horizon ಹರೈಸನ್‍
ನಾಮವಾಚಕ
  1. ದಿಗಂತ; ಬಾನಂಚು; ಬಾನ್‍ಗೆರೆ; ಕ್ಷಿತಿಜ; ಭೂಮಿ ಆಕಾಶ ಸಂಧಿಸುವಂತೆ ಕಾಣುವ ರೇಖೆ.
  2. (ರೂಪಕವಾಗಿ) (ಪರಿಜ್ಞಾನ, ಅನುಭವ, ಆಸಕ್ತಿ, ಮೊದಲಾದವುಗಳ) ಅವಧಿ; ಮಿತಿ; ವ್ಯಾಪ್ತಿ, ಎಲ್ಲೆ.
  3. (ಭೂವಿಜ್ಞಾನ) ವಿಶಿಷ್ಟ ಸ್ತರ; ನಿರ್ದಿಷ್ಟ ಪದರ; ನಿರ್ದಿಷ್ಟ ಅವಧಿಯೊಂದರ ನಿಕ್ಷೇಪ ಮತ್ತು ಪಳೆಯುಳಿಕೆ ಮೊದಲಾದ ನಿರ್ದಿಷ ಲಕ್ಷಣಗಳಿಂದ ಕೂಡಿದ ಭೂಸ್ತರ, ಸ್ತರಗಳ ತಂಡ ಯಾ ಮಣ್ಣಿನ ಪದರ.
  4. (ಪ್ರಾಕ್ತನಶಾಸ್ತ್ರ) ನಿರ್ದಿಷ್ಟ ಗುಂಪಿಗೆ ಸೇರಿದ ಪ್ರಾಕ್ತನ ಅವಶೇಷಗಳು ದೊರೆಯುವ ಸ್ತರ; ಸಮಾನಾವಶೇಷ ಸ್ತರ; ಸಮಾನಶೇಷ ಸ್ತರ.
  5. (ಸಂವೇದನೆ, ಜ್ಞಾನ, ಮೊದಲಾದವುಗಳ) ಪರಿಧಿ; ವ್ಯಾಪ್ತಿ; ಎಲ್ಲೆ; ಗಡಿ.
ಪದಗುಚ್ಛ
  1. apparent horizon ತೋರಿಕೆಯ ದಿಗಂತ; ಗೋಚರ ಕ್ಷಿತಿಜ; ಶ್ಯ ಕ್ಷಿತಿಜ; ಕಣ್ಣಿಗೆ ಕಾಣುವಂತೆ ಭೂಮಿ ಮತ್ತು ಆಕಾಶಗಳು ಸೇರುವ ಗೆರೆಯು ರೂಪಿಸುವ ಸರಿಸುಮಾರಾದ ತ್ತ.
  2. celestial horizon ಖಾಗೋಳಿಕ ಕ್ಷಿತಿಜ; ಶ್ಯ ಕ್ಷಿತಿಜಕ್ಕೆ ಸಮಾಂತರವಾಗಿದ್ದು, ಭೂಕೇಂದ್ರದ ಮೂಲಕ ಹಾದುಹೋಗುವ ಖಾಗೋಳಿಕ ಮಹಾತ್ತ.
  3. rational horizon = ಪದಗುಚ್ಛ \((2)\).
  4. sensible horizon = ಪದಗುಚ್ಛ \((1)\).
  5. true horizon= ಪದಗುಚ್ಛ \((2)\).
  6. visible horizon= ಪದಗುಚ್ಛ \((1)\).
ನುಡಿಗಟ್ಟು

on the horizon (ಘಟನೆಗಳ ವಿಷಯದಲ್ಲಿ) ಸನ್ನಿಹಿತವಾಗಿರುವ; ಗೋಚರವಾಗುತ್ತಿರುವ; ಕಾಣಿಸಿಕೊಳ್ಳುತ್ತಿರುವ.