್ಲದ; ಹೆಸರಿಗೆ–ತಕ್ಕಂತಿರುವ, ಸರಿಯಾದ; ಖೋಟಾ ಅಲ್ಲದ: a true friend ನಿಜವಾದ ಮಿತ್ರ. the true heir to the throne ಸಿಂಹಾಸನಕ್ಕೆ ನಿಜವಾದ ವಾರಸುದಾರ. a true benefactor ನಿಜವಾದ ಹಿತಚಿಂತಕ.
  3. ವಿವೇಚನೆಯಿಂದ ಕೈಕೊಂಡ; ಸರಿಯಾದ; ನಿಷ್ಕೃಷ್ಟ, ನಿಖರ ಸೂತ್ರಗಳಿಗೆ ಅನುಸಾರವಾದ: could not form a true judgement ಸರಿಯಾದ ತೀರ್ಮಾನಕ್ಕೆ ಬರಲಾಗಲಿಲ್ಲ. a true aim ಸರಿಯಾದ ಗುರಿ. a true copy ನಿಷ್ಕೃಷ್ಟ ನಕಲು.
  4. (ಮಾದರಿ, ನಿರೀಕ್ಷೆ, ಮೊದಲಾದವಕ್ಕೆ) ಸರಿಹೊಂದುವ; ಕರಾರುವಾಕ್ಕಾದ; ಯಥಾವತ್ತಾದ: true to form ಆಕಾರಕ್ಕೆ ಸರಿಯಾದ.
  5. (ಧ್ವನಿಯ ವಿಷಯದಲ್ಲಿ) ಶ್ರುತಿಗೆ ಸರಿಯಾಗಿರುವ; ಸರಿಯಾಗಿ ಶ್ರುತಿಗೆ ಹೊಂದುವ.
  6. ನೆಚ್ಚಿಗೆಯ; ವಿಶ್ವಸನೀಯ; ನಿಷ್ಠೆಯ: true to one’s word ಮಾತಿಗೆ ತಪ್ಪದ; ಆಡಿದ ಮಾತನ್ನು ಉಳಿಸಿಕೊಳ್ಳುವ.
  7. (ಚಕ್ರ, ಕಂಬ, ತೊಲೆ, ಮೊದಲಾದವುಗಳ ವಿಷಯದಲ್ಲಿ) ಸರಿಯಾದ ಸ್ಥಾನದಲ್ಲಿರುವ; ಒಂದೇ ನೇರವಾಗಿರುವ; ನೆಟ್ಟಗಿರುವ; ಸಮವಾಗಿರುವ.
  8. (ಪ್ರಾಚೀನ ಪ್ರಯೋಗ) ನಿಜ ಹೇಳುವ; ನಿಜವನ್ನಾಡುವ; ಸತ್ಯವಾದಿಯಾದ.
  9. ಹೌದು; ದಿಟ; ಸರಿ: true, it would cost more ಹೌದು, ಅದು ಹೆಚ್ಚು ಬೆಲೆಯದಾಗಿರುತ್ತಿತ್ತು; ನಿಜ, ಅದಕ್ಕೆ ಇನ್ನೂ ಹೆಚ್ಚು ಬೆಲೆ ತಗಲುತ್ತಿತ್ತು.
ಪದಗುಚ್ಛ
  1. come true ನಿಜವಾಗು; ಸಂಭವಿಸು; ಸತ್ಯವಾಗು; ದಿಟವೆಂದು ಗೊತ್ತಾಗು.
  2. true horizon.
  3. it is true = 1true\((9)\).
  4. true north etc. ಭೌಗೋಳಿಕ(ವಾಗಿ), ಭೂಮಿಯ ಅಕ್ಷಕ್ಕನುಗುಣವಾಗಿ ಉತ್ತರ ದಿಕ್ಕು ಮೊದಲಾದವು (ಅಯಸ್ಕಾಂತ ಸೂಚಿತ ದಿಕ್ಕಲ್ಲ).
  5. out of (or the) true ಸರಿಯಾಗಿಲ್ಲದ; ಸರಿಯಾದ ಸ್ಥಾನದಲ್ಲಿಲ್ಲದ: the beam is out of true ತೊಲೆ ಸಮಮಟ್ಟದಲ್ಲಿಲ್ಲ, ಸರಿಯಾದ ಸ್ಥಾನದಲ್ಲಿಲ್ಲ.
  6. true to life ಯಥಾರ್ಥವಾದ; ಜೀವನವನ್ನು ಅದಿರುವಂತೆ ಪ್ರತಿಬಿಂಬಿಸುವ.
See also 1true  3true  4true
2true ಟ್ರೂ
ಕ್ರಿಯಾವಿಶೇಷಣ
  1. ನಿಜವಾಗಿ; ಸತ್ಯವಾಗಿ; ಪ್ರಾಮಾಣಿಕವಾಗಿ; ಯಥಾರ್ಥವಾಗಿ: tell me true ನಿಜವಾಗಿ ಹೇಳು.
  2. ಕರಾರುವಾಕ್ಕಾಗಿ; ನಿಖರವಾಗಿ; ಸರಿಯಾಗಿ; ತಪ್ಪಿ ಹೋಗದಂತೆ: aim true ಕರಾರುವಾಕ್ಕಾಗಿ ಗುರಿ ಇಡು.
  3. ವ್ಯತ್ಯಾಸವಿಲ್ಲದಂತೆ: breed true (ಆನುವಂಶಿಕ ಗುಣ ಮೊದಲಾದವುಗಳಿಂದ) ವ್ಯತ್ಯಾಸವಾಗದಂತೆ–ಹುಟ್ಟಿಸು, ಮರಿಹಾಕು, ಮೊಟ್ಟೆ ಇಡು.
ಪದಗುಚ್ಛ

$^3$ring true.

See also 1true  2true  4true
3true ಟ್ರೂ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ trues; ಭೂತರೂಪ ಮತ್ತು ಭೂತಕೃದಂತ

(ಆಯುಧ, ಚಕ್ರ, ಸಲಕರಣೆ, ಮೊದಲಾದವನ್ನು) ಸರಿಯಾದ ಸ್ಥಾನಕ್ಕೆ, ಆಕಾರಕ್ಕೆ–ತರು; ನೆಟ್ಟಗೆ ಮಾಡು; ನೇರವಾಗಿಡು; ಸಮವಾಗಿಡು.

See also 1true  2true  3true
4true ಟ್ರೂ
ನಾಮವಾಚಕ

ಪ್ರಾಮಾಣಿಕ ವ್ಯಕ್ತಿ (ಮುಖ್ಯವಾಗಿ ಸಂಪ್ರದಾಯನಿಷ್ಠ).