See also 2trouble
1trouble ಟ್ರಬ್‍(ಬ)ಲ್‍
ಸಕರ್ಮಕ ಕ್ರಿಯಾಪದ
  1. ತೊಂದರೆ, ತ್ರಾಸ, ಕಷ್ಟ, ಕ್ಲೇಶ–ಕೊಡು.
  2. ಕಲಕು; ಕ್ಷುಬ್ಧಗೊಳಿಸು; ವ್ಯಾಕುಲ, ಆತಂಕ, ಕಾತರ, ಕಳವಳ–ಉಂಟುಮಾಡು: troubled by debts ಸಾಲಗಳಿಂದ ಕಳವಳಪಟ್ಟು. troubled mind ಕಲಕಿದ, ಪ್ರಕ್ಷುಬ್ಧ ಮನಸ್ಸು.
  3. ಬಾಧಿಸು; ಯಾತನೆ ಉಂಟುಮಾಡು; ನರಳಿಸು; ನೋಯಿಸು: troubled with arthritis ಸಂಧಿವಾತದಿಂದ ಬಾಧೆಪಡುತ್ತಾ.
  4. (ಅನೇಕ ವೇಳೆ ಆತ್ಮಾರ್ಥಕ) ತೊಂದರೆಕೊಡು; ಅನನುಕೂಲ ಉಂಟುಮಾಡು ಯಾ ಶ್ರಮಕೊಡು: sorry to trouble you ನಿಮಗೆ ತೊಂದರೆ ಕೊಡುತ್ತಿರುವುದಕ್ಕೆ ಕ್ಷಮಿಸಿ. don’t trouble yourself ಅದರ ಬಗ್ಗೆ ತೊಂದರೆ ತೆಗೆದುಕೊಳ್ಳಬೇಡಿ. may I trouble you to translate this? ನಿಮಗೆ ಇದನ್ನು ಅನುವಾದ ಮಾಡುವ ಕಷ್ಟ ಕೊಡಬಹುದೆ?
ಅಕರ್ಮಕ ಕ್ರಿಯಾಪದ
  1. ಕಳವಳಪಡು; ಚಿಂತೆಗೀಡಾಗು: don’t trouble about it ಅದರ ಬಗ್ಗೆ ಚಿಂತೆಪಡಬೇಡ. a troubled countenance ಚಿಂತಾಕ್ರಾಂತ ಮುಖ.
  2. ತೊಂದರೆ–ಪಡು, ತೆಗೆದುಕೊ: don’t trouble to explain ವಿವರಣೆ ನೀಡಲು ತೊಂದರೆ ತೆಗೆದುಕೊಳ್ಳಬೇಡ.
See also 1trouble
2trouble ಟ್ರಬ್‍(ಬ)ಲ್‍
ನಾಮವಾಚಕ
  1. ಕಿರುಕುಳ; ತೊಂದರೆ; ಕ್ಲೇಶ; ಶ್ರಮ; ತ್ರಾಸ: has been through much trouble ಬಹಳ ತೊಂದರೆ ಅನುಭವಿಸಿದ್ದಾನೆ.
  2. (ಬಹುವಚನದಲ್ಲಿ) ಸಾರ್ವಜನಿಕ–ಗಲಾಟೆ, ಗಲಭೆಗಳು; ರಾಜಕೀಯ ಯಾ ಸಾಮಾಜಿಕ ಅಶಾಂತಿ, ಕ್ಷೋಭೆ.
  3. ತಾಂತ್ರಿಕ ತೊಂದರೆ, ಲೋಪ, ದೋಷ: engine trouble ಎಂಜಿನ್ನಿನ ತೊಂದರೆ.
  4. ರೋಗ; ಬಾಧೆ: suffers from kidney trouble ಮೂತ್ರಕೋಶದ ಬಾಧೆಯಿಂದ ನರಳುತ್ತಾನೆ.
