See also 2trouble
1trouble ಟ್ರಬ್‍(ಬ)ಲ್‍
ಸಕರ್ಮಕ ಕ್ರಿಯಾಪದ
  1. ತೊಂದರೆ, ತ್ರಾಸ, ಕಷ್ಟ, ಕ್ಲೇಶ–ಕೊಡು.
  2. ಕಲಕು; ಕ್ಷುಬ್ಧಗೊಳಿಸು; ವ್ಯಾಕುಲ, ಆತಂಕ, ಕಾತರ, ಕಳವಳ–ಉಂಟುಮಾಡು: troubled by debts ಸಾಲಗಳಿಂದ ಕಳವಳಪಟ್ಟು. troubled mind ಕಲಕಿದ, ಪ್ರಕ್ಷುಬ್ಧ ಮನಸ್ಸು.
  3. ಬಾಧಿಸು; ಯಾತನೆ ಉಂಟುಮಾಡು; ನರಳಿಸು; ನೋಯಿಸು: troubled with arthritis ಸಂಧಿವಾತದಿಂದ ಬಾಧೆಪಡುತ್ತಾ.
  4. (ಅನೇಕ ವೇಳೆ ಆತ್ಮಾರ್ಥಕ) ತೊಂದರೆಕೊಡು; ಅನನುಕೂಲ ಉಂಟುಮಾಡು ಯಾ ಶ್ರಮಕೊಡು: sorry to trouble you ನಿಮಗೆ ತೊಂದರೆ ಕೊಡುತ್ತಿರುವುದಕ್ಕೆ ಕ್ಷಮಿಸಿ. don’t trouble yourself ಅದರ ಬಗ್ಗೆ ತೊಂದರೆ ತೆಗೆದುಕೊಳ್ಳಬೇಡಿ. may I trouble you to translate this? ನಿಮಗೆ ಇದನ್ನು ಅನುವಾದ ಮಾಡುವ ಕಷ್ಟ ಕೊಡಬಹುದೆ?
ಅಕರ್ಮಕ ಕ್ರಿಯಾಪದ
  1. ಕಳವಳಪಡು; ಚಿಂತೆಗೀಡಾಗು: don’t trouble about it ಅದರ ಬಗ್ಗೆ ಚಿಂತೆಪಡಬೇಡ. a troubled countenance ಚಿಂತಾಕ್ರಾಂತ ಮುಖ.
  2. ತೊಂದರೆ–ಪಡು, ತೆಗೆದುಕೊ: don’t trouble to explain ವಿವರಣೆ ನೀಡಲು ತೊಂದರೆ ತೆಗೆದುಕೊಳ್ಳಬೇಡ.