  5. ಕಾಟ; ಪೀಡೆ; ಉಪದ್ರವ; ಕೋಟಲೆ.
  6. ಅನನುಕೂಲ; ಅಸೌಕರ್ಯ; ಫಜೀತಿ: did it to spare you trouble ನಿನಗೆ ಅನನುಕೂಲವಾಗದಿರಲೆಂದು ಹಾಗೆ ಮಾಡಿದೆ.
  7. ಅನನುಕೂಲದ ಕಾರಣ, ಮೂಲ; ತೊಂದರೆ: fear that the child is a great trouble to you ಮಗುವಿನಿಂದ ನಿನಗೆ ಬಹಳ ತೊಂದರೆಯಾಯಿತೆಂದು ತೋರುತ್ತದೆ.
  8. ಜಗಳ; ಕದನ; ಕಾದಾಟ; ಗಲಾಟೆ; ಗಲಭೆ: crowd trouble ಗುಂಪುಜಗಳ. don’t want any trouble ಯಾವ ಗಲಾಟೆಯೂ ಬೇಡ.
  9. ಜಗಳ; ಕಲಹ; ಭಿನ್ನಾಭಿಪ್ರಾಯ; ವೈಮನಸ್ಯ; ವಿರಸ; ವಿರೋಧ: is having trouble at home ಮನೆಯಲ್ಲಿ ವಿರಸ ಎದುರಿಸುತ್ತಿದ್ದಾನೆ, ವಿರೋಧ ಅನುಭವಿಸುತ್ತಿದ್ದಾನೆ.
ಪದಗುಚ್ಛ
  1. ask (or look) for trouble
    1. (ಆಡುಮಾತು) ತನ್ನ ಕಾರ್ಯ, ನಡವಳಿಕೆ, ಮೊದಲಾದವುಗಳಿಂದ ತಾನಾಗಿ ಕಷ್ಟ, ತೊಂದರೆ ತಂದುಕೊ; ತಂಟೆಗೆ ಸಿಕ್ಕಿಹಾಕಿಕೊ.
    2. ದುಡುಕು; ಒರಟಾಗಿ ಯಾ ಅವಿವೇಕದಿಂದ ವರ್ತಿಸು.
  2. be no trouble ತೊಂದರೆಯಾಗದಿರು; ಕಾಟ ಮೊದಲಾದವನ್ನು ಕೊಡದಿರು.
  3. give oneself the trouble ಏನನ್ನಾದರೂ ಮಾಡಲು ತೊಂದರೆ ತೆಗೆದುಕೊ, ಶ್ರಮವಹಿಸು.
  4. go to the (or some) trouble = ಪದಗುಚ್ಛ \((3)\).
  5. take (the) trouble = ಪದಗುಚ್ಛ \((3)\).
  6. get into trouble
    1. ತೊಂದರೆಗೆ ಸಿಕ್ಕಿಕೊ; ಫಜೀತಿ ತಂದುಕೊ.
    2. ಅಕ್ರಮವಾಗಿ ಬಸಿರಾಗು.
  7. in trouble
    1. ತೊಂದರೆಗೆ ಸಿಕ್ಕಿ; ಆಕ್ಷೇಪಣೆ, ಶಿಕ್ಷೆ, ಮೊದಲಾದವಕ್ಕೆ ಒಳಗಾಗಿ.
    2. (ಆಡುಮಾತು) ಅಕ್ರಮವಾಗಿ (ಮದುವೆ ಇಲ್ಲದೆ) ಬಸಿರಾಗಿ.
  8. make trouble ಗಲಾಟೆ ಮಾಡು; ಗಲಭೆ ನಡೆಸು; ವಿರಸವುಂಟುಮಾಡು.
  9. trouble and strife (ಬ್ರಿಟಿಷ್‍ ಪ್ರಯೋಗ) (ಪ್ರಾಸದ ಅಶಿಷ್ಟ) ಹೆಂಡತಿ